ಎಂದಿಗೆ ಸಿಗಲಿದೆ ಪುನಿತ್ ರಾಜ್ ಕುಮಾರ್ ತಯಾರಿಸಿರುವ ಫ್ರೆಂಚ್ ಬಿರಿಯನಿ.?!!

Soma shekhar

ಸಾಲು ಸಾಲು ಅದ್ಭುತ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಪಿಆರ್ ಕೆ ಪ್ರೊಡಕ್ಷನ್ ಬಹಳ ಎಚ್ಚರಿಕೆಯಿಂದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಹೋಡಾಡುತ್ತಿದೆ. ಪಿಆರ್ ಕೆ ಪ್ರೊಡಕ್ಷನ್ ಸಿನಿಮಾ ಅಂದರೆ ಅದು ಪ್ರೇಕ್ಷಕರಿಗೆ ಮುಟ್ಟುವಂತಹ ಸಿನಿಮಾ ವಾಗಿರುತ್ತದೆ ಎಂಬ ಮಾತೂ ಕೂಡ ಇದೆ, ಅದರಂತೆ ಕವಲುದಾರಿ, ಮಯಾಬಜಾರ್. ಲಾ ಹೋಗೆ ವಿವಿಧ ಬಗೆಯ ಸಿನಿಮಾ ಗಳನ್ನು ನಿರ್ಮಾಣ ಮಾಡಿರುವ ಪಿಆರ್ ಕೆ ಪ್ರೊಡಕ್ಷನ್ ಈ ಬಾರಿ ಬಿಸಿ ಬಿಸಿ ಪ್ರೆಂಚ್ ಬಿರಿಯಾನಿಯನ್ನು ತಯಾರಿಸಿ ಸಿನಿರಸಿಕರಿಗೆ ಉಣಬಡಿಸಲು ಬರುತ್ತಿದೆ,  

 

ಹೌದು ಪಿಆರ್​ಕೆ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ನಿರ್ಮಾಣವಾಗಿರೋ ನಾಲ್ಕನೇ ಸಿನಿಮಾ ಫ್ರೆಂಚ್​ ಬಿರಿಯಾನಿ. ಪನ್ನಗಾಭರಣ ನಿರ್ದೇಶನದ ಈ ಕಾಮಿಡಿ ಥ್ರಿಲ್ಲರ್​ ಸಿನಿಮಾ ಮುಂದಿನ ವಾರ ಸಿನಿರಸಿಕರ ಮುಂದೆ ಬರ್ತಿದೆ. ಈಗಾಗಲೇ ಚಿತ್ರದ ಟ್ರೈಲರ್​​ ನೋಡುಗರ ಗಮನ ಸೆಳೆದಿದೆ. ಥಿಯೇರಟ್​ ಬಂದ್​ ಆಗಿರುವ ಕಾರಣ ಲಾ ಸಿನಿಮಾ ರೀತಿಯಲ್ಲೇ ಫ್ರೆಂಚ್​ ಬಿರಿಯಾನಿ ಕೂಡ ಡಿಜಿಟಲ್​ ಫ್ಲಾಟ್​ಫಾರ್ಮ್​​ನಲ್ಲಿ ಪ್ರೀಮಿಯರ್​ ಆಗಲಿದೆ.

 

ಬೆಂಗಳೂರಿನ ಆಟೋಡ್ರೈವರ್ ಅಸ್ಗರ್ ಪಾತ್ರದಲ್ಲಿ ದಾನಿಶ್ ಸೇಠ್‌ ಬಣ್ಣ ಹಚ್ಚಿದ್ರೆ, ಫ್ರಾನ್ಸ್ ದೇಶದಿಂದ ಭಾರತಕ್ಕೆ ಬರುವ ಸೈಮನ್ ಎಂಬ ವ್ಯಕ್ತಿಯ ಪಾತ್ರದಲ್ಲಿ ಬಾಲಿವುಡ್‌ ನಟ ಸಾಲ್‌ ಯೂಸುಫ್ ನಟಿಸಿದ್ದಾರೆ. ಇವರಿಬ್ಬರ ನಡುವೆ ಫ್ರೆಂಚ್​ ಬಿರಿಯಾನಿ ಸಿನಿಮಾ ಕಥೆ ಸಾಗುತ್ತೆ. ವಾಸುಕಿ ವೈಭವ್​ ಚಿತ್ರಕ್ಕೆ ಮ್ಯೂಸಿಕ್​ ಕಂಪೋಸ್​ ಮಾಡಿದ್ದು, ದಿ ಬೆಂಗಳೂರು ಅನ್ನೋ ರ್ಯಾಪ್​​ ಸಾಂಗ್​ ರಿಲೀಸ್​ ಆಗಿದೆ.

