ಐಎಂಎ ಪ್ರಕರಣ ಸಿಬಿಐಗೆ ಒಪ್ಪಿಸಿ
ಐಎಂಎ ಜ್ಯೂವೇಲರಿ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕೋರಿ ಸಂತ್ರಸ್ತರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಯಡಿಯೂರಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ಇದೀಗ ಧರಣಿ ಕೈಗೊಂಡಿದ್ದಾರೆ.
ಮಹಮ್ಮದ್ ಮನ್ಸೂರ್ ಖಾನ್ ಅವರು ಐಎಂಎ ಸಂಸ್ಥೆಯನ್ನು ಸ್ಥಾಪಿಸಿ ಹಣ ಹೂಡಿದವರಿಗೆ ಶೇ.7ರಷ್ಟು ಬಡ್ಡಿ ಕೊಡುತ್ತೇವೆ ಎಂದು ಇಸ್ಲಾಂ ಪವಿತ್ರ ಗ್ರಂಥ ಖುರಾನ್ ಮೇಲೆ ಪ್ರಮಾಣ ಮಾಡಿದ್ದ. ಹೀಗೆ ನಮ್ಮನ್ನು ನಂಬಿಸಿ ಮೋಸ ಮಾಡಿದ್ದಾರೆ. ನಮ್ಮಂಥ ಸಾವಿರಾರು ಜನರಿಂದ ಕೋಟ್ಯಾಂತರ ರೂ. ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಕೆಲವು ದಿನಗಳ ನಂತರ ಗ್ರಾಹಕರಿಗೆ ನೀಡುತ್ತಿದ್ದ ಬಡ್ಡಿ ಹಣವನ್ನು ಶೇ.7 ರಿಂದ ಶೇ.5ಕ್ಕೆ ಆ ನಂತರ ಶೇ.3 ಕ್ಕೆ ಹೀಗೆ ಇಳಿಸುತ್ತ ಹೋದ. ಕೊನೆಗೆ ಎಲ್ಲ ಹಣವನ್ನು ತೆಗೆದುಕೊಂಡು ಕುಟುಂಬ ಸಮೇತ ಪರಾರಿ ಆದ ಎಂದು ಹೇಳಿದ್ದಾರೆ. ಖಾನ್ ವಿರುದ್ಧ ಸುಮಾರು 30,000 ಪ್ರಕರಣಗಳು ದಾಖಲಾಗಿವೆ.