
ಬೀದಿಗೆ ಬಂತು ಐಎಂಎ ಸಂಸ್ಥೆಯ ನೌಕರರ ಬದುಕು
ಐಎಂಎ ಜ್ಯವೆಲ್ಸ್ ವಂಚನೆ ಪ್ರಕರಣದಿಂದ ಅಲ್ಲಿ ಕೆಲಸ ಮಾಡುತ್ತಿದ್ದ ನೂರಾ ಎಂಭತ್ತಕ್ಕೂ ಹೆಚ್ಚು ನೌಕರರು ಇದೀಗ ಅತಂತ್ರರಾಗಿದ್ದಾರೆ. ಅವರ ಎಒ್ಲಾ ದಾಖಲಾತಿಗಳು ಐಎಂಎ ಮಳಿಗೆ ಒಳಗೆ ಸಿಲುಕಿ ಹಾಕಿಕೊಂಡಿವೆ. ಹಾಗಾದರೆ ಇವರ ಭವಿಷ್ಯ ಮುಂದೆನು?
ಹೌದು, ಶಿವಾಜಿ ನಗರದ ಬೌರಿಂಗ್ ಆಸ್ಪತ್ರೆ ಬಳಿ ಇರುವ ಐಎಂಎ ಜ್ಯೂವೆಲ್ಸ್ ನಲ್ಲಿ ಸುಮಾರು 180 ಕ್ಕೂ ಹೆಚ್ಚು ಜನ ನೌಕರರು ಕೆಲಸ ಮಾಡುತ್ತಿದ್ದರು. ಇದೀಗ ಅವರೆಲ್ಲರೂ ಬೀದಿಗೆ ಬಂದಿದ್ದಾರೆ. ನಾಪತ್ತೆಯಾಗಿರುವ ಮನ್ಸೂರ್ ಅವರು ಈ ನೌಕರರ ಮೂಲ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿದ್ದಾರಂತೆ.
'ನಾವು ಬೇರೆ ಕಡೆ ಕೆಲಸ ನೋಡೋಣ ಎಂದರೆ, ನಮ್ಮ ವಿದ್ಯಾರ್ಹತೆಯ ದಾಖಲೆಗಳು ಅವರ ಬಳಿ ಇವೆ. ಅವುಗಳನ್ನಾದರೂ ಕೊಟ್ಟರೆ ನಾವು ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಏಕಾಏಕಿ ಅಂಗಡಿ ಬಂದ್ ಆಗಿರುವುದಿರಂದ ನಮಗೆ ತುಂಬ ಸಮಸ್ಯೆ ಆಗಿದೆ ಎಂದು ಅಲ್ಲಿನ ನೌಕರರು ನೋವು ತೋಡಿಕೊಂಡರು.