ಮಾಜಿ ಪ್ರಧಾನಿ ದೇವೇಗೌಡಗೆ ಸೋಲು

Narayana Molleti
ದೇಶದ ಮಾಜಿ ಪ್ರಧಾನಿ ದೇವೇಗೌಡ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಅಷ್ಟಕ್ಕೂ ಈ ಸೋಲಿಗೆ ಕಾರಣವೇನು ಅನ್ನೋದು ಇಲ್ಲಿದೆ ನೋಡಿ.

ಈ ಹಿಂದೆ ದೇಶದ ಪ್ರಧಾನಿಯಾಗಿ ಜವಾಬ್ದಾರಿಯುತ ಹುದ್ದೆ ನಿರ್ವಹಿಸಿದ್ದ ದೇವೇಗೌಡ ಅವರನ್ನು ತುಮಕೂರು ಜನತೆ ತಿರಸ್ಕರಿಸಿದೆ. ಇದು ಸ್ವತಃ ದೇವೇಗೌಡರಿಗೂ ಆಘಾತ ತಂದಿದೆ ಎಂದು ಹೇಳಬಹುದು. ಆದರೆ ಈ ಸೋಲಿನ ಹಿಂದೆ ಅನೇಕ ಕಾರಣಗಳು ಅಡಗಿವೆ ಅನ್ನೋದು ಸತ್ಯ

ಮಾಜಿ ಪ್ರಧಾನಿ ದೇವೇಗೌಡ ಅವರು ತಮ್ಮ ಭದ್ರಕೋಟೆ ಹಾಸನವನ್ನು ಮೊಮ್ಮಗ ಪ್ರಜ್ವಲ್ ಗೆ ಬಿಟ್ಟು ಕೊಟ್ಟು ತುಮಕೂರಿನಿಂದ ಸ್ಪರ್ಧಿಸೋಕೆ ಮುಂದಾಗಿದ್ದು ಅವರು ಮಾಡಿದ ಮೊದಲ ತಪ್ಪು. ಇದರ ಜೊತೆಗೆ ತುಮಕೂರಿನ ಮಾಜಿ ಸಂಸದ ಮುದ್ದೆಹನುಮೇಗೌಡ ಅವರ ಸ್ಥಾನವನ್ನು ಕಿತ್ತುಕೊಂಡಿದ್ದು ತುಮಕೂರು ಜನತೆಗೆ ಸಹಜವಾಗಿಯೇ ಆಕ್ರೋಶವನ್ನು ಹುಟ್ಟಿಸಿತ್ತು.

ತುಮಕೂರು ಕ್ಷೇತ್ರದ ಬಂಡಾಯ ಅಭ್ಯರ್ಥಿ ರಾಜಣ್ಣ ಸಹ ದೇವೇಗೌಡರು ತುಮಕೂರು ಪ್ರವೇಶಿಸಿದ್ದನ್ನು ವಿರೋಧಿಸಿದ್ದರು. ಅಲ್ಲದೇ ಬಂಡಾಯವೆದ್ದು ಸ್ಪರ್ಧೆಗೂ ನಿಂತಿದ್ದರು. ಆದರೆ ಅದ್ಹೇಗೋ ರಾಜ್ಯ ನಾಯಕರ ಮದ್ಯಪ್ರವೇಶದಿಂದ ಅವರು ಸ್ಪರ್ಧೇಯಿಂದ ಹಿಂದೆ ಸರಿದಿದ್ದರು.

ಕೊನೆಗೂ ದೇವೇಗೌಡ ಅವರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲೋದು ಸಾಧ್ಯವಾಗಿಲ್ಲ. ಬಿಜೆಪಿ ಅಭ್ಯರ್ಥಿ, ತುಮಕೂರಿನ ಹಳೆಯ ಹುಲಿ ಬಸವರಾಜು ಅವರ ವಿರುದ್ಧ 12887 ಮತಗಳ ಅಂತರದಿಂದ ದೇವೇಗೌಡ ಸೋಲನ್ನಪ್ಪಿದ್ದಾರೆ. 


Find Out More:

Related Articles: