'37 ಸ್ಥಾನ ಇಟ್ಟುಕೊಂಡು ನಾವೇನು ಸಿಎಂ ಮಾಡಿ ಅಂತ ಹೇಳಿಲ್ಲ'

frame '37 ಸ್ಥಾನ ಇಟ್ಟುಕೊಂಡು ನಾವೇನು ಸಿಎಂ ಮಾಡಿ ಅಂತ ಹೇಳಿಲ್ಲ'

somashekhar

ಮೈತ್ರಿಯಿಂದಲೇ ಸೋಲಾಯಿತು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಜೆಡಿಎಸ್ ವರಿಷ್ಟ ದೇವೇಗಗೌಡ ಅವರು ಇದೀಗ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಾವೇನು ತಮ್ಮ ಮಗನನ್ನು ಸಿಎಂ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ದಂಂಬಾಲು ಬಿದ್ದಿರಲಿಲ್ಲ ಎಂದು ಹೇಳಿದ್ದಾರೆ.

 

ಹೌದು, ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದೇವೇಗೌಡರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರು ಕುಮಾರ ಸ್ವಾಮಿಯೇ ಸಿಎಂ ಆಗಲಿ ಎಂದು ಒತ್ತಡ ಹೇರಿದ್ದು, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಇದೇ ರೀತಿ ಮಾತನಾಡಿದ್ದರು ಎಂದು ದೇವೆಗೌಡ ಹೇಳಿದ್ದಾರೆ.

 

ಹೀಗಾಗಿ ಮೈತ್ರಿಯಿಂದ ಸೋಲಾಯಿತು ಅನ್ನೋದನನ್ನು ದೇವೇಗೌಡರುಉ ಒಪ್ಪೊಕೆ ತಯಾರಿಲ್ಲ. ಇದರ ಜೊತೆಗೆ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಾಂತ ಪಾದಯಾತ್ರೆ ಆರಂಭಿಸಲಾಗುತ್ತಿದೆ. ಮುಂಬರುವ ಆಗಸ್ಟ್ 20ರಿಂದ ಪಾದಯಾತ್ರೆ ಆರಂಭ ಆಗುತ್ತಿದೆ ಎಂದರು.


Find Out More:

Related Articles:

Unable to Load More