ದರ್ಶನ್‌ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ದೇವರು ನೀಡಿದ ವರ

frame ದರ್ಶನ್‌ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ದೇವರು ನೀಡಿದ ವರ

Soma shekhar
ಸ್ಯಾಂಡಲ್ ವುಡ್ ನಲ್ಲಿ ಡಿ ಬಾಸ್ ದರ್ಶನ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಡಿ ಬಾಸ್ ಜೊತೆ ಒಂದೇ ಒಂದು ಸೆಲ್ಫೀ ತೆಗೆದುಕೊಳ್ಳೋ ಅವಕಾಶ ಸಿಕ್ಕರೆ ಅದೇ ನಮ್ಮ ಪುಣ್ಯ ಅಂತಾರೆ ಅಭಿಮಾನಿಗಳು. ಇನ್ನು ದರ್ಶನ್ ಜೊತೆಗೆ ನಟಿಸುವ ಅವಕಾಶ ಸಿಕ್ಕರೆ. ಆ ಖುಷಿ ಹೇಗಿರುತ್ತೇ  ಅಲ್ವಾ. ಆ ಖುಷಿಯನ್ನು ಕಂಡ ಒಡೆಯ ಚಿತ್ರದ ಒಡತಿಯ  ಮಾತುಗಳು ಇಲ್ಲಿದೆ ನೋಡಿ. 
 
ದರ್ಶನ್‌ ನಾಯಕರಾಗಿರುವ “ಒಡೆಯ’ ಚಿತ್ರ ಈ ವಾರ ಥಿಯೇಟರ್ ಗೆ ಲಗ್ಗೆ ಇಡಲಿದೆ. ಈ ಚಿತ್ರದ ಮೂಲಕ ಸನಾ ತಿಮ್ಮಯ್ಯ ಎಂಬ ಕೊಡಗಿನ ಬೆಡಗಿ ಚಿತ್ರರಂಗಕ್ಕೆ ಲಾಂಚ್‌ ಆಗುತ್ತಿದ್ದಾರೆ. ಜ್ಯುವೆಲ್ಲರಿ ಡಿಸೈನಿಂಗ್‌ನಲ್ಲಿ ಡಿಪ್ಲೊಮ ಕೋರ್ಸ್‌ ಕೂಡ ಮಾಡಿರುವ ಸನಾ, ಮಾಡೆಲಿಂಗ್‌ನಲ್ಲೂ ತೊಡಗಿಸಿಕೊಂಡವರು. 
 
 
“ಒಡೆಯ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಬಗ್ಗೆ ಮಾತನಾಡುವ ಸನಾ, “ನಾನು ಆ್ಯಕ್ಟಿಂಗ್‌ ತರಬೇತಿ ಪಡೆಯುತ್ತಿದ್ದ ವೇಳೆಯೇ “ಒಡೆಯ’ ಚಿತ್ರತಂಡ ಹೀರೋಯಿನ್‌ಗಾಗಿ ಹುಡುಕಾಟದಲ್ಲಿತ್ತು. ಅಲ್ಲದೆ ನನ್ನಮ್ಮ ಮತ್ತು ದರ್ಶನ್‌ ಅವರ ತಾಯಿ ಬಹುಕಾಲದ ಸ್ನೇಹಿತೆಯರು.
 
 
ಈ ಗೆಳೆತನವೇ ನಾನು ಬಣ್ಣದ ಲೋಕ ಪ್ರವೇಶಿಸಲು ಬೆಸುಗೆ ಹಾಕಿತು. ಅಮ್ಮನ ಒತ್ತಾಸೆಯಿಂದಲೇ ಒಡೆಯನ ಕೋಟೆ ಪ್ರವೇಶಿಸಲು ಸುಲಭವಾಯಿತು. ನಟನೆ, ಕನ್ನಡ ಗೊತ್ತಿರುವುದು ಮತ್ತಷ್ಟು ಸಹಕಾರಿಯಾಯಿತು’ ಎನ್ನುತ್ತಾರೆ. ಇನ್ನು ದರ್ಶನ್‌ ಅವರ “ಒಡೆಯ’ ಚಿತ್ರಕ್ಕೆ ಹೀರೋಯಿನ್‌ ಆಗಿ ಆಯ್ಕೆಯಾಗಿದ್ದು, ದರ್ಶನ್‌ ಅವರ ಜೊತೆ ಅಭಿನಯಿಸಿದ್ದು ಎಲ್ಲವೂ ಇಂದಿಗೂ ಕೆಲವೊಮ್ಮೆ ಸನಾಗೆ ಕನಸೋ, ನನಸೋ ಎಂದು ಅಚ್ಚರಿ ತರುತ್ತದೆಯಂತೆ.
 
ಈ ಬಗ್ಗೆ ಮಾತನಾಡುವ ಸನಾ, “ನಾನು ಚಿಕ್ಕಂದಿನಿಂದಲೂ ದರ್ಶನ್‌ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ನಾನು ಅವರ ದೊಡ್ಡ ಫ್ಯಾನ್‌. ದೊಡ್ಡ ಸ್ಟಾರ್‌ ಆಗಿರುವುದರಿಂದ ಅವರನ್ನು ಹತ್ತಿರದಿಂದ ನೋಡೋದೆ ಕಷ್ಟ. ಅಂಥದ್ರಲ್ಲಿ ಅವರೊಟ್ಟಿಗೆ ಅಭಿನಯಿಸುವ ಅವಕಾಶ ಸಿಕ್ಕಿದೆ ಅಂದ್ರೆ, ಕೆಲವೊಮ್ಮೆ ಅದು ಕನಸೋ, ನಿಜವೋ ಅಂಥ ಗೊತ್ತಾಗುವುದಿಲ್ಲ. ಆದ್ರೆ ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದೇ ಭಾವಿಸುತ್ತಾನೆ’ ಎಂದು ತಮ್ಮ ಖುಷಿ ಹಂಚಿಕೊಂಡಿದ್ದಾರೆ.

Find Out More:

Related Articles:

Unable to Load More