ಯಡಿಯೂರಪ್ಪ ಕಾಂಗ್ರೆಸ್ ಗೆ ಬಂದರೆ ಸಿಎಂ ಅಂತೆ!

somashekhar

ರಾಜ್ಯದಲ್ಲಿ ಒಬ್ಬರಲ್ಲ ಇಬ್ಬರಲ್ಲ, ಅನೇಕ ರಾಜಕಾರಣಿಗಳಿಗೆ ಸಿಎಂ ಆಗಬೇಕು ಅನ್ನೋ ಆಸೆ ಇದೆ. ಇದೇ ರೀತಿ ಯಡಿಯೂರಪ್ಪ ಅವರಿಗೂ ಮತ್ತೊಮ್ಮೆ ಸಿಎಂ ಆಗಬೇಕು ಅನ್ನೋ ಆಶಯವನ್ನು ಅವರು ಆಗಾಗ ವ್ಯಕ್ತಪಡಿಸಿದ್ದಾರೆ. ಇದೀಗ ಅವರಿಗೆ ಒಂದು ಸದವಕಾಶ ಬಂದಿದೆ.

 

ಹೌದು, ವಿಷ್ಯ ಏನಪ್ಪ ಅಂದರೆ , ಯಡಿಯೂರಪ್ಪ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬಂದರೆ, ಅವರನ್ನು ಸಿಎಂ ಮಾಡಲು ಸಹಕರಿಸುತ್ತೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಇದ್ದಾರೆ. ಅವರಿಗೆ ಮುಖ್ಯಮಂತ್ರಿ ಆಗಬೇಕು ವಾನ್ನೋ ಆಸೆ ಇದ್ದರೆ, ಅವರು ಕಾಂಗ್ರೆಸ್ ಗೆ ಬರಲಿ ಎಂದರು.

 

ಯಡಿಯೂರಪ್ಪ ಅವರು ಸಿಎಂ ಆಗಬೇಕು ಅನ್ನೋ ಆಸಯ ಇಟ್ಟಿಕೊಂಡಿರುವುದು ತಪ್ಪೇನಲ್ಲ. ಅದಕ್ಕೆ ನನ್ನ ಆಕ್ಷೇಪಣೆಯೂ ಇಲ್ಲ ಎಂದಿದ್ದಾರೆ. 

 

ಬಿಜೆಪಿ ನಾಯಕರು ಕಳೆದ ಒಂದು ವರ್ಷದಿಂದಲೂ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು. 

 

Find Out More:

Related Articles: