ಮೆಗಾ ಸ್ಟಾರ್ ಚಿರಂಜೀವಿ 152ನೇ ಚಿತ್ರ ಇದೆ ನೋಡಿ

frame ಮೆಗಾ ಸ್ಟಾರ್ ಚಿರಂಜೀವಿ 152ನೇ ಚಿತ್ರ ಇದೆ ನೋಡಿ

Soma shekhar
ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದ ಭಾರೀ ಯಶಸ್ಸಿನ ಬೆನ್ನಲೆ ತಮ್ಮ ಸಿನಿ ಜೀವನದ 152ನೇ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಈ ಚಿತ್ರವನ್ನು ಭರತ್ ಅನೇ ನೇನು ಸಿನಿಮಾ ನಿರ್ದೇಶಿಸಿರುವ ಕೊರಟಾಲ ಶಿವ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ ಗೋವಿಂದ ಹರಿ ಗೋವಿಂದ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಮೆಗಾಸ್ಟಾರ್ ಚಿರಂಜೀವಿ ತನ್ನದೇ ಆದ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದು ಇವರ ಚಿತ್ರಕ್ಕಾಗಿ ಕಾದು ಕುಳಿತಿರುತ್ತಾರೆ.  ಇತ್ತೀಚೆಗೆ ಬಂದ ಸೈರಾ ನರಸಿಂಹ ರೆಡ್ಡಿ ಚಿತ್ರದ ನಂತರ ತೆಲುಗಿನ ಮೆಗಾಸ್ಟಾರ್‌ ಚಿರಂಜೀವಿ ಇದೀಗ ತಮ್ಮ 152ನೇ ಚಿತ್ರಕ್ಕೆ ತಯಾರಾಗುತ್ತಿದ್ದಾರೆ. ಭರತ್‌ ಅನೇ ನೇನು ಸೇರಿ ಹಲವಾರು ಹಿಟ್‌ ಚಿತ್ರಗಳನ್ನು ಕೊಟ್ಟಿದ್ದ ಕೊರಟಾಲ ಶಿವ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಅಂಶಗಳನ್ನೇ ಕಥೆಯಾಗಿಸಿಕೊಂಡು ಚಿತ್ರಕಥೆ ಬರೆದಿರುವುದಾಗಿ ಹೇಳಿರುವ ಶಿವ, ಕಥೆಯ ಎಳೆಯನ್ನು ರಿವೀಲ್‌ ಮಾಡಲು ನಿರಾಕರಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ನಟಿಸಲು ತುಂಬಾ ಕಾತುರದಿಂದ ಇರುವುದಾಗಿ ಚಿರು ಈಗಾಗಲೇ ಹೇಳಿದ್ದಾರೆ.

ಅಲ್ಲು ಅರ್ಜುನ್ ಮೇಲೆ ಕೋಪಗೊಂಡ 'ಮೆಗಾ ಸ್ಟಾರ್'!

ಇನ್ನೊಂದೆಡೆ ಚಿತ್ರಕ್ಕೆ ಎಂಥ ಹೆಸರು ಇಡಬೇಕು ಎಂಬ ಬಗ್ಗೆಯೂ ಚಿತ್ರತಂಡ ತಲೆಕೆಡಿಸಿಕೊಳ್ಳುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ 'ಗೋವಿಂದ ಹರಿ ಗೋವಿಂದ' ಎಂಬ ಟೈಟಲ್‌ ಅನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಕನ್ನಡದ ಸುದೀಪ್, ಅಮಿತಾಬ್ ಬಚ್ಚನ್, ನಯನತಾರಾ, ತಮನ್ನಾ ನಟಿಸಿರುವ ಸೈ ರಾ ನರಸಿಂಹ ರೆಡ್ಡಿ ಸಿನಿಮಾ ಬಗ್ಗೆ ಹೇಳಬೇಕು ಎಂದರೆ ಈ ಸಿನಿಮಾವನ್ನು ಸುಮಾರು ₹ 270ರಿಂದ 300 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು ಬಾಕ್ಸ್ ಆಫೀಸ್‌ನಲ್ಲಿ ಅಂದಾಜು ₹ 230 ಕೋಟಿ ಗಳಿಕೆ ಮಾಡಿದೆ. ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಸ್ಫೂರ್ತಿದಾಯಕ ಕಥೆಯನ್ನು ರಾಣಿ ಲಕ್ಷ್ಮೀಬಾಯಿ ಹೇಳುತ್ತ 'ಸೈರಾ ನರಸಿಂಹ ರೆಡ್ಡಿ' ಚಿತ್ರ ಆರಂಭವಾಗುತ್ತದೆ. ಚಿತ್ರವು ಬಹುತಾರಾಗಣ ಮತ್ತು ಪಂಚ ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಭಾರೀ ಹಿಟ್ ಪಡೆದಿತ್ತು.


Find Out More:

Related Articles:

Unable to Load More