ಗಣಿನಾಡು ಬಳ್ಳಾರಿಯಲ್ಲಿ ರಾಕಿಭಾಯ್ ಮಾಡಿದ್ದೇನು?

frame ಗಣಿನಾಡು ಬಳ್ಳಾರಿಯಲ್ಲಿ ರಾಕಿಭಾಯ್ ಮಾಡಿದ್ದೇನು?

Soma shekhar
`
ಬಳ್ಳಾರಿ: ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿ ಈಗಾಗಲೇ ನೂರಾರು ಕೋಟಿ ಗಳಿಸಿದ್ದು ಗೊತ್ತೇ ಇದೆ. ಚಾಪ್ಟರ್ ಎರಡರ ಶೂಟಿಂಗ್ ಭರದಿಂದ ಸಾಗಿದ್ದು ಇದೀಗ ಗಣಿನಾಡು ಬಳ್ಳಾರಿಯ ಜಿಂದಾಲ್ ಗೆ ರಾಕಿ ಭಾಯ್ ಯಶ್ ಕಾಲಿಟಿದ್ದು, ಅಲ್ಲಿ ಏನ್ ಮಾಡಿದ್ರು ಅಂತ ಕೇಳಿದ್ರೆ ನೀವ್ ಕೂಡ ಶಾಕ್ ಆಗ್ತೀರಾ. ಹೌದು, ಕೆಜಿಎಫ್ ಚಿತ್ರದಿಂದ ಯಶ್ ಅತಿದೊಡ್ಡ ನಟನಾಗಿ ಮಿಂಚುತ್ತಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಗಳನ್ನೇ ಬಾಚಿಕೊಂಡಿದ್ದಾರೆ.
 
 ಹೌದು, ನಟ ಯಶ್ ಬೆಂಗಳೂರಿನಿಂದ ನೇರವಾಗಿ ಸಂಡೂರಿನ ಜಿಂದಾಲ್ ಏರ್‌ಪೋರ್ಟ್‌ಗೆ ವಿಶೇಷ ವಿಮಾನದ ಮೂಲಕ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಯಶ್ ಅವರನ್ನು ನೋಡಲು ಮುಗಿಬಿದ್ದಿದ್ದರು. ಅಲ್ಲದೇ ಯಶ್ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿ ಕೊಂಡಿದ್ದಾರೆ. ಅಲ್ಲಿಂದ ನೇರವಾಗಿ ಶೂಟಿಂಗ್ ಸ್ಥಳಕ್ಕೆ ತೆರಳಿ, ಚಿತ್ರೀಕರಣದಲ್ಲಿ ಭಾಗಿ ಯಾಗಿದ್ದಾರೆ.
 
ಶುಕ್ರವಾರದಿಂದ ಇನ್ನು ಸುಮಾರು 15 ದಿನಗಳ ಕಾಲ ಸಂಡೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಈಗಾಗಲೇ ನಾಲ್ಕು ದಿನಗಳ ಹಿಂದೆಯೇ ‘ಕೆಜಿಎಫ್ -2’ ತಂಡ ಸಂಡೂರಿನ ತುಂಗಾ ಮೈನ್ಸ್ ಕಂಪನಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಇಂದಿನಿಂದ ಯಶ್ ಅವರು ಚಿತ್ರತಂಡ ವನ್ನು ಸೇರಿ ಕೊಂಡಿದ್ದಾರೆ. ಚಿತ್ರೀಕರಣಕ್ಕೆ ತುಂಗಾ ಮೈನ್ಸ್ ಕಂಪನಿಯಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಕೆಜಿಎಫ್ ಮೊದಲ ಭಾಗ ಚಿನ್ನದ ಗಣಿ ಕೋಲಾರದಲ್ಲಿ ಚಿತ್ರೀಕರಣವಾದರೆ, ‘ಕೆಜಿಎಫ್ 2’ ಗಣಿ ನಾಡು ಬಳ್ಳಾರಿ ಯಲ್ಲಿ ಚಿತ್ರೀಕರಣ ವಾಗುತ್ತಿರುವುದು ಮತ್ತೊಂದು ವಿಶೇಷ ವಾಗಿದೆ. ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
 
ಕಳೆದ ಒಂದು ವರ್ಷದ ಹಿಂದೆ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ ಒನ್ ರಾಜ್ಯದ್ಯಂತ,  ರಾಷ್ಟ್ರದ್ಯಂತ ಮಾತ್ರವಲ್ಲದೇ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಜಿಎಫ್ ಹಿಟ್ ಪಡೆದಿತ್ತು. ಇದರಿಂದ ಕನ್ನಡಿಗರ ಸ್ಥಾನಮಾನಗಳು, ಕನ್ನಡದ ಭಾಷೆಯು ಪಾರಮ್ಯ ಮೆರೆದಿದ್ದು, ಈ ಚಿತ್ರ ಪಂಚ ಭಾಷೆಯಲ್ಲಿ ತೆರೆ ಕಂಡಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2 ಸಹ ಪಂಚ ಭಾಷೆಯಲ್ಲಿ ಬಿಡುಗಡೆ ಯಾಗಲಿದೆ. ಈಗಾಗಲೇ ಚಿತ್ರದ ಮೇಲಿನ ನಿರೀಕ್ಷೆ ಗಗನಕ್ಕೇರಿದ್ದು, ಚಿತ್ರ ತಂಡದಿಂದ ಇತ್ತೀಚೆಗಷ್ಟೇ ಒಂದು ಪೋಸ್ಟರ್ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು.
 
 

Find Out More:

Related Articles:

Unable to Load More