ಬಿಗ್ ಬಾಸ್ ಮನೆಯ ಒಂದು ಮುತ್ತಿನ ಕಥೆ

somashekhar

ಬೆಂಗಳೂರು: ಬಿಗ್ ಬಾಸ್ ಸೀಸನ್ 7ಶುರುವಾಗಿ ತಿಂಗಳೇ ಉರುಳಿತು. ಈ ಒಂದೇ ಒಂದು ತಿಂಗಳಲ್ಲಿ ಬಿಗ್ ಬಾಸ್ ಮನೆಯ ಸುತ್ತಾ ಒಂದು ಮುತ್ತಿನ ಕಥೆಯು ಸುಳಿದಾಡುತ್ತಿದೆ. ಹೌದು, ಇದಕ್ಕೆ ಕಾರಣ ಇತ್ತೀಚೆಗೆ ಕಿಸ್ಸಿಂಗ್ ಸ್ಪಾಟ್ ಆಗುತ್ತಿರುವ ಬಿಗ್ ಬಾಸ್ ಮನೆ. ಪ್ರಸ್ತುತ ಕಿಶನ್ ಸ್ಪರ್ಧಿ ಚಂದನಾ ಅವರಿಗೆ ಮುತ್ತು ನೀಡಿದ್ದರು. ಈ ಬಗ್ಗೆ ಮಾತನಾಡುತ್ತಿದ್ದ ಶೈನ್ ಶೆಟ್ಟಿ ಮುತ್ತು ಕೊಡು ಎಂದು ಚಂದನಾಗೆ ಹೇಳಿದಾಗ ಗಾಯಕ ವಾಸುಕಿ ಓಡಿ ಹೋಗಲುಮುಂದಾದರು.

ಬಿಗ್ ಬಾಸ್ ಸ್ಪರ್ಧಿಗಳಾದ ಶೈನ್, ವಾಸುಕಿಹಾಗೂ ಚಂದನಾ ಲಿವಿಂಗ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಶೈನ್, ಚಂದನಾರಿಗೆ ಕಿಶನ್ ಮುತ್ತು ನೀಡಿದರ ಬಗ್ಗೆ ಕೇಳಿದ್ದಾರೆ. ಬಳಿಕ ಈ ವಿಷಯವನ್ನು ನೀನು ನನ್ನ ಬಳಿ ಏಕೆ ಹೇಳಿಲಿಲ್ಲ ಎಂದು ಪ್ರಶ್ನಿಸಿದಾಗ ಚಂದನಾ ನನಗೆ ಈ ವಿಷಯವನ್ನು ದೊಡ್ಡ ಸುದ್ದಿ ಮಾಡುವುದು ಇಷ್ಟವಿರಲಿಲ್ಲ. ಹಾಗಾಗಿ ನಾನು ಈ ಬಗ್ಗೆ ಯಾರ ಬಳಿಯೂ ಹೇಳಲಿಲ್ಲ ಎಂದು ಉತ್ತರಿಸಿದ್ದಾರೆ. ಅದಾದನಂತರ ಶೈನ್, ಕಿಶನ್ ನಿನಗೆ ಎಲ್ಲಿ ಮುತ್ತು ಕೊಟ್ಟರು. ಅವನು ನಿನಗೆ ಮುತ್ತು ಕೊಟ್ಟಾಗ ನಿನಗೆ ಹೇಗೆ ಎನಿಸಿತ್ತು. ಇದು ನಿನ್ನ ಮೊದಲ ಮುತ್ತಾ? ಎಂದು ಪ್ರಶ್ನಿಸಿದ್ದಾರೆ. ಆಗ ಚಂದನಾ, ಕಿಶನ್ ನನಗೆ ಕೆನ್ನೆ ಮೇಲೆ ಮುತ್ತು ಕೊಟ್ಟನು. ಸೀರಿಯಲ್‍ನಲ್ಲಿ ಒಬ್ಬರು ಒಂದು ಬಾರಿ ಮಾತ್ರ ಮುತ್ತು ಕೊಟ್ಟಿದ್ದರು ಅಷ್ಟೇ. ಅದನ್ನು ಬಿಟ್ಟು ಬೇರೆ ಯಾರೂ ನನಗೆ ಮುತ್ತು ನೀಡಿರಲಿಲ್ಲ ಎಂದು ಹೇಳಿದ್ದಾರೆ.

ಚಂದನಾ ಈ ರೀತಿ ಹೇಳುತ್ತಿದ್ದಂತೆ ಶೈನ್, ವಾಸುಕಿಗೆ ಒಂದು ಮುತ್ತು ಕೊಡು ಎಂದಿದ್ದಾರೆ. ಈ ವೇಳೆ ಚಂದನಾ ಪಕ್ಕದಲ್ಲಿಯೇ ಕುಳಿತ್ತಿದ್ದ ವಾಸುಕಿ ಎದ್ದು ಓಡಿ ಹೋಗಲು ಮುಂದಾದರು. ಬಳಿಕ ಶೈನ್ ಹಾಗೂ ಚಂದನಾ ನೀವು ಭೂಮಿಗೆ ಮುತ್ತು ನೀಡಲಿಲ್ವಾ ಎಂದು ಹೇಳಿದ್ದಾರೆ. ಆಗ ವಾಸುಕಿ ನಾನು ಅವರಿಗೆ ಮುತ್ತು ನೀಡಲಿಲ್ಲ, ಅವರೇ ನನಗೆ ಮುತ್ತು ನೀಡಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಸಂಚಿಕೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿಲ್ಲ. ಬದಲಾಗಿ ಅನ್‍ಸೀನ್‍ನಲ್ಲಿ ಪ್ರಸಾರವಾಗಿತ್ತು.

Find Out More:

Related Articles: