ಹಾಸ್ಯ ನಟ ಸುನೀಲ್ ಆಸ್ಪತ್ರೆಗೆ ದಾಖಲು!

frame ಹಾಸ್ಯ ನಟ ಸುನೀಲ್ ಆಸ್ಪತ್ರೆಗೆ ದಾಖಲು!

Soma shekhar
 
ಹೈದರಾಬಾದ್: ಟಾಲಿವುಡ್‌ ಕಾಮಿಡಿ ಕಿಂಗ್ ಸುನೀಲ್ ವರ್ಮಾ  ಹೈದರಾಬಾದ್‌ ನ ಗಚಿಬೌಲಿ ಆಸ್ಪತ್ರಗೆ ದಾಖಲಾಗಿದ್ದಾರೆ. ಹೌದು, ಆರಾಮಾಗಿದ್ದ ಸುನೀಲ್ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದಾದರೂ ಏಕೆ ಎಂಬ ಪ್ರಶ್ನೆಗೆ ಅಭಿಮಾನಿಗಳಿಗೆ ಬೇಸರದ ಜೊತೆ ಶಾಕ್ ನೀಡಿದೆ. ಶಾಕ್ ಆದರೂ ಸಹ ನಂಬಲೇ ಬೇಕಾದ ವಿಷಯವಿದು. ಹೌದು, ನಟ ಸುನೀಲ್ ಆಸ್ಪತ್ರೆಗೆ ದಾಖಲಾಗಿರುವುದು ಖಚಿತವಾಗಿದೆ. ಯಾಕೆ ಗೊತ್ತಾ!? 
 
ಟಾಲಿವುಡ್‌ ಖ್ಯಾತ ಕಾಮಿಡಿ ಕಲಾವಿದ ಸುನೀಲ್ ವರ್ಮಾ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿರುವುದು ನಿಜ. ಈ ವಿಷಯ ತಿಳಿದು ಅಭಿಮಾನಿಗಳಿಗೆ ಬೇಸರ ವುಂಟಾಗಿರುವುದು ಸಹ ನಿಜ. ಆದರೆ ಅಭಿಮಾನಿಗಳು ಚಿಂತಿಸಬೇಕಾದಷ್ಟು ತೀವ್ರ ಸ್ವರೂಪ ದಷ್ಟು ಆರೋಗ್ಯ ದ ಸಮಸ್ಯೆ ಯೇನಲ್ಲ. ಸುನೀಲ್ ಉಸಿರಾಟದ ಸಮಸ್ಯೆ ಯಿಂದ ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಕೆಲವು ದಿನಗಳಿಂದ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಈ ವೇಳೆ ತೆಗೆದು ಕೊಳ್ಳುತ್ತಿದ್ದ ಆ್ಯಂಟಿ ಬಯೋಟಿಕ್ಸ್ ಡೋಸ್‌ ಹೆಚ್ಚಾದ ಕಾರಣ ಶ್ವಾಸಕೋಶದ ಸೊಂಕು ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಕುಟುಂಬಸ್ತರು ಹೈದರಾಬಾದ್‌ ನ ಚಿಬೌಲಿ ಆಸ್ಪತ್ರೆ ಗೆ ಸುನೀಲ್ ಅವರನ್ನು ದಾಖಲಿಸಿದ್ದಾರೆ. ಶ್ವಾಸಕೋಶ ತೊಂದರೆ ಗೊತ್ತಾದರೂ ಸುನೀಲ್, ಸೈಡ್ ಎಫೆಕ್ಟ್ ಬೀರುತ್ತಿದ್ದ ಮಾತ್ರೆಗಳನ್ನು ತೆಗೆದು ಕೊಳ್ಳುವುದನ್ನು ನಿಲ್ಲಿಸಿರಲಿಲ್ಲ. ಸದ್ಯಕ್ಕೆ ವೈದ್ಯರು ಸೋಂಕು ಹರಡ ದಂತೆ ತಡೆದಿದ್ದಾರೆ. ಸುನೀಲ್ ಇನ್ನು 7-10 ದಿನಗಳ ಕಾಲ ವಿಶ್ರಾಂತಿ ತೆಗೆದು ಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
 
'ಡಿಸ್ಕೋ ರಾಜಾ'ಚಿತ್ರದ ಪ್ರಮೋಷನ್‌ ಕೆಲಸದಲ್ಲಿ ಪಾಲ್ಗೊಳ್ಳಬೇಕೆಂದು ಸುನೀಲ್‌ ಬಯಸುತ್ತಿದ್ದಾರೆ. ಆದರೆ ಜ್ವರ ಹೆಚ್ಚಾದ ಕಾರಣ ಗಂಟಲು ನೋವೂ ಹೆಚ್ಚಾಗಿದೆ. ಸುನೀಲ್ ಅಭಿಮಾನಿಗಳು ಆತಂಕ ಪಡೆಬೇಕಾಗಿಲ್ಲ. ರೆಸ್ಟ್ ಪಡೆದ ನಂತರ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಟಾಲಿವುಡ್ ನ ಮಾಸ್ ಮಹಾರಾಜ್ ರವಿತೇಜ ಮುಖ್ಯ ನಟನೆಯ ಚಿತ್ರ ಡಿಸ್ಕೋ ರಾಜಾ ಪ್ರಸ್ತುತ ಟಾಲಿವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೇ ಚಿತ್ರದಲ್ಲಿ ಸುನೀಲ್ ಸಹ ಅದ್ಭುತ ಫರ್ಫಾಮೆನ್ಸ್ ನೀಡಿದ್ದಾರೆ. ಆದ್ದರಿಂದಲೇ ಚಿತ್ರದ ಪ್ರಚಾರಕ್ಕಾಗಿ ಹಾತೊರೆಯುತ್ತಿದ್ದಾರೆ.

Find Out More:

Related Articles:

Unable to Load More