30 ಸಾವಿರ ದಾಟಿದ ದೂರುಗಳು; ಐಎಂಎ ದೊಡ್ಡ ವಂಚನೆ

frame 30 ಸಾವಿರ ದಾಟಿದ ದೂರುಗಳು; ಐಎಂಎ ದೊಡ್ಡ ವಂಚನೆ

somashekhar

ಐಎಂಎ ಜ್ಯೂವೆಲ್ಸ್ ಕಂಪನಿಯಲ್ಲಿ ಹಣ ಹೂಡಿಕೆ‌ ಮಾಡಿ ವಂಚನೆಗೊಳಗಾದವರು ಇಂದು ಕೂಡ ಮುಂಜಾನೆಯಿಂದಲೇ ದೂರು ನೀಡಲು ಬಂದಿದ್ದರು. ಹೀಗಾಗಿ ಸಹಜವಾಗಿ ನೂಕು ನುಗ್ಗಲು ಉಂಟಾಗಿದೆ. ಶಿವಾಜಿನಗರದ ಕನ್ವೆಷನ್ ಹಾಲ್ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು.

 

ಹೌದು, ಮೊದಲ ದಿನದಿಂದಲೂ ದೂರುದಾರರು ದೂರು ನೀಡುತ್ತಲೇ ಬಂದಿದ್ದಾರೆ. ಇದೀಗ ಈ ದೂರುಗಳ ಸಂಖ್ಯೆ 30000 ದಾಟಿದೆ ಎನ್ನುವ ಅಂಕಿ ಅಂಶ ಬಹಿರಂಗ ಆಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ಅಷ್ಟೇ ಅಲ್ಲದೇ, ಆಂದ್ರದಿಂದಲೂ ಜನರು ಬಂದು ದೂರು ನೀಡುತ್ತಿದ್ದಾರೆ.

 

ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಈಗಾಗಳೆ 7 ಜನ ವಂಚಕರನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದೆ. ಇನ್ಬೊಂದು ತಂಡ ಮನ್ಸೂರ್ ಖಾನ್ ನನ್ನು ಪತ್ತೆ ಹಚ್ಚಲು ಬಲೆ‌ ಬೀಸಿದೆ. ಜೊತೆಗೆ ಮನ್ಸೂರ್ ಅವರ ಆಸ್ತಿಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. 

 

Find Out More:

Related Articles:

Unable to Load More