
ನನಗೆ ಕೇಂದ್ರದ ಸಹಕಾರ ಬೇಕು : ಸುಮಲತಾ
ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಸುಮಲತಾ ಯಾವ ಪಕ್ಷಕ್ಕೂ ಹೋಗುವುದಿಲ್ಲ ಎಂದು ಖಚಿತ ಪಡಿಸಿದ್ದಾರೆ. ಆದರೆ ಇದೀಗ ವಿಷಯ ಏನಂದ್ರೆ, ಶನಿವಾರ ಮಲ್ಲೇಶ್ವರಂ ನಲ್ಲಿನ ಬಿಜೆಪಿ ಕಚೇರಿಗೆ ಸುಮಲತಾ ಭೇಟಿ ನೀಡಿದ್ದರು.
ಹೌದು, ಸುಮಲತಾ ಬಿಜೆಪಿ ಕಚೇರಿಗೆ ಆಗಮನಿಸುತ್ತಿದ್ದಂತೆಯೇ ಬಿಜೆಪಿ ನಾಯಕಿಯರಾದ ಭಾರತಿ ಶೆಟ್ಟಿ ಹಾಗೂ ಮತ್ತಿತರರು ಸ್ವಾಗತಿಸಿದರು. ಬಿಜೆಪಿ ನಾಯಕ ಬಿ.ಎಲ್.ಸಂತೋಷ ಕೆಲ ಹೊತ್ತು ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ನನಗೆ ಕೇಂದ್ರದ ಸಹಕಾರ ಬೇಕು. ಬಿಜೆಪಿಯು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತಮ್ಮ ಅಭ್ಯರ್ಥಿ ಹಾಕದೇ ನನಗೆ ಸಹಕಾರ ನೀಡಿದ್ದರು. ಹೀಗಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ ಎಂದು ಹೇಳಿದರು.