 

ಸಿಲಿಕಾನ್​ ಸಿಟಿಯ ಅಂದ, ಚೆಂದದ ಜೊತೆಗೆ ಇಲ್ಲಿನ ಅವಸ್ಥೆ, ಟ್ರಾಫಿಕ್​​ ಕಿರಿಕಿರಿ, ರಸ್ತೆಗಳ ಪಜೀತಿ ಹೀಗೆ ಎಲ್ಲವನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಅತಿಥಿಗಳನ್ನು ಹೇಗೆ ಬೆಂಗಳೂರು ಕೈಬೀಸಿ ಕರೆಯುತ್ತೆ ಅನ್ನೋದನ್ನು ಹೇಳಲಾಗಿದೆ. ಆಟೋದಲ್ಲಿ ಡ್ರೈವರ್ ಅಸ್ಗರ್ ಮತ್ತು ಸೈಮನ್ ಪಯಣದ ನಡುವೆ ಈ ಹಾಡು ಮೂಡಿ ಬಂದಿದೆ. ರ್ಯಾಪ್​​​ ಸಾಂಗನ್ನು ಅರುಣ್​ ಸಾಗರ್​ ಪುತ್ರಿ ಅದಿತಿ ಸಾಗರ್​​ ಹಾಡೋದ್ರ, ಜೊತೆಗೆ ಪರ್ಫಾರ್ಮ್​ ಮಾಡಿದ್ದಾರೆ.

 

ಛಾಯಾಗ್ರಾಹಕ ಕಾರ್ತಿಕ್​ ಪಳನಿ ಅಂಡ್ ಟೀಂ ಹಾಡಿನಲ್ಲಿ ಬೆಂಗಳೂರನ್ನ ಬಹಳ ಸೊಗಸಾಗಿ ಸೆರೆ ಹಿಡಿದಿದ್ದಾರೆ. ಬೆಂಗಳೂರಿನ ಗಲ್ಲಿ ಗಲ್ಲಿಯಿಂದ ಹಿಡಿದು, ವಿಧಾನಸೌಧ, ಮೆಜೆಸ್ಟಿಕ್, ಮಾರ್ಕೆಟ್​ ಹೀಗೆ ಇಡೀ ಬೆಂಗಳೂರಿನ ದರ್ಶನ ಮಾಡಿಸುತ್ತೆ ಈ ಹಾಡು.

ಮ್ಯೂಸಿಕ್​ ಮಾಡೋದರ ಜೊತೆಗೆ ಅವಿನಾಶ್​ ಜೊತೆ ಸೇರಿ ವಾಸುಕಿ ವೈಭವ್​ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸುಹಾಸ್​ ಕೊರಿಯೋಗ್ರಫಿ ಈ ಹಾಡಿಗಿದೆ. ಬೆಂಗಳೂರಿನ ಕಂಪ್ಲೀಟ್​ ಚಿತ್ರಣವನ್ನ ತೆರೆದಿಡುವ ಹಾಡು ಕನ್ನಡ ಸಿನಿರಸಿಕರ ಮನ ಗೆದ್ದಿದೆ.

 

ರಂಗಾಯಣ ರಘು ಫ್ರೆಂಚ್​ ಬಿರಿಯಾನಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಶಾ ಮದನ್‌, ಮಹಾಂತೇಶ್‌ ಹಿರೇಮಠ್, ಸಂಪತ್‌ಕುಮಾರ್, ನಾಗಭೂಷಣ್, ಸಿಂಧು ಮೂರ್ತಿ ಪೋಷಕ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ನಿರ್ದೇಶಕ ಪನ್ನಗಾಭರಣ ನಿಜ ಅನುಭವಗಳನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಚಿತ್ರದ ಕಥೆ ಬರೆದು ನಿರ್ದೇಶಿಸಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್​​​​ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಗುರುದತ್ತ ಎ. ತಲ್ವಾರ್ 'ಫ್ರೆಂಚ್ ಬಿರಿಯಾನಿ'ಗೆ ಹಣ ಹಾಕಿದ್ದಾರೆ. ಜುಲೈ 24ರಂದು ಚಿತ್ರವನ್ನು ನೋಡಬಹುದು.

 

Find Out More:

Related Articles: