25 ಲುಕ್ ನಲ್ಲಿ ನಟಿಸುತ್ತಿರುವ ವಿಕ್ರಂ ಚಿತ್ರದಲ್ಲಿ ಕನ್ನಡದ ಬೆಡಗಿ

frame 25 ಲುಕ್ ನಲ್ಲಿ ನಟಿಸುತ್ತಿರುವ ವಿಕ್ರಂ ಚಿತ್ರದಲ್ಲಿ ಕನ್ನಡದ ಬೆಡಗಿ

Soma shekhar
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ವಿಷಯ ಗೊತ್ತೇ ಇದೆ. ಇದೀಗ ಸ್ಯಾಂಡಲ್ ವುಡ್ ನ ನಟಿ ಕಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.
 
 ಕೆಜಿಎಫ್  ಸಿನಿಮಾ ಮೂಲಕ ಸಿನಿಮಾ ಪ್ರಪಂಚಕ್ಕೆ  ಪರಿಚಯವಾದ ನಟಿ ಶ್ರೀನಿಧಿ ಶೆಟ್ಟಿ. ಈಗಾಗಲೇ ‘ಕೆಜಿಎಫ್ ಚಾಪ್ಟರ್ 2’ಸಿನಿಮಾ ಕೆಲಸಗಳಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಇದರ ಜತೆ ಕಾಲಿವುಡ್​ಗೂ ಪ್ರವೇಶಿಸಿದ್ದು, ಚಿಯಾನ್ ವಿಕ್ರಂ ಜತೆಗೆ ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸಿನಿಮಾ ಯಾವುದು? ಶೀರ್ಷಿಕೆ ಏನು ಎಂಬ ಬಗ್ಗೆ ಒಂದೇ ಒಂದು ಸಣ್ಣ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಆ ಮಾಹಿತಿ ಲಭ್ಯವಾಗಿದೆ. 
 
ಆ ಚಿತ್ರಕ್ಕೆ ‘ಕೋಬ್ರಾ’ ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ. ಈ ಹಿಂದೆ ‘ಅಮರ್’ ಎಂಬ ಶೀರ್ಷಿಕೆ ಅಂತಿಮವಾಗಿತ್ತು ಎಂಬ ಸುದ್ದಿ ಹರಿದಾಡಿತ್ತಾದರೂ, ಆ ಬಗ್ಗೆ ಚಿತ್ರತಂಡ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಅಧಿಕೃತ ಶೀರ್ಷಿಕೆಯನ್ನು ಸಿನಿಮಾ ಟೀಮ್ ಬಿಡುಗಡೆ ಮಾಡಿದೆ. ಚಿತ್ರದ ಖಳನಿಗೂ ಮತ್ತು ನಾಯಕನಿಗೂ ‘ಕೋಬ್ರಾ’ ಪದದ ಹಿಂದೆ ದೊಡ್ಡ ಕನೆಕ್ಷನ್ ಇರಲಿದ್ದು, ಅದರ ಸುತ್ತ ಸಿನಿಮಾ ಸಾಗಲಿದೆಯಂತೆ. ಜತೆಗೆ ತಮಿಳು, ತೆಲುಗು, ಹಿಂದಿಯಲ್ಲಿ ಇದೇ ಶೀರ್ಷಿಕೆಯಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆ ಎಂದೂ ಹೇಳಿಕೊಂಡಿದ್ದಾರೆ ನಿರ್ದೇಶಕರಾದ ಜ್ಞಾನಮುತ್ತು.
 
ನಾಯಕ ವಿಕ್ರಂ ಆಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಹೆಚ್ಚಿವೆ. ನಾಯಕಿ ಶ್ರೀನಿಧಿ ಶೆಟ್ಟಿ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ವಿಶೇಷ ಏನೆಂದರೆ ಕ್ರಿಕೆಟಿಗ ಇರ್ಫಾನ್ ಪಠಾಣ್ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಬರೋಬ್ಬರಿ 25ಕ್ಕೂ ಅಧಿಕ ಬಗೆಯ ಲುಕ್​ಗಳಲ್ಲಿ ವಿಕ್ರಂ ಕಾಣಿಸಿಕೊಳ್ಳಲಿರುವ ಈ ಚಿತ್ರದಲ್ಲಿ ಶ್ರೀನಿಧಿ ಪಾತ್ರವೂ ಅಷ್ಟೇ ವಿಶೇಷವಾಗಿದೆಯಂತೆ. 7 ಸ್ಕ್ರೀನ್ ಎಂಟರ್​ಟೇನ್​ವೆುಂಟ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ಸಹಭಾಗಿತ್ವದಲ್ಲಿ ಚಿತ್ರ ನಿರ್ವಣವಾಗಲಿದ್ದು, ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ. ‘ಇರೈವಿ’ ಚಿತ್ರ ಖ್ಯಾತಿಯ ಕ್ಯಾಮರಾಮನ್, ಸಿವಕುಮಾರ್ ವಿಜಯನ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಅದ್ಭುತವಾಗಿ ಮೂಡಿ ಬರಲಿದ್ದು, ಬಾಲಿವುಡ್, ಕಾಲಿವುಡ್, ಟಾಲಿವುಡ್ ನಲ್ಲಿ ದೊಡ್ಡಮಟ್ಟದಲ್ಲಿ ಸೌಂಡ್ ಮಾಡಲಿದೆಯಂತೆ.

Find Out More:

Related Articles:

Unable to Load More