ಅನುಷ್ಕಾ ಶೆಟ್ಟಿ ಕನ್ನಡ ಪ್ರೇಮಕ್ಕೆ ಕನ್ನಡಿಗರು ಫುಲ್ ಫಿದಾ

frame ಅನುಷ್ಕಾ ಶೆಟ್ಟಿ ಕನ್ನಡ ಪ್ರೇಮಕ್ಕೆ ಕನ್ನಡಿಗರು ಫುಲ್ ಫಿದಾ

Soma shekhar
ಬೆಂಗಳೂರು: ಟಾಲಿವುಡ್‍ ನಲ್ಲಿ ಖ್ಯಾತ ನಟಿಯಾಗಿದ್ದರೂ ಅನುಷ್ಕಾ ಶೆಟ್ಟಿ ಅವರಿಗೆ ಕನ್ನಡದ ಮೇಲಿರುವ ಪ್ರೀತಿ ಕಿಂಚಿತ್ತು ಕಡಿಮೆಯಾಗಿಲ್ಲ. ಆಗುವುದು ಇಲ್ಲ. ಬೇರೆ ಭಾಷೆ ಸಿನಿಮಾಗಳಲ್ಲಿ ಚಾನ್ಸ್ ಸಿಕ್ಕ ಬಳಿಕ ಹಲವರು ಕನ್ನಡ ವನ್ನೇ ಮರೆತಂತೆ ಆಡುತ್ತಾರೆ. ಆದರೆ ಅನುಷ್ಕಾ ಶೆಟ್ಟಿ ಅವರಿಗೆ ತೆಲುಗು ಭಾಷೆಯೇ ಎಲ್ಲಾ ನೀಡಿದರು ಸಹ ಕನ್ನಡದ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗಿಲ್ಲ. ಅಷ್ಟಕ್ಕೂ ಹೇಗೆ, ಯಾಕೆ ಅಂತೀರಾ, ಇಲ್ಲಿದೆ ನೋಡಿ ಡೀಟೆಲ್ಸ್. 
 
ಮಂಗಳೂರಿನ ಬೆಡಗಿ ನಟಿ ಅನುಷ್ಕಾ ಶೆಟ್ಟಿ ಅವರು ಹೆಚ್ಚು ನಟಿಸಿದ್ದು ಮಾತ್ರ ತೆಲುಗು, ತಮಿಳು ಸಿನಿಮಾದಲ್ಲಿ. ಆದರೆ ಸ್ವೀಟಿ ಕನ್ನಡ ಪ್ರೇಮ, ತಾಯ್ನಾಡಿಗೆ ಮಿಡಿಯುವ ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿಯಾಗಿದ್ದು ಮಕರ ಸಂಕ್ರಾಂತಿ ಹಬ್ಬ. ಹೌದು ಅನುಷ್ಕಾ ಶೆಟ್ಟಿ ಕನ್ನಡದಲ್ಲಿಯೇ ಮಕರ ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ್ದಾರೆ. ಈ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಹೌದು, ಇದನ್ನು ನೋಡಿದ ಪ್ರತೀ ಕನ್ನಡಿಗರಿಗೂ ಕನ್ನಡತಿ ಮೇಲೆ ಪ್ರೀತಿ ಹೆಚ್ಚಾಗಿದೆ. 
 
ನಟಿ ಅನುಷ್ಕಾ ಶೆಟ್ಟಿ ತಮ್ಮ ಫೇಸ್‍ ಬುಕ್ ಖಾತೆಯಲ್ಲಿ ಅನುಷ್ಕಾ ಸಂಕ್ರಾಂತಿ ಹಬ್ಬಕ್ಕೆ ಕನ್ನಡದಲ್ಲಿ ಶುಭಾಶಯ ಬರೆದು ಅಭಿಮಾನಿಗಳ ಮನ ಗೆದ್ದಿದ್ದಾರೆ. ತೆಲುಗು ತಮಿಳಿನ ಸ್ಟಾರ್ ನಟಿಯಾದರೂ ಕನ್ನಡದಲ್ಲಿಯೇ ಶುಭಕೋರಿದ ಅನುಷ್ಕಾ ಕನ್ನಡ ಪ್ರೀತಿಗೆ ಕನ್ನಡಿಗರ ದಿಲ್ ಖುಷ್ ಆಗಿದೆ. ಈ ಹಿಂದೆ ಅನುಷ್ಕಾ ಶೆಟ್ಟಿ ತಮ್ಮ ತಾಯಿಗೆ ಕನ್ನಡದಲ್ಲಿ ಹುಟ್ಟುಹಬ್ಬ ಶುಭಾಶಯ ತಿಳಿಸುವ ಮೂಲಕ ಕೋಟ್ಯಂತರ ಕನ್ನಡಿಗರ ಮನಸ್ಸು ಗೆದ್ದಿದ್ದರು. ತಮ್ಮ ತಾಯಿ ಪ್ರಫುಲ್ಲಾ ಅವರ ಹುಟ್ಟುಹಬ್ಬದ ದಿನದಂದು ತಾಯಿ ಹಾಗೂ ಇತರೆ ಕುಟುಂಬಸ್ಥರೊಂದಿಗೆ ಅನುಷ್ಕಾ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಫೋಟೋ ಹಾಕಿ ಅದಕ್ಕೆ, “ಜನ್ಮ ದಿನದ ಹಾರ್ದಿಕ ಶುಭಾಶಯಗಳು ಅಮ್ಮಾ” ಎಂದು ಬರೆದಿದ್ದರು. ಅನುಷ್ಕಾ ಶೆಟ್ಟಿ ಅವರ ಕನ್ನಡ ಪ್ರೇಮ ನೋಡಿ ಅಭಿಮಾನಿಗಳು ಖುಷಿಯಾಗಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಲಕ್ಷಾಂತರ ಲೈಕ್ಸ್ ಸಹ ಬಂದಿವೆ.
 
 
 

Find Out More:

Related Articles:

Unable to Load More