ಬೆಂಗಳೂರು: ಕರುನಾಡ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೇಮ್ಸ್ ಅವತಾರದಲ್ಲಿ ಅಖಾಡಕ್ಕೆ ಇಳಿದೇಬಿಟ್ಟಿದ್ದಾರೆ. ಹೌದು, ಸೈಲೆಂಟಾಗಿ ಕಿಡಿಗೇಡಿಗಳ ಮೂಳೆ ಮುರಿಯುವ ಕಾಯಕ ಶುರು ಮಾಡಿದ್ದು ಇದೀಗ ಭಾರೀ ಕುತೂಹಲ ಮೂಡಿಸಿದೆ.
ರಾಜಕುಮಾರ ಎಂದೇ ಖ್ಯಾತಿ ಪಡೆದಿರುವ ಪುನೀತ್ ರಾಜ್ಕುಮಾರ್ ಮತ್ತು ಬಹದ್ದೂರ್ ಚೇತನ್ ಕ್ರೇಜಿ ಕಾಂಬಿನೇಷನ್ ಸಿನಿಮಾ ಜೇಮ್ಸ್. ಇತ್ತೀಚೆಗಷ್ಟೆ ಬಾಲಾಂಜನೇಯ ಸ್ವಾಮಿಗೆ ಕೈಮುಗಿದು ಚಿತ್ರಕ್ಕೆ ಚಾಲನೆ ಕೊಟ್ಟಿದ್ದ ಚಿತ್ರತಂಡ, ಸದ್ಯ ಸೈಲೆಂಟಾಗಿ ಶೂಟಿಂಗ್ ಸ್ಟಾರ್ಟ್ ಮಾಡಿದೆ. ಅದು ಕೂಡ ಆ್ಯಕ್ಷನ್ ಎಪಿಸೋಡ್ ಶೂಟಿಂಗ್ ಎನ್ನೋದು ವಿಶೇಷ.
ಈ ಚಿತ್ರದಲ್ಲಿ ಮಾಸ್ ಲೋಕಲ್ ಹುಡುಗನಾಗಿ ಪುನೀತ್ ರಾಜ್ಕುಮಾರ್ ಬಣ್ಣ ಹಚ್ಚಿದ್ದಾರೆ. ಬಹದ್ಧೂರ್ ಚೇತನ್ ಪವರ್ ಸ್ಟಾರ್ ಅಭಿಮಾನಿಗಳನ್ನ ಮನಸ್ಸಿನಲ್ಲಿಟ್ಟುಕೊಂಡು ಜೇಮ್ಸ್ ಕತೆ ಹೆಣೆದಿದ್ದಾರೆ. ಅಪ್ಪುನ ಬಹಳ ವಿಭಿನ್ನ ಅವತಾರದಲ್ಲಿ ತೋರಿಸೋ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗ್ತಿದೆ. ಪಕ್ಕಾ ಮಾಸ್ ಮಾಸಾಲಾ ಆ್ಯಕ್ಷನ್ ಎಂಟ್ರಟ್ರೈನರ್ ಸಿನಿಮಾ ಇದು. ಅಪ್ಪು ಆ್ಯಕ್ಷನ್. ಆ್ಯಕ್ಷನ್ ಅಂದ್ರೆ ಅಪ್ಪು. ಹಾಗಾಗಿ ಬಹಳ ವಿಭಿನ್ನವಾಗಿ ಆ್ಯಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡಲಾಗ್ತಿದೆ.
ಪ್ರಸ್ತುತ ಪುನೀತ್ ರಾಜ್ ಕುಮಾರ್ ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ‘ಊರಿಗೊಬ್ಬ ರಾಜ’ ಎನ್ನೋ ಸಾಂಗ್ ಶೂಟ್ ಮಾಡಿ ಮುಗಿಸಿದ್ದಾರೆ. ಫೆ.24ಕ್ಕೆ ಡ್ಯುಯೆಟ್ ಸಾಂಗ್ ಶೂಟಿಂಗ್ಗಾಗಿ ಯೂರೋಪ್ ಫ್ಲೈಟ್ ಹತ್ತಲಿದ್ದಾರೆ. ಈ ಗ್ಯಾಪ್ನಲ್ಲೇ ಜೇಮ್ಸ್ ಸಿನಿಮಾದ ಸಣ್ಣ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಮಾಡಲಾಗುತ್ತಿದೆ.
ನಾಲ್ಕರಿಂದ ಐದು ದಿನಗಳ ಸಣ್ಣ ಶೆಡ್ಯೂಲ್ ನಲ್ಲಿ ರವಿವರ್ಮ ಸಾಹಸ ಸಂಯೋಜನೆಯಲ್ಲಿ ಜೇಮ್ಸ್ ಅಬ್ಬರಿಸ್ತಿದ್ದಾನೆ. ವೈಟ್ ಫೀಲ್ಡ್ ಹೂಡಿ ಬಳಿ ಸೆಟ್ ಆಗಿ ಈ ಆ್ಯಕ್ಷನ್ ಎಪಿಸೋಡ್ ಚಿತ್ರೀಕರಣ ಮಾಡಲಾಗ್ತಿದೆ. ಕಥೆಗೆ ತಕ್ಕಂತೆ ನೈಟ್ ಮೂಡ್ ನಲ್ಲಿ ಶೂಟಿಂಗ್ ಮಾಡಲಾಗ್ತಿದೆ. ಪವರ್ ಸ್ಟಾರ್ ನೆವರ್ ಬಿಫೋರ್ ಅನ್ನುವಂತೆ ಸ್ಟಂಟ್ಸ್ನ ಟ್ರೈ ಮಾಡ್ತಿದ್ದಾರೆ. ಐದು ದಿನಗಳ ಕಾಲ ರಾತ್ರಿ ಹೊತ್ತು ಸೆಟ್ನಲ್ಲಿ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಮಾಡುವ ಲೆಕ್ಕಾಚಾರ ಮಾಡಿದ್ದಾರೆ.