ಇತ್ತೀಚಿನ ದಿನಮಾನಗಳಲ್ಲಿ ಸ್ಯಾಂಡಲ್ ವುಡ್ ಸಿನಿ ಇಂಡಸ್ಟ್ರಿ ಸದ್ದಿಲ್ಲದೇ ಬೆಳೆಯುತ್ತಿದೆ. ಹೌದು ಅದಕ್ಕೆ ಕೆಜಿಎಫ್ ಚಿತ್ರವೇ ಸಾಕ್ಷಿ. ಇದಕ್ಕೆ ಪೂರಕವೆಂಬಂತೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ನಾಲ್ಕು ಫಿಲಂಫೇರ್ ಪ್ರಶಸ್ತಿಗಳು ಈ ಚಿತ್ರ ಬಾಚಿಕೊಂಡಿದೆ. ಹೌದು ಅದು ಯಾವುದು, ಏನು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಯಶ್ ಅಭಿನಯದ 'ಕೆಜಿಎಫ್' ಕನ್ನಡದ ಅತ್ಯುತ್ತಮ ಚಿತ್ರವಾಗಿ ಫಿಲಂಫೇರ್ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇದೇ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ 'ರಾಕಿಂಗ್ ಸ್ಟಾರ್' ಯಶ್ ಪಾಲಾದರೆ, 'ಟಗರು' ಚಿತ್ರ ಮಾನ್ವಿತಾ ಹರೀಶ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿತು. ಇನ್ನು ಅತ್ಯುತ್ತಮ ನಿರ್ದೇಶಕ ಸೇರಿದಂತೆ ಒಟ್ಟು ನಾಲ್ಕು ಫಿಲಂಫೇರ್ ಅವಾರ್ಡ್ಗಳು 'ನಾತಿಚರಾಮಿ' ಚಿತ್ರದ ಪಾಲಾಗಿವೆ. ಈ ಚಿತ್ರದ ನಿರ್ದೇಶಕ ಮಂಸೋರೆ ಅವರು ಅತ್ಯುತ್ತಮ ನಿರ್ದೇಶಕರಾದರೆ, ಶರಣ್ಯಾ ಅವರಿಗೆ ಅತ್ಯುತ್ತಮ ಪೋಷಕ ನಟಿ ಹಾಗೂ ಶ್ರುತಿ ಹರಿಹರನ್ಗೆ ಅತ್ಯುತ್ತಮ ಕ್ರಿಟಿಕ್ಸ್ ಅವಾರ್ಡ್, ಇದೇ ಚಿತ್ರಕ್ಕೆ ಹಾಡಿದ ಬಿಂದುಮಾಲಿನಿ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಫಿಲ್ಮ್ ಅವಾರ್ಡ್ಸ್ ಪ್ರದಾನ ಮಾಡಲಾಯಿತು.
ಶನಿವಾರ ಚೆನ್ನೈನಲ್ಲಿ ನಡೆದ ವರ್ಣರಂಜಿತ ದಕ್ಷಿಣ ಭಾರತದ 66ನೇ ಫಿಲಂ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. “ನೀನಾಸಂ ಸತೀಶ್ ಅವರಿಗೆ ಅತ್ಯುತ್ತಮ ಕ್ರಿಟಿಕ್ಸ್ ಅವಾರ್ಡ್ ದೊರೆಯಿತು. ಟಗರು ಚಿತ್ರದ ಧನಂಜಯ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ನೀಡಲಾಯಿತು.
ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು ಚಿತ್ರಕ್ಕೆ ಸಂಗೀತ ನೀಡಿದ ವಾಸುಕಿ ವೈಭವ್ ಅತ್ಯುತ್ತಮ ಸಂಗೀತ ನಿರ್ದೇಶಕ ಎನ್ನಿಸಿಕೊಂಡರೆ, ಯುವ ಗಾಯಕ ಸಂಚಿತ್ ಹೆಗಡೆ ಅತ್ಯುತ್ತಮ ಹಿನ್ನೆಲೆಗಾಯಕಪ್ರಶಸ್ತಿಯನ್ನು ಪಡೆದುಕೊಂಡರು.ವಾಸುಕಿ ವೈಭವ್ ಪರವಾಗಿ ಅವರ ತಾಯಿಯ ಪ್ರಶಸ್ತಿ ಸ್ವೀಕರಿಸಿದರೆ, ಯಶ್ ಪರವಾಗಿ ಯಾರೂ ಬಂದಿರಲಿಲ್ಲ. ಇನ್ನು ನಟ ರಿಷಿ, ನಟಿಯರಾದ ಮೇಘನಾ ಗಾಂವಕರ್, ಪಾರುಲ್ ಯಾದವ್, ರಾಶಿ ಪೊನ್ನಪ್ಪ ಸೇರಿದಂತೆ ಹಲವು ಕಲಾವಿದರು ಪ್ರಶಸ್ತಿ ಪ್ರದಾನ ಮಾಡಿದರು. ಉತ್ತಮ ಸಾಮಾಜಿಕ ಸಂದೇಶ ಹೊಂದಿರುವ ನಾತಿಚರಾಮಿಗೆ ಪ್ರಶಸ್ತಿಗಳ ಮಹಾಪೂರವೇ ಹರಿದುಬಂದಿರುವುದು ಚಿತ್ರತಂಡದ ಸಂತಸ ಹೆಚ್ಚುವಂತೆ ಮಾಡಿದೆ.