ಗೊಂಬೆ ಚೆಂದನ್ ಮದುವೆ ಡೇಟ್ ಫಿಕ್ಸ್, ಯಾವತ್ತು ಎಲ್ಲಿ ಗೊತ್ತಾ!

frame ಗೊಂಬೆ ಚೆಂದನ್ ಮದುವೆ ಡೇಟ್ ಫಿಕ್ಸ್, ಯಾವತ್ತು ಎಲ್ಲಿ ಗೊತ್ತಾ!

Soma shekhar
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ರ್ಯಾಪರ್ ಚಂದನ್ ಶೆಟ್ಟಿ ಬಾಳಿಗೆ ಗೊಂಬೆ ನಿವೇದಿತಾ ಗೌಡ ಬರೋ ಟೈಮ್ ಸನಿಹವಾಗಿದೆ. ಎಂಗೇಜ್ಮೆಂಟ್​ ಗೂ ಮೊದಲೇ ಅನ್ ಅಫಿಶಿಯಲ್ ಆಗಿ ಎಂಗೇಜ್ ಆಗಿ ಸಂಚಲನ ಸೃಷ್ಟಿಸಿದ್ದ ಬಿಗ್ ಬಾಸ್ ಜೋಡಿ, ಇದೀಗ ಕಲ್ಯಾಣೋತ್ಸವಕ್ಕೆ ಸಜ್ಜಾಗಿದ್ದು ಡೇಟ್ ಫಿಕ್ಸ್ ಆಗಿದೆ. ಯಾವ ಡೇಟ್ ಗೊತ್ತಾ!
 
 ಕನ್ನಡದ ರ್ಯಾಪರ್ ಅಂತ್ಲೇ ಸುದ್ದಿಯಾಗಿದ್ದ ಬಹುಮುಖ ಪ್ರತಿಭೆ. ಬಿಗ್​ಬಾಸ್ ಸೀಸನ್- 5ರಲ್ಲಿ ಲೈಮ್​ ಲೈಟ್​ ಗೆ ಬಂದವ್ರು. ಧ್ರುವ ಸರ್ಜಾ ಆತ್ಮೀಯ ಗೆಳೆಯರಾದ್ರೂ, ಸ್ವಂತ ಟ್ಯಾಲೆಂಟ್ ​ನಿಂದ ಮೇಲೆ ಬರೋ ಹಠವಾದಿ ಕನಸುಗಾರ. ಅದೆಷ್ಟೋ ಮಂದಿ ಅಪ್ ​ಕಮಿಂಗ್ ರ್ಯಾಪರ್ಸ್​ಗೆ ರೋಲ್ ಮಾಡೆಲ್.ಇಬ್ಬರ ಮಧ್ಯೆ ಪ್ರೇಮಾಂಕುರಿಸಿದ್ದು ಜಗಜ್ಜಾಹಿರ ಆಗ್ತಿದ್ದಂತೆ ಕದ್ದು ಮುಚ್ಚಿ ಭೇಟಿ ಮಾಡಲು ಶುರುವಿಟ್ಟರು.
 
ರಾಜಾರೋಷವಾಗಿ ಸಾರ್ವಜನಿಕವಾಗಿಯೇ ಒಟ್ಟೊಟ್ಟಿಗೆ ಓಡಾಡಲು ಆರಂಭಿಸಿದ್ದರು. ಕಳೆದ ದಸರಾ ಹಬ್ಬದಲ್ಲಿ ಸಾರ್ವಜನಿಕ ವೇದಿಕೆಯಲ್ಲೇ ನಿವಿ ವಿಲ್ ಯು ಮ್ಯಾರಿ ಮೀ.? ಅಂತ ಚಂದನ್ ಉಂಗುರ ತೊಡಿಸಿ, ಬಹುದೊಡ್ಡ ಕಾಂಟ್ರವರ್ಸಿಗೂ ತುತ್ತಾಗಿದ್ದರು. ಇದೀಗ ಇವ್ರ ಮದ್ವೆ ಡೇಟ್ ಫೈನಲ್ ಆಗಿದ್ದು, ಚಂದನ್- ನಿವೇದಿತಾ ಕಲ್ಯಾಣೋತ್ಸವದ ತಯಾರಿಗಳು ಭರದಿಂದ ಸಾಗ್ತಿವೆ.
 
ಫೆಬ್ರವರಿ 25 & 26ಕ್ಕೆ ಚಂದನ್ ನಿವೇದಿತಾ ಕಲ್ಯಾಣ ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್​ನಲ್ಲಿ ಅದ್ಧೂರಿ ಮದ್ವೆ ಒಕ್ಕಲಿಗ ಸಂಪ್ರದಾಯದಂತೆ ನಿವೇದಿತಾ ಕಲ್ಯಾಣೋತ್ಸವ
ಅರಮನೆ ನಗರಿಯಲ್ಲಿ ಬೀಡುಬಿಡಲಿದೆ ಇಡೀ ಚಂದನವನ ರ್ಯಾಪರ್ ಚಂದನ್ ಶೆಟ್ಟಿ ಮನೆಗೆ ಮಹಾಲಕ್ಷ್ಮೀಯಾಗಿ ನಿವೇದಿತಾ ಬರೋ ಸಮಯ ಬಂದಾಗಿದೆ. ಇದೇ ಫೆಬ್ರವರಿ 25 & 26ರಂದು ಚಂದನ್- ನಿವೇದಿತಾ ಗೌಡ ಸಪ್ತಪದಿ ತುಳಿಯಲಿದ್ದಾರೆ. ಅರಮನೆ ನಗರಿ ಮೈಸೂರಿನಲ್ಲೇ ಇವ್ರ ಕಲ್ಯಾಣೋತ್ಸವ ನಡೆಯಲಿದೆ. 
 
ಗೊಂಬೆ ಚೆಂದನ್ ವಿವಾಹ ಮಹೋತ್ಸವ, ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್​ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಒಕ್ಕಲಿಗ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಚಂದನ್- ನಿವೇದಿತಾ ಕಲ್ಯಾಣೋತ್ಸವ ನಡೆಯಲಿದ್ದು, ಫೆಬ್ರವರಿ 1ರಿಂದ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆ ಹಂಚಲಿದ್ದಾರೆ ಎಂಬುದು ಸದ್ಯಕ್ಕಿರುವ ಸುದ್ದಿಯಾಗಿದೆ.

Find Out More:

Related Articles:

Unable to Load More