ಧನಂಜಯ್ ಡಾಲಿ ಚಿತ್ರ ಯಾವಾಗ ಸೆಟ್ಟೇರಲಿದೆ ಗೊತ್ತಾ!?

frame ಧನಂಜಯ್ ಡಾಲಿ ಚಿತ್ರ ಯಾವಾಗ ಸೆಟ್ಟೇರಲಿದೆ ಗೊತ್ತಾ!?

somashekhar

ಸ್ಯಾಂಡಲ್ ವುಡ್ ನಲ್ಲಿ ಡಾಲಿ ಎಂತಲೇ ಕರೆಯಲ್ಪಡುವ ಧನಂಜಯ್ ಇದೇಗ ಡಾಲಿ ಚಿತ್ರದಲ್ಲಿ ನಟನಾಗಿ ಡೈಲಾಗ್ ಹೊಡೆಯಲು ಸಿದ್ದರಾಗಿದ್ದಾರೆ. ಈ ಚಿತ್ರಕ್ಕೆ ಡಿಂಪಲ್ ಕ್ವೀನ್ ರಚಿತ ರಾಮ್ ಡಾಲಿಗೆ ನಾಯಕಿಯಾಗಿದ್ದಾರೆ. ಇದೀಗ ಈ ಚಿತ್ರ ಯಾವಾಗ ಸೆಟ್ಟೇರಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಅದು ಯಾವಾಗ ಸೆಟ್ಟೇರಲಿದೆ ಎಂಬುದು ನಾವ್ ಹೇಳ್ತೀವಿ ನೋಡಿ. 

ಧನಂಜಯ್‌ ನಟನೆಯ ಡಾಲಿ ಚಿತ್ರ ಡಿಸೆಂಬರ್‌ನಲ್ಲಿ ಸೆಟ್ಟೇರಲಿದೆ. ಟಗರು ಚಿತ್ರದಲ್ಲಿ ಡಾಲಿ ಹೆಸರಿನ ನೆಗೆಟಿವ್‌ ಕ್ಯಾರೆಕ್ಟರ್‌ನಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ ನಟ ಧನಂಜಯ್‌. ಈಗ ಅದೇ ಹೆಸರಿನಲ್ಲಿ ಚಿತ್ರ ಸೆಟ್ಟೇರುತ್ತಿದೆ. ಪ್ರಭು ಶ್ರೀನಿವಾಸ್‌ ಚಿತ್ರ ನಿರ್ದೇಶನ ಮಾಡಲಿದ್ದು, ಈಗಾಗಲೇ ಚಿತ್ರದಲ್ಲಿ ಧನಂಜಯ್‌ ಲುಕ್‌ ರಿವೀಲ್‌ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಸಿಕ್ಕಾಪಟ್ಟೆ ರಗಡ್‌ ಲುಕ್‌ನಲ್ಲಿ ವಯಲೆಂಟ್‌ ಆಗಿ ಅವರು ಕಾಣಿಸಿಕೊಂಡಿದ್ದಾರೆ.ಚಿತ್ರವನ್ನು ಬೆಂಗಳೂರು ಮಾತ್ರವಲ್ಲದೆ, ಕೋಲ್ಕೊತಾ, ಆಗ್ರಾ, ಲಖನೌ ಮತ್ತಿತರ ನಗರಗಳಲ್ಲಿ ಚಿತ್ರೀಕರಣ ಮಾಡಲು ಪ್ಲಾನ್‌ ಮಾಡಲಾಗಿದೆ. ಧನಂಜಯ್‌ ಈಗ ಯುವರತ್ನ, ಬಡವ ರಾಸ್ಕಲ್‌, ಪೊಗರು ಮತ್ತಿತರ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ವಿಲನ್ ಆಗಿ ಖಡಕ್ ಮತ್ತು ಖದರ್ ಆಗಿ ಡೈಲಾಗ್ ಹೊಡೆಯುವ ಧನಂಜಯ ಗೆ ಡಾಲಿ ಎಂತಲೇ ಕರೆಯುತ್ತಾರೆ. ವಿಲನ್ ಆಗಿ ಟಗರು ಚಿತ್ರದಲ್ಲಿ ಖಡಕ್ ಆಗಿ ಮಿಂಚಿದ್ದರು.ಆ ಪಾತ್ರದಿಂದ ಅವರ ಅಭಿಮಾನಿಗಳ ಸಂಖ್ಯೆಯೂ ದುಪ್ಪಾಟ್ಟಾಯಿತು. ಟಗರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಡಾಲಿ ಎಂಬ ಟೈಟಲ್‌ ಸಹ ರಿಜಿಸ್ಟರ್‌ ಆಯಿತು. ಡಾಲಿ ಸಿನಿಮಾದ ಕಥೆ ಚೆನ್ನಾಗಿದೆ, ಜನ ನನ್ನನ್ನು ಟಗರು ಸಿನಿಮಾದಲ್ಲಿನ ಡಾಲಿ ಪಾತ್ರವನ್ನು ನೋಡಿ ಕಥೆಗಾರರು ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಈಸಿನಿಮಾದ ಕಥೆಯನ್ನು ಬರೆದಿದ್ದಾರೆ. ಯೋಗೇಶ್‌ ಮತ್ತು ಮಾಸ್ತಿ ಅವರ ಜತೆ ಮತ್ತೆ ಮತ್ತೆ ಕೆಲಸ ಮಾಡುವುದು ನನಗೆಖುಷಿ ಕೊಡುವ ವಿಚಾರ. ಪ್ರಭು ಶ್ರೀನಿವಾಸ್‌ ಅವರ ಹಿಂದಿನ ಸಿನಿಮಾಗಳನ್ನು ನೋಡಿದ್ದೇನೆ. ಅವರ ನಿರ್ದೇಶನದ ಶೈಲಿ ಬೇರೆಥರ ಇದೆ. ಈಗ ನಮ್ಮ ತಂಡಕ್ಕೆ ರಚಿತಾ ಸಹ ಸೇರಿಕೊಂಡಿರುವುದು ಇನ್ನೊಂದು ಬಲ ಬಂದಾಂತಾಗಿದೆ. ಒಟ್ಟಿನಲ್ಲಿ ಡಾಲಿ ಸಿನಿಮಾ ಅಭಿಮಾನಿಗಳು ಇಷ್ಟಪಡುವಂತೆ ಇರುತ್ತದೆ ಎನ್ನುತ್ತಾರೆ ಡಾಲಿ.

Find Out More:

Related Articles:

Unable to Load More