ಪ್ರೆಂಚ್ ಬಿರಿಯಾನಿಯ ಪುನಿತ್ ರಾಜ್ ಕುಮಾರ್ ಹಾಡಿರುವ ಈ ಹಾಡು ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ..!!

Soma shekhar

ಕೊರೋನಾ ದಿಂದಾಗಿ ಇಡೀ ಚಿತ್ರರಂಗವೇ ಸ್ಥಬ್ದವಾಗಿದೆ, ನಡೆಯಬೇಕಿದ್ದ ಅದೆಷ್ಟೋ ಚಿತ್ರೀಕರಣಗಳು ಬಂದ್ ಆಗಿದೆ,  ಆದರೆ ಕೆಲವು ಚಿತ್ರಗಳು ಚಿತ್ರೀಕರಣವನ್ನು ಮುಗಿಸಿ ಸುಮ್ಮನೆ ಕೂರದೆ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತಿದೆ. ಈ ಮೂಲಕ ವಿಶ್ವದಾಧ್ಯಂತ ಪ್ರೇಕ್ಷಕರನ್ನು ಸೃಷ್ಟಿಸಿಕೊಳ್ಳುತ್ತಿದೆ. ಅದರಂತೆ ಕನ್ನಡ ಚಿತ್ರರಂಗದಲ್ಲೂ ಕೂಡ ಅನೇಕ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅದರಂತೆ ಒಟಿಟಿಯಲ್ಲಿ ಬಿಡುಗಡೆಗಾಗಿ ಕ್ಷಣಗಣೆ ಎಣಿಸುತ್ತಿರುವ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿರುವ ಚಿತ್ರ ಪ್ರೆಂಚ್ ಬಿರಿಯಾನಿ.ಈ ಪ್ರೆಂಚ್ ಬಿರಿಯಾನಿಯಲ್ಲಿ ಒಂದು ಹಾಡಿಗೆ ಪುನಿತ್ ರಾಜ್ ಕುಮಾರ್ ಧ್ವನಿಯಾಗಿದ್ದು ಈ ಹಾಡು ಹೆಚ್ಚು ಸದ್ದು ಮಾಡುತ್ತಿದೆ  

 

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಒಳ್ಳೆ ಆಯಕ್ಟರ್​ ಅಷ್ಟೆ ಅಲ್ಲ, ಒಳ್ಳೆ ಸಿಂಗರ್​​ ಕೂಡ ಹೌದು. ಅಪ್ಪು ಹಾಡಿರೋ ಸಾಂಗ್ಸ್​​ ಸೂಪರ್​ ಹಿಟ್​ ಆಗಿವೆ. ಇತ್ತೀಚೆಗೆ ಪಿಆರ್​ಕೆ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಪುನೀತ್, ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನ ನಿರ್ಮಿಸ್ತಿದ್ದಾರೆ. ತಮ್ಮದೇ ಬ್ಯಾನರ್​​ನ ಚಿತ್ರವೊಂದಕ್ಕೆ ಅಪ್ಪು ಹಾಡಿರೋ ಸಾಂಗ್​ ಸಖತ್​ ಮಜವಾಗಿದೆ.

 

ಪಿಆರ್​ಕೆ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಪುನೀತ್​ ರಾಜ್​ಕುಮಾರ್​ ನಿರ್ಮಾಣದ ಫ್ರೆಂಚ್​ ಬಿರಿಯಾನಿ ಸಿನಿಮಾ ರಿಲೀಸ್​ಗೆ ಕ್ಷಣಗಣನೆ ಶುರುವಾಗಿದೆ. ಈ ಹೊತ್ತಲ್ಲೇ ಚಿತ್ರದ ಬೊಂಬಾಟ್​ ಸಾಂಗ್​ ರಿಲೀಸ್​ ಆಗಿದೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ವಾಯ್ಸ್​ನಲ್ಲಿ ಹಾಡು ಅಭಿಮಾನಿಗಳಿಗೆ ಕಿಕ್​ ಕೊಡ್ತಿದೆ.

 

ನರಕಕ್ ಇಳ್ಸಿ.. ನಾಲ್ಗೆ ಸೀಳ್ಸಿ.. ಬಾಯ್ ಒಲಿಸಾಕಿದ್ರೂನೆ.. ಮೂಗ್ನಲ್ ಕನ್ನಡ್ ಪದವಾಡ್ತೀನಿ, ಅನ್ನೋ ಜಿ.ಪಿ ರಾಜರತ್ನಂ ಅವರ ಸಾಲುಗಳನ್ನು ಬಳಸಿಕೊಂಡು ಈ ಹಾಡನ್ನ ಕಟ್ಟಿಕೊಡಲಾಗಿದೆ. ವಾಸುಕಿ ವೈಭವ್​​ ಸಂಗೀತದ ಜೊತೆ ಅಭಿಷೇಕ್​ ಜೊತೆ ಸೇರಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಜಿ. ಪಿ ರಾಜರತ್ನಂ ಅವರ ಸಾಲುಗಳ ಜೊತೆಗೆ ಒಂದಷ್ಟು ಹೊಸ ಸಾಲುಗಳನ್ನ ಸೇರಿಸಿ ಹಾಡನ್ನ ಕಟ್ಟಿಕೊಡಲಾಗಿದೆ. ಬಾರಿನಲ್ಲಿ ಶೂಟ್​ ಮಾಡಿರೋ ಹಾಡಿನಲ್ಲಿ ಕುಡುಕರ ಫಿಲಾಸಫಿಯೂ ಇದೆ.

 

ಫ್ರೆಂಚ್​ ಬಿರಿಯಾನಿ ಸಿನಿಮಾವನ್ನ ನಿರ್ದೇಶನ ಮಾಡಿರುವ ನಿರ್ದೇಶಕ ಪನ್ನಗಾಭರಣ ಬಣ್ಣ ಹಚ್ಚಿ ಹಾಡಿಗೆ ಹೆಜ್ಜೆ ಹಾಕಿರೋದು ವಿಶೇಷ. ಪುನೀತ್​ ರಾಜ್​ ವಾಯ್ಸ್​ನಲ್ಲಿ ಹಾಡು ಸಖತ್​ ಮಜವಾಗಿದ್ದು, ಸಿನಿಮಾ ನೋಡುವ ಕುತೂಹಲ ಹೆಚ್ಚಿಸುವಂತಿದೆ. ದಾನಿಶ್​ ಸೇಠ್​ ಮತ್ತು ಸಾಲ್ ಯೂಸುಫ್​ ಫ್ರೆಂಚ್​ ಬಿರಿಯಾನಿ ಚಿತ್ರದ ಲೀಡ್​ ರೋಲ್​ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಶುಕ್ರವಾರ ಓಟಿಟಿ ಫ್ಲಾಟ್​ಫಾರ್ಮ್​​ಗೆ ಸಿನಿಮಾ ಬರಲಿದೆ.

 

 

Find Out More:

Related Articles: