ಗ್ರಾಮ ವಾಸ್ತವ್ಯ ಹೊರಟ ಸಿಎಂ ಹೆಚ್ಡಿಕೆ

frame ಗ್ರಾಮ ವಾಸ್ತವ್ಯ ಹೊರಟ ಸಿಎಂ ಹೆಚ್ಡಿಕೆ

somashekhar

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುರುವಾರ ಸಂಜೆ ಬೆಂಗಳೂರಿನಲ್ಲಿ ರೈಲು ಏರಿದರು. ಗ್ರಾಮ ವಾಸ್ತವ್ಯ ನಿಗಧಿ ಆಗಿರುವ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಗೆ ತೆರಳಲು ಮುಖ್ಯಮಂತ್ರಿ ಪ್ರಯಾಣ ಬೆಳೆಸಿದರು. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರಾತ್ರಿ 7:30 ಕ್ಕೆ ರೈಲು ಏರಿದರು. 

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಶುಕ್ರವಾರ ನಸುಕಿನ ಜಾವ 3:48 ಕ್ಕೆ ಯಾದಗಿರಿ ರೈಲ್ವೆ ನಿಲ್ದಾಣ ತಲುಪಲಿದ್ದಾರೆ. ನಂತರ ರಸ್ತೆ ಮೂಲಕ ಗ್ರಾಮ ವಾಸ್ತವ್ಯ ನಿಗಧಿ ಆಗಿರುವ ಚಂಡರಕಿ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.

ಕುಮಾರಸ್ವಾಮಿ ಅವರು ಬೆಳಿಗ್ಗೆ 7:30 ಕ್ಕೆ ಚಂಡರಕಿ ತಲುಪಲಿದ್ದು, ಬೆಳಿಗ್ಗೆ 10 ಗಂಟೆಗೆ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಜನತಾ ದರ್ಶನ ಆರಂಭಿಸುವವರು.

Find Out More:

Related Articles:

Unable to Load More