ತಮಿಳು ಸಿನಿಮಾಕ್ಕೆ ಸೆಟ್‌ ಬಿಟ್ಟುಕೊಟ್ಟ ಕನ್ನಡದ ಬುದ್ದಿವಂತ ಯಾರು ಗೊತ್ತಾ!?

frame ತಮಿಳು ಸಿನಿಮಾಕ್ಕೆ ಸೆಟ್‌ ಬಿಟ್ಟುಕೊಟ್ಟ ಕನ್ನಡದ ಬುದ್ದಿವಂತ ಯಾರು ಗೊತ್ತಾ!?

Soma shekhar
ಸಿನಿಮಾ ಶೂಟಿಂಗ್ ಮಾಡುವಾಗ ಆ ಚಿತ್ರದ ಅಗತ್ಯತೆಗೆ ತಕ್ಕಂತೆ ಸೆಟ್ ಗಳನ್ನು ಹಾಕಲಾಗುತ್ತದೆ. ಆನಂತರ ಆ ಸೆಟ್ ಗಳನ್ನು ತೆಗೆದು ಹಾಕಲಾಗುತ್ತದೆ. ಇದೀಗ ಕನ್ನಡದ ಬುದ್ದಿವಂತ ತಮಿಳು ಚಿತ್ರಕ್ಕೆ ಆ ಸೆಟ್ ಅನ್ನು ಬಿಟ್ಟುಕೊಟ್ಟು ಕನ್ನಡ ತನ ಮತ್ತು ಕನ್ನಡದವರ ವಿಶಾಸ ಹೃದಯವಂತಿಕೆ ಯನ್ನು ಇಡೀ ಸಿನಿಮಾ ಇಂಡಸ್ಟ್ರಿಗೆ ತಿಳಿಯುವಂತೆ ಮಾಡಿದೆ. ಆಶ್ಚಕ್ಯವಾದರೂ ನಂಬಲೇ ಬೇಕಾದ ವಿಷಯವಿದು. ಆ ಕನ್ನಡದ ಬುದ್ದಿವಂತ ಯಾರೆಂದು ನಾವ್ ಹೇಳ್ತೀವಿ ನೋಡಿ. 
 
ತಮಿಳು ಚಿತ್ರಕ್ಕೆ ಆ ಸೆಟ್ ಬಿಟ್ಟು ಕೊಟ್ಟಿರುವುದು ಮತ್ತಾರು ಅಲ್ಲ, ದಿ ಬೆಸ್ಟ್ ಡೈರೆಕ್ಟರ್ ಕಮ್ ನಟ ರಿಯಲ್ ಸ್ಟಾರ್ ಉಪೇಂದ್ರ. ಉಪೇಂದ್ರ ನಾಯಕರಾಗಿರುವ “ಬುದ್ಧಿವಂತ-2′ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಜೈಲ್‌ ಸೆಟ್‌ ಹಾಕಿ ಚಿತ್ರೀಕರಣ ಕೂಡಾ ನಡೆಸಲಾಗಿದೆ. ಸಾಮಾನ್ಯವಾಗಿ ಚಿತ್ರೀಕರಣ ನಡೆದ ನಂತರ ಸೆಟ್‌ಅನ್ನು ತೆಗೆಯಲಾಗುತ್ತದೆ. ಆದರೆ, “ಬುದ್ಧಿವಂತ-2′ ತಂಡ ಮಾತ್ರ ತಮ್ಮ ಸೆಟ್‌ ಅನ್ನು ಕೆಡವದೇ, ಮತ್ತೂಂದು ಚಿತ್ರಕ್ಕೆ ಸಹಾಯ ಆಗುವಂತೆ ಬಿಟ್ಟುಕೊಟ್ಟಿದೆ.
 
ತಮಿಳಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ದೊಡ್ಡ ಹಿಟ್‌ ಆದ “ಖೈದಿ‘ ಚಿತ್ರದ ನಿರ್ದೇಶಕ ಲೋಕೇಶ್‌ ಕನಕರಾಜ್‌ ಈಗ ತಮಿಳಿನ ಇಬ್ಬರು ಸ್ಟಾರ್‌ ನಟರಾದ ವಿಜಯ್‌ ಹಾಗೂ ವಿಜಯ್‌ ಸೇತುಪತಿಯವರಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಕ್ಕಾಗಿಯೇ “ಬುದ್ಧಿವಂತ-2′ ಸೆಟ್‌ ಅನ್ನು ಬಿಟ್ಟುಕೊಡಲಾಗಿದೆ. “ಬುದ್ಧಿವಂತ-2′ ಚಿತ್ರೀಕರಣ ಮುಗಿಸಿ ಹೊರಡುವ ವೇಳೆ, ತಮಿಳು ಚಿತ್ರದ ಪ್ರೊಡಕ್ಷನ್‌ ಮ್ಯಾನೇಜರ್‌ ಬಂದು, “ಈ ಸೆಟ್‌ ಅನ್ನು ನಾವು ಬಳಸಬಹುದಾ‘ ಎಂದ ಕೇಳಿದರಂತೆ. ಇದಕ್ಕೆ “ಬುದ್ಧಿವಂತ-2′ ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌ ಖುಷಿಯಿಂದಲೇ ಒಪ್ಪಿಕೊಂಡು ಸೆಟ್ ಬಿಟ್ಟುಕೊಟ್ಟಿದ್ದಾರಂತೆ. 
 
ಸೆಟ್ ನಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡು “ಬುದ್ಧಿವಂತ-2′ ಸೆಟ್‌ನಲ್ಲಿ ತಮಿಳು ಸಿನಿಮಾದ ಚಿತ್ರೀಕರಣವೂ ನಡೆಯಲಿದೆ. ಈ ಬಗ್ಗೆ ಮಾತನಾಡುವ ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌, “ನಮ್ಮ ಸೆಟ್‌ ಅನ್ನು ತಮಿಳು ಸಿನಿಮಾದವರು ಬಳಕೆ ಮಾಡುತ್ತಾರೆಂದಾಗ ಖುಷಿಯಿಂದ ಒಪ್ಪಿಕೊಂಡೆ. ಅಷ್ಟೊಂದು ಖರ್ಚು ಮಾಡಿ ಹಾಕಿರುವ ಸೆಟ್‌ ಅನ್ನು ಸುಮ್ಮನೆ ತೆಗೆದು ಹಾಕುವ ಬದಲು ಯಾರಿಗಾದರೂ ಬಳಕೆಯಾಗೋದು ಮುಖ್ಯ‘ ಎಂದಿದ್ದಾರೆ.

Find Out More:

Related Articles:

Unable to Load More