ಮಾನವೀಯತೆ ಮೆರೆದ ಪ್ರಿಯಾಂಕಾ ಖರ್ಗೆ!
ರಾಜಕಾರಣಿಗಳು ದಾರಿಯಲ್ಲಿ ಯಾರಿಗಾದರೂ ಸಹಾಯ ಮಾಡಿದರೆ ಸಾಕು ಅದು ಸರ್ವೇ ಸಾಮಾನ್ಯವಾಗಿ ದೊಡ್ಡ ಸುದ್ದಿಯಾಗುತ್ತದೆ. ಇದೇ ತರ ಇದೀಗ ಸಚಿವ ಪ್ರಿಯಾಂಕ ಖರ್ಗೆ ಸಹ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕರಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮರೆದು ಸುದ್ದಿಯಾಗಿದ್ದಾರೆ.
ಹೌದು, ಅಷ್ಟಕ್ಕೂ ಆಗಿದ್ದೇನಂದ್ರೆ, ಮರಗುತ್ತಿ ಗ್ರಾಮದ ಹುತಾತ್ಮ ಯೋಧ ಮಹಾದೇವ ಅವರಿಗೆ ಶೃದ್ದಾಂಜಲಿ ಸಲ್ಲಿಸಲು ಪ್ರಿಯಾಂಕಾ ಖರ್ಗೆ ತೆರಳಿದ್ದರು. ಆ ಕಾರ್ಯ ಮುಗಿದ ನಂತರ ವಾಪಸಾಗುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಬೈಕ್ ಮೇಲಿಂದ ಬಿದ್ದು ಯುವಕರು ಗಾಯಗೊಂಡಿದ್ದರು. ಆಗ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಅಷ್ಟೇ ಅಲ್ಲದೇ, ಯುವಕರಿಗೆ ಸಲಹೆಯನ್ನೂ ನೀಡಿದ್ದಾರೆ. ವಾಹನ ಚಾಲನೆ ಮಾಡುತ್ತಿರುವಾಗ ಯಾವತ್ತೂ ಕಾಳಜಿ ವಹಿಸಿ ಎಂದು ಗಾಯಾಳುಗಳಿಗೆ ಸಚಿವ ಪ್ರಿಯಾಂಕ ಖರ್ಗೆ ಕಿವಿಮಾತು ಹೇಳಿ ಕಾಳಜಿ ಮೆರೆದಿದ್ದಾರೆ.