ಸದ್ಯಕ್ಕಂತೂ ನಾನು ದುಬಾರಿಯಲ್ಲ ಎಂದ ನಟಿ ಯಾರು, ಯಾಕೆ ಗೊತ್ತಾ!?

frame ಸದ್ಯಕ್ಕಂತೂ ನಾನು ದುಬಾರಿಯಲ್ಲ ಎಂದ ನಟಿ ಯಾರು, ಯಾಕೆ ಗೊತ್ತಾ!?

Soma shekhar
ಬೆಂಗಳೂರು: ಸದ್ಯ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚುತ್ತಿರುವ ಬಹು ಬೇಡಿಕೆಯಲ್ಲಿರುವ ನಟಿ, ಕಿರಿಕ್ ಹುಡುಗಿ ಕೊಡಗಿನ ಬೆಡಗಿ  ರಶ್ಮಿಕಾ ಮಂದಣ್ಣ, ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ ಇತ್ತೀಚೆಗೆ ಸುದ್ದಿಯಾಗಿದ್ದರು. ಕೆಲವು ದಿನಗಳಿಂದ ಕೇಳಿಬರುತ್ತಿದ್ದ ಈ ಸುದ್ದಿ ಬಹಳಷ್ಟು ಕುತೂಹಲ ಕೆರಳಿಸಿತ್ತು. ಆದರೆ ಇದೀಗ ಆ ಬಗ್ಗೆ ಸ್ಪಷ್ಟನೆ ನೀಡಿದ್ದು, ಏನೆಂದಿದ್ದಾರೆ ಗೊತ್ತಾ!? 
 
ದುಬಾರಿ ಸಂಭಾವನೆ ಪಡೆಯುತ್ತೇನೆ ಎಂದಿದ್ದಾರು? ಅಷ್ಟಕ್ಕೂ ನಾನು ದುಬಾರಿ ಸಂಭಾವನೆ ಪಡೆಯುತ್ತಿರುವ ನಟಿಯಲ್ಲ. ಚಿತ್ರರಂಗದಲ್ಲಿ ನಾನಿನ್ನೂ ಅಂಬೆಗಾಲಿಡುತ್ತಿದ್ದೇನೆ. ಎಲ್ಲವೂ ಗೊತ್ತಿರುವಷ್ಟು ಮತ್ತು ಎಲ್ಲರಿಗೂ ಗೊತ್ತಿರುವಷ್ಟರ ಮಟ್ಟಿಗೆ ನಾನಿನ್ನೂ ಚಿತ್ರರಂಗದಲ್ಲಿ ಕೆಲಸ ಮಾಡಿಲ್ಲ’ ಎಂಬುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ. ‘ರಶ್ಮಿಕಾ ದುಬಾರಿ ಸಂಭಾವನೆ ಪಡೆಯುತ್ತಿರುವ ನಟಿ ಎಂದು ಯಾರಾದರೂ ಹೇಳಿದಾಗ, ಈ ರೀತಿಯ ಸುದ್ದಿಗಳು ಅದೆಲ್ಲಿಂದ ಹುಟ್ಟಿಕೊಳ್ಳುತ್ತಿವೆಯೋ ಎಂದು ನನಗೇ ಅಚ್ಚರಿಯಾಗುತ್ತದೆ.
 
ಅಷ್ಟು ಹಣ ಎಲ್ಲಿಂದ ಬರುತ್ತೆ ಎಲ್ಲಿಗೆ ಹೋಗುತ್ತೆ ಎಂದೂ ನನಗೆ ಆಶ್ಚರ್ಯ ಆಗುತ್ತದೆ. ನನ್ನ ಬ್ಯಾಂಕ್ ಖಾತೆಯಲ್ಲಂತೂ ಹಣವಿಲ್ಲ, ಚಿತ್ರರಂಗಕ್ಕೆ ನಾನಿನ್ನೂ ಹೊಸಬಳು ಎಂದು ನನಗೆ ಅನಿಸುತ್ತಿದೆ’ ಎನ್ನುವ ಮೂಲಕ, ಹೈಯೆಸ್ಟ್ ಪೇಯ್ಡ್ ನಟಿ ಎಂಬ ವಿಷಯವನ್ನು ಅವರು ನಿರಾಕರಿಸಿದ್ದಾರೆ. ‘ಮುಂದೊಂದು ದಿನ ನಾನು ದುಬಾರಿ ಸಂಭಾವನೆಯ ನಟಿ ಆಗುತ್ತೇನೆ. ಆದರೆ ಸದ್ಯಕ್ಕಂತೂ ಆಗಿಲ್ಲ ಮುಂದೇ ಆಗಬಹುದು' ಎಂದು ರಶ್ಮಿಕಾ ಸ್ಪಷ್ಟ ಪಡಿಸಿದ್ದಾರೆ ಎಂಬುದು ಸದ್ಯಕ್ಕೆ ತಿಳಿದು ಬಂದಿರುವ ಸಂಗತಿ ಯಾಗಿದೆ. 
 
ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ರಶ್ಮಿಕಾ ಅಭಿನಯದ, ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ತೆಲುಗಿನ ‘ಸರಿಲೇರು ನೀಕೆವ್ವರು’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಮತ್ತೊಂದೆಡೆ ಧ್ರುವ ಸರ್ಜಾ-ರಶ್ಮಿಕಾ ಅಭಿನಯಿಸಿರುವ ‘ಪೊಗರು’ ಚಿತ್ರ ತೆರೆಕಾಣಲು ಸಜ್ಜಾಗಿದೆ. ಅಲ್ಲದೆ ತೆಲುಗಿನಲ್ಲಿ ನಿತಿನ್ ನಟನೆಯ ‘ಭೀಷ್ಮ’ ಹಾಗೂ ಅಲ್ಲು ಅರ್ಜುನ್ ಅವರ ‘ಎಎ2’ ಚಿತ್ರಗಳಲ್ಲಿ ರಶ್ಮಿಕಾ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ರಶ್ಮಿಕಾ ಮಿಂಚಿನ ಓಟ ನಡೆಸುತ್ತಿರುವ ಬ್ಯೂಸಿ ನಟಿಯಾಗಿದ್ದಾರೆ.

Find Out More:

Related Articles:

Unable to Load More