ಅಭಿಮಾನಿಗಳಿಗೆ ಆರೋಗ್ಯಕ್ಕಿಂತ ಹಬ್ಬವೇ ಹೆಚ್ಚಾಯ್ತ ಅಂತ ಹ್ಯಾಟ್ರಿಕ್ ಹೀರೋ ಕೇಳಿದ್ಯಾಕೆ ?

Soma shekhar

ಬೆಂಗಳೂರು: ವಿಶ್ವದಾದ್ಯಂತ ಕರೋನೊ ವೈರಸ್ ಪ್ರಭಾವ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ರಕ್ಷಿಸುವ ದೃಷ್ಟಿಯಿಂದ. ಇಡೀ ಭಾರತವನ್ನು ಸುಮಾರು ೨೧ದಿನಗಳ ಕಾಲ ಲಾಕ್ ಡೌನ್ ಮಾಡಲು ಆದೇಶವನ್ನು ಹೊರಡಿಸಲಾಗಿದೆ.  ಈ ಹಿನ್ನಲೆಯಲ್ಲಿ ಇಂದಿನಿಂದ ಇಡೀ ಭಾರತ ಲಾಕ್ ಡೌನ್ ಆಗಿದೆ ಈ ಕುರಿತು ಎಲ್ಲಾ ಸೆಲಬ್ರೆಟಿಗಳು ಕರೋನೊ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಇದಕ್ಕೆ ಉದಾ ಎಂಬಂತೆ ಸ್ಯಾಂಡಲ್ ಹುಡ್ನ ಡಾ. ಶಿವರಾಜ್ ಕುಮಾರ್  ಸಾಮಾಜಿಕ  ಜಾಲತಾಣದಲ್ಲಿ ಕರೋನೊ ವೈರಸ್ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ  ಅಷ್ಟಕ್ಕೂ ಶಿವರಾಜ್ ಕುಮಾರ್ ತಮ್ಮ ಅಭಮಾನಿಗಳಿಗೆ ಹೇಳಿರುವುದಾದರೂ ಏನು? ಇಲ್ಲಿದೆ ನೋಡಿ. 

 

ಹೌದು ಶಿವರಾಜ್ ಕುಮಾರ್ ಅವರಿಗೆ ದೊಡ್ಡ ಅಭಿಮಾನಿಗಳ ಬಳಗ ಇದೆ. ಇದೀಗ ಎಲ್ಲೆಡೆ ಕರೊನಾ ಕಟ್ಟೆಚ್ಚರ ಜಾರಿಯಲ್ಲಿರುವುದರಿಂದ ಯುಗಾದಿ ಹಬ್ಬಕ್ಕೂ ಕಾರ್ಮೋಡ ಕವಿದಿದೆ. ಹಾಗಾಗಿ ಈ ಬಾರಿಯ ಹಬ್ಬ ಬೇಡವೇ ಬೇಡ. ಮನೆಯಲ್ಲಿ ಸುರಕ್ಷಿತವಾಗಿದ್ದರೆ ಅದೇ ದೊಡ್ಡ ಹಬ್ಬ ಎಂಬಂಥ ಮಾತುಗಳೂ ಕೇಳಿಬರುತ್ತಿವೆ. ಸರ್ಕಾರವೂ ಜಾಗೃತಿ ಮೂಡಿಸುವ ಕೆಲಸವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಈ ಮಧ್ಯೆ ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ’ಸರ್ಕಾರ ಹೊರಡಿಸಿದ ಆದೇಶ ಪಾಲಿಸೋಣ. ಕರೊನಾ ಓಡಿಸುವುದು ನಮ್ಮ ಕರ್ತವ್ಯ. ಹಬ್ಬ ಬಂದಿದೆ. ಅದ್ದೂರಿ ಆಚರಣೆ ಬೇಡ. ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ’ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

 

 

ಹೊರಬರದಂತೆ ಕಟ್ಟಪ್ಪಣೆ ಹೊರಡಿಸಿದ್ದರೂ, ಜನತೆ ಹಬ್ಬದ ಖರೀದಿ ಸಲುವಾಗಿ ಮಾರುಕಟ್ಟೆಗಳತ್ತ ಹೊರಟಿದ್ದಾರೆ. ಅದನ್ನು ಗಮನಿಸಿದ ಶಿವಣ್ಣ, ’ಈಗಾಗಲೇ ಜನತೆ ಭಯದಲ್ಲಿದೆ. ಗುಂಪು ಗುಂಪಾಗಿ ಸೇರಬೇಡಿ ಎಂದು ಎಲ್ಲೆಡೆ ಹೇಳಲಾಗುತ್ತಿದೆ. ಪರಿಸ್ಥಿತಿ ಕೈ ಮೀರುತ್ತಿದ್ದರೂ, ಹೊರ ಬರುವುದೇಕೆ? ಪೊಲೀಸರ ಲಾಠಿಗೆ ಕೆಲಸ ಕೊಡಬೇಡಿ. ದಯಮಾಡಿ, ಮನೆಯಲ್ಲೇ ಕುಟುಂಬದೊಟ್ಟಿಗೆ ಹಬ್ಬ ಮಾಡಿ. ಆಗಾಗ ಕೈ ತೊಳೆಯುತ್ತಿರಿ. ಸರ್ಕಾರದ ಆದೇಶ ಪಾಲಿಸಿ’ ಎಂದು ಕಳಕಳಿಯಿಂದ ಹೇಳಿದ್ದಾರೆ.

 

ಇತ್ತ ಸ್ಯಾಂಡಲ್ವುಡ್ನ ಇನ್ನೂ ಹಲವು ನಟ-ನಟಿಯರು ಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಣೆ ಮಾಡಿ. ಅದ್ದೂರಿತನದ ಮೊರೆ ಹೋಗಬೇಡಿ ಎಂದಿದ್ದಾರೆ.

Find Out More:

Related Articles: