ಸದ್ದು ಮಾಡಲು ಶುರುಮಾಡಿದ ಬಿಗಿಲ್ ಚಿತ್ರ

somashekhar
ಬಿಗಿಲ್ ಚಿತ್ರ ಕಾಲಿವುಡ್ ನಲ್ಲಿ ಇದೀಗ ಆ ಚಿತ್ರದ ಹವಾ ಶುರುವಾಗಿದೆ. ಚಿತ್ರ ಸೆಟ್ಟೇರಿದಾಗಿನಿಂದ ಒಂದಿಲ್ಲೊಂದು ವಿಷಯಗಳಿಂದ ಪೋಸ್ಟರ್ ಭಾರೀ ಸದ್ದು ಮಾಡಿತ್ತು. ಇದೀಗ ಬಿಡುಗಡೆಯಾದ ಟೀಸರ್ ಇಡೀ ಕಾಲಿವುಡ್ ನಲ್ಲೇ ಗುಡುಗುತ್ತಿದೆ. ಮಾಸ್ ಮಹಾರಾಜ ಇಳಯ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ 'ಬಿಗಿಲ್' ಚಿತ್ರದ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆಯಿಟ್ಟಿದ್ದರು. ಇದೀಗ ಟೀಸರ್ ಬಿಡುಗಡೆಯಾಗಿ ಲವ್, ಸೆಂಟಿಮೆಂಟ್​, ಕ್ರೀಡಾ ಸ್ಫೂರ್ತಿಯಿಂದ ಕೂಡಿರುವ ಈ ವಿಡಿಯೋ ತುಣುಕು ಚಿತ್ರಪಿಯರ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಚಿತ್ರದಲ್ಲಿ ವಿಜಯ್ ಡಬ್ಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಒಂದರಲ್ಲಿ ಫುಟ್​ಬಾಲ್ ಆಟಗಾರ, ಕೋಚ್ ಮೈಕೆಲ್ ಆಗಿ ಎಂಟ್ರಿ ಕೊಡಲಿದ್ದಾರೆ. ಮತ್ತೊಂದರಲ್ಲಿ ಖಳರನ್ನು ಚೆಂಡಾಡುವ ರಗಡ್ ರಾಯಪ್ಪನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಖತ್ ಕಲರ್​ಫುಲ್ ಆಗಿ ಮೂಡಿ ಬಂದಿರುವ ಟ್ರೈಲರ್​ನಲ್ಲಿ ಮಾಸ್ ಡೈಲಾಗ್ ಅಣಿಮುತ್ತುಗಳನ್ನು ಇಳಯ ದಳಪತಿ ಉದುರಿಸಿದ್ದು, ಎ ಆರ್​. ರೆಹಮಾನ್ ಬ್ಯಾಕ್​ಗ್ರೌಂಡ್ ಮ್ಯೂಸಿಕ್, ನಾಯಕನ ಹೊಸ ಲುಕ್ ಹಾಗೂ ಡೈಲಾಗ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇನ್ನು 'ಬಿಗಿಲ್'​ಗೆ ನಾಯಕಿಯಾಗಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಬಣ್ಣ ಹಚ್ಚಿದ್ದು, ಇವರೊಂದಿಗೆ ಕತಿರ್, ಜಾಕಿ ಶ್ರಾಫ್, ಯೋಗಿ ಬಾಬು, ಕನ್ನಡತಿ ವರ್ಷ ಬೊಳ್ಳಮ್ಮ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಎಜಿಎಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಿಸಿದ್ದು, 'ರಾಜಾ ರಾಣಿ', 'ಮೆರ್ಸಲ್' ಖ್ಯಾತಿಯ ಅಟ್ಲಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಕ್ಟೋಬರ್ 27 ರಂದು ದೀಪಾವಳಿ ಹಬ್ಬದಂದು ವಿಶ್ವದಾದ್ಯಂತ ಬಿಗಿಲ್ ಅಬ್ಬರ ಶುರುವಾಗಲಿದೆ. 

ಬಿಗಿಲ್ ಚಿತ್ರದಲ್ಲಿ ಎ ಆರ್ ರೆಹಮಾನ್ ಸಂಗೀತ ಇರುವುದರಿಂದ ಚಿತ್ರದಲ್ಲಿ ಇಂಪಾದ ಸಖತ್ ಹಾಡುಗಳು ಇರಲಿವೆಯಂತೆ. ಈಗಾಗಲೇ ಟ್ರೈಲರ್ ನಲ್ಲಿ ಹಾಡುಗಳ ಎರಡು ಜಲಕ್ ತೋರಿಸಿದ್ದು, ಪ್ರೇಕ್ಷಕರ ಮನ ಮೆಚ್ಚಲಿದೆ ಎಂದು ರೆಹಮಾನ್ ಮತ್ತು ಚಿತ್ರತಂಡ ಹೇಳಿದೆ. ಚಿತ್ರದಲ್ಲಿ ಕ್ಯಾಮರಾ ಕಣ್ಣು ಅದ್ಭುತವಾಗಿ ಮೂಡಿಬಂದಿದೆ ಯಂತೆ ಈಗಾಗಲೇ ಇದು ಟ್ರೈಲರ್ ಮೂಲಕ ಜನರ ಮನ ಮೆಚ್ಚಿದೆ.


Find Out More:

Related Articles: