2021 ಜನವರಿ 8ಕ್ಕೆ ರಾಜಮೌಳಿ ನಿರ್ದೇಶನದ ಆರ್. ಆರ್. ಆರ್ ತೆರೆಗೆ

Soma shekhar
ಟಾಲಿವುಡ್ ಬಾಲಿವುಡ್ ಸೇರಿದಂತೆ ನಾಲ್ಕೈದು ಭಾಷೆಗಳಲ್ಲಿ ಬಿಡುಗಡೆಯಾಗಲು ಸೆಟ್ಟೇರುತ್ತಿರುವ ಖ್ಯಾತ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರದ ಬಿಡುಗಡೆ ದಿನಾಂಕ ಇದೀಗ ಹೊಸದಾಗಿ ಪ್ರಕಟಿಸಲಾಗಿದ್ದು, 2021ರ ಜನವರಿ 08ಕ್ಕೆ ಬಿಡುಗಡೆಯಾಗೋದು ಖಚಿತವಾಗಿದೆ. 
 
ಟಾಲಿವುಡ್ ನ ಬಾಹುಬಲಿ ಬಳಿಕ ರಾಜಮೌಳಿ ಕೈಗೆತ್ತಿಗೊಂಡ ಚಿತ್ರವೇ 'ಆರ್‌.ಆರ್‌.ಆರ್‌'. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ರಾಮ್‌ ಚರಣ್‌ ತೇಜ, ಜೂ. ಎನ್‌.ಟಿ.ಆರ್‌, ಆಲಿಯಾ ಭಟ್‌, ಅಜಯ್‌ ದೇವಗನ್‌ ಮುಂತಾದ ಜನಪ್ರಿಯ ಕಲಾವಿದರು ನಟಿಸುತ್ತಿದ್ದಾರೆ. ಹೈದರಾಬಾದ್‌ ನಲ್ಲಿ ಅದ್ದೂರಿಯಾಗಿಯೇ ಶೂಟಿಂಗ್‌ ಮಾಡಲಾಗುತ್ತಿದೆ. ನಿರ್ಮಾಪಕ ಡಿವಿವಿ ದಾನಯ್ಯ ನೂರಾರು ಕೋಟಿ ರೂ. ಬಂಡವಾಳವನ್ನು ಹೂಡಿದ್ದಾರೆ.
 
ಹಾಗಾಗಿ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರಿ ಕ್ರೇಜ್‌ ಇದೆ. ಆದಷ್ಟು ಬೇಗ 'ಆರ್‌.ಆರ್‌.ಆರ್‌' ನೋಡಬೇಕು ಎಂಬುದು ಸಿನಿಪ್ರಿಯರ ಬಯಕೆ. ಆದರೆ ಅವರಿಗೆಲ್ಲ ನಿರಾಸೆ ಕಾದಿದೆ. ಹೌದು, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವರ್ಷ, ಅಂದರೆ 2020 ಜೂನ್‌ ತಿಂಗಳಲ್ಲೇ 'ಆರ್‌.ಆರ್‌.ಆರ್‌' ತೆರೆಕಾಣಬೇಕಿತ್ತು. ಅದಕ್ಕೆ ತಕ್ಕಂತೆಯೇ ಚಿತ್ರದ ಕೆಲಸಗಳು ವೇಗವಾಗಿ ಸಾಗುತ್ತಿದ್ದವು.
 
ಮೊನ್ನೇ ತಾನೇ ಬಾಲಿವುಡ್‌ ನಟ ಅಜಯ್‌ ದೇವಗನ್‌ ಶೂಟಿಂಗ್‌ ಸೆಟ್‌ ಸೇರಿಕೊಂಡಿದ್ದರು. ಇನ್ನೇನು ಕೆಲವೇ ತಿಂಗಳಲ್ಲಿ ಸಿನಿಮಾವನ್ನು ನೋಡಬಹುದು ಎಂದು ಫ್ಯಾನ್ಸ್‌ ಲೆಕ್ಕಚಾರ ಹಾಕುತ್ತಿರುವಾಗಲೇ ಚಿತ್ರತಂಡದ ಕಡೆಯಿಂದ ಬ್ಯಾಡ್‌ ನ್ಯೂಸ್‌ ಕೇಳಿಬಂದಿದೆ. 2020ರ ಜೂನ್‌ ಬದಲಿಗೆ 2021ಕ್ಕೆ ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಮುಂದೂಡಿದ್ದಾರೆ. ಇನ್ನೂ ಒಂದು ವರ್ಷ ಕಾಯುವುದು ಅನಿವಾರ್ಯ ಆಗಿದೆ. ಆದರೆ ಈ ನಿರ್ಧಾರವನ್ನು ಯಾಕೆ ತೆಗೆದುಕೊಂಡರು? ಅದಕ್ಕೂ ಬಲವಾದ ಕಾರಣ ಇದೆ. ಸಿನಿಮಾ ಚೆನ್ನಾಗಿ ಮೂಡಿಬರಲಿ ಎಂಬ ಉದ್ದೇಶದಿಂದ ಹೆಚ್ಚಿನ ಸಮಯವನ್ನು ಚಿತ್ರದ ಕೆಲಸಗಳಿಗೆ ಮೀಸಲಿಡಲು ನಿರ್ಧರಿಸಲಾಗಿದೆಯಂತೆ. 
 
ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದರ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದೇ ಇರುತ್ತದೆ. ಹಾಗಾಗಿ ಹೆಚ್ಚು ಕಾಳಜಿ ವಹಿಸಬೇಕಾದ್ದು ಅನಿವಾರ್ಯ. ಅದರತ್ತ ರಾಜಮೌಳಿ ಗಮನ ಹರಿಸುತ್ತಿದ್ದಾರೆ. ಚಿತ್ರವನ್ನು ಬಹಳ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಗಮನ ಹರಿಸುತ್ತಿದ್ದಾರೆ ಆದ್ದರಿಂದ ಸಾಕಷ್ಟು ಸಮಯ ಬೇಕಾಗಿದೆ. ಅಭಿಮಾನಿಗಳ ನಿರೀಕ್ಷೆ ತಕ್ಕಂತೆ ಅತ್ಯುತ್ತಮವಾಗ ಮೂಡಬರಲಿದೆಯಂತೆ.
 

Find Out More:

Related Articles: