ನಾ ಭೂತೋ ನಾ ಭವಿಷ್ಯತ್ ಎನ್ನುವ ಹಾಗೆ ಸಾವಿರ ಕೋಟಿ ದುಡಿದ ಬಾಹುಬಲಿ ಸಿನಿಮಾ ಪ್ರಪಂಚದಾದ್ಯಂತ ಹೆಸರು ಮಾಡಿತ್ತು. ಇದೀಗ ಹಾಗೆ ಮಾಡ್ತಿರೋದು, ಬಾಹುಬಲಿಯನ್ನು ಸೈಡ್ ಹೊಡೆಯಲು ಮುನ್ನುಗ್ಗುತ್ತಿರುವುದು ಕನ್ನಡದ ಕೆಜಿಎಫ್ ಚಿತ್ರ.
ಸಿನಿಮಾದಲ್ಲಿ ದಮ್ಮಿದ್ರೆ, ಅದಕ್ಕೆ ಭಾಷೆಯ ಗಡಿ ಇರಲ್ಲ. ಒಳ್ಳೆ ಕಂಟೆಂಟ್, ಅದ್ಭುತ ಮೇಕಿಂಗ್, ಒಳ್ಳೆ ಪರ್ಫಾರ್ಮೆನ್ಸ್ ಇದ್ರೆ, ಸಿನಿಮಾವನ್ನ ಸರಿಯಾಗಿ ರೀಚ್ ಮಾಡಿದ್ರೆ, ಬಾಕ್ಸಾಫೀಸ್ ಬ್ಯಾಂಗ್ ಮಾಡ್ಬೋದು ಅನ್ನೋದನ್ನ ಕೆಜಿಎಫ್ ಸಿನಿಮಾ ಸಾಬೀತು ಮಾಡಿ ತೋರಿಸಿದೆ. ಸೌತ್ ಇಂಡಸ್ಟ್ರಿ ಅಂದ್ರೆ, ಬರೀ ಟಾಲಿವುಡ್, ಕಾಲಿವುಡ್ ಅಂತಿದ್ದವರು, ಈಗ ಸ್ಯಾಂಡಲ್ವುಡ್ ಕಡೆ ತಿರುಗು ನೋಡುವಂತಾಗಿದೆ. ಇದೆಲ್ಲಾ ಸಾಧ್ಯವಾಗಿದ್ದು, ಪ್ರಶಾಂತ್ ನೀಲ್ ಸೃಷ್ಟಿಸಿದ ಕೆಜಿಎಫ್ ಅನ್ನೋ ಬ್ರ್ಯಾಂಡ್ನಿಂದ.
2015ರಲ್ಲಿ ಬಾಹುಬಲಿ ದಿ ಬಿಗಿನಿಂಗ್ ಸಿನಿಮಾ ನೋಡಿದವರೆಲ್ಲಾ ಯಾವಾಗ್ಯಾವಾಗ ಬಾಹುಬಲಿ ದಿ ಕನ್ಕ್ಲೂಷನ್ ಸಿನಿಮಾ ನೋಡ್ತೀವೋ ಅಂತ ಕಾಯ್ತಿದ್ರು. ಅದೇ ಹಿಸ್ಟರಿ ಕನ್ನಡದ ಹೆಮ್ಮೆ ಕೆಜಿಎಫ್ ವಿಚಾರದಲ್ಲಿ ರಿಪೀಟ್ ಆಗ್ತಿದೆ. ಕೆಜಿಎಫ್ ಚಾಪ್ಟರ್-1 ನೋಡಿದವರೆಲ್ಲಾ ಚಾಪ್ಟರ್ ಟೂ ನೋಡೋಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ರಾಕಿಭಾಯ್ ಯಶ್ ಎದುರು ಸಂಜುಬಾಬಾ ಅಬ್ಬರಿಸೋಕ್ಕೆ ಬಂದಿರೋದು ಸಿನಿಮಾ ಮೇಲಿನ ನಿರೀಕ್ಷೆಯನ್ನ ಎವರೆಸ್ಟ್ ಎತ್ತರಕ್ಕೆ ಏರಿಸಿದೆ. ಇದೇ ಕಾರಣಕ್ಕೆ ರಾಜಮೌಳಿಯ ಆರ್.ಆರ್.ಆರ್ ಜೊತೆ ಕೆಜಿಎಫ್-2 ಚಿತ್ರವನ್ನ ಕಂಪೇರ್ ಮಾಡಲಾಗ್ತಿದೆ.
ಕೆಜಿಎಫ್-2 ಎಕ್ಸ್ಪೆಕ್ಟೇಷನ್ ಬೇರೆ ಲೆವೆಲ್ಲಿಗಿದೆ. ಎಕ್ಸ್ಪೆಕ್ಟೇಷನ್ ಅಷ್ಟೆ ಅಲ್ಲ, ಕ್ರೇಜ್ ಕೂಡ ಮತ್ತೊಂದು ಲೆವೆಲ್ಲಿಗಿದೆ. ಸೋಷಿಯಲ್ ಮೀಡಿಯಾದಲ್ಲಿ ಗಮನಿಸಿದ್ರೆ, ಎರಡೂ ಸಿನಿಮಾಗಳ ಮೇಲಿನ ಕ್ರೇಜ್ ಏನು ಅನ್ನೋದು ಗೊತ್ತಾಗುತ್ತೆ. ಟಾಲಿವುಡ್ ಮಂದಿಯೇ ನಡೆಸ್ತಿರೋ ಸೋಷಿಯಲ್ ಮೀಡಿಯಾ ಪೋಲ್ಗಳಲ್ಲಿ ಮೌಳಿ ಮಲ್ಟಿಸ್ಟಾರರ್ ಚಿತ್ರಕ್ಕೆ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್-2 ಫೈಟ್ ಕೊಡ್ತಿದೆ. ತೆಲುಗು- ಹಿಂದಿ ಪ್ರೇಕ್ಷಕರನ್ನೊಮ್ಮೆ ಮಾತನಾಡಿಸಿದ್ರೂ, ಕೆಜಿಎಫ್-2 ಕ್ರೇಜ್ ಏನು ಅನ್ನೋದು ಇದು ಅರ್ಥವಾಗುತ್ತೆ. ಆದ್ರೆ ಪ್ರಸ್ತುತ ಬಾಹುಬಲಿ ರೆಕಾರ್ಡ್ ದೂಳಿಪಟ ಮಾಡಲು ಕನ್ನಡದ ಕೆಜಿಎಫ್ ಪಾರ್ಟ್ 2 ರೆಡಿಯಾಗುತ್ತಿದ್ದು, ಯಾರೂ ಊಹಿಸದ ಮೆಗಾ ಕಲೆಕ್ಷನ್, ಹಿಟ್ ಪಡೆಯೋದು ಗ್ಯಾರಂಟಿ ಎಂಬ ಮಾತುಗಳು ಕೇಳು ಬರುತ್ತಿವೆ.