ರಾಮಲಿಂಗಾರೆಡ್ಡಿಗೆ ಅವಕಾಶ ಕೊಡ್ತೀವಿ

somashekhar

ಸಚಿವ ಸಂಪುಟದಲ್ಲಿ ಅವಕಾಶ ಸಿಗದೇ ಇರೋದಕ್ಕೆ ರಾಮಲಿಂಗಾ ರೆಡ್ಡಿ ಗರಂ ಆಗಿದ್ದರು. ಅಲ್ಲದೇ ರೆಡ್ಡಿ ಅಭಿಮಾನಿಗಳು ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಸಿದ್ದರಾಮಯ್ಯ ಇದೀಗ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನದ ಅವಕಾಶ ನೀಡುವ ಕುರಿತು ಮಾತನಾಡಿದ್ದಾರೆ. 

 

(ರಾಮಲಿಂಗಾ ರೆಡ್ಡಿ) 

 

ಹೌದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಪ್ರಭಾವಿ ಆಗಿರೋ ರಾಮಲಿಂಗಾ ರೆಡ್ಡಿ ಅವರಿಗೆ ಸಂಪುಟ ಪುನರ್ ರಚನೆ ವೇಳೆ ಅವಕಾಶ ನೀಡಲಾಗುವುದು. ಸಿ.ಎಸ್. ಶಿವಳ್ಳಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರನ್ನು ನೇಮಿಸಲಾಗುವುದು ಎಂದಿದ್ದಾರೆ. ಈ ಮೂಲಕ ಬಂಡಾಯ ಎದ್ದಿರೋ ರಾಮಲಿಂಗಾ ರೆಡ್ಡಿ ಅವರನ್ನು ಸಿದ್ದರಾಮಯ್ಯ ಸಮಾಧಾನ ಮಾಡಿದ್ದಾರೆ. 

 

'ಖರ್ಗೆ ಮುಖ್ಯಮಂತ್ರಿ ಆಗಬಾರದು ಎಂದಿಲ್ಲ'

(ಮಲ್ಲಿಕಾರ್ಜುನ್ ಖರ್ಗೆ)

 

ಇನ್ನು ಮಲ್ಲಿಕಾರ್ಜುನ್ ಖರ್ಗೆ ವಿಷಯವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ನಾನೆಂದೂ ಪರಮೆಶ್ವರ ಅಥವಾ ಖರ್ಗೆ ಅವರು ಮುಖ್ಯಮಂತ್ರಿ ಆಗಬಾರದು ಎಂದು ಹೇಳಿಲ್ಲ. 2013 ರಲ್ಲಿ ನಮ್ಮ ಪಕ್ಷದವರು ಹಾಗೂ ಹೈ ಕಮಾಂಡ್ ಹೇಳಿದ್ದಕ್ಕೆ ನಾನು ಸಿಎಂ ಆಗಿದ್ದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

 

 

Find Out More:

Related Articles: