ಮೈತ್ರಿ ಸರ್ಕಾರಕ್ಕೆ ಒಬ್ಬೊಬ್ಬೆರೇ ಶಾಸಕರು ಶಾಕ್ ನೀಡುತ್ತಿರೋದು ಹೊಸತೇನಲ್ಲ. ಆದರೆ ಇದೀಗ ದೋಸ್ತಿ ಸರ್ಕಾರದ ಜೊತೆ ಇದ್ದ ಬಿಎಸ್ಪಿ ಶಾಸಕ ಎನ್. ಮಹೇಶ್ ಅವರೂ ಕೂಡ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.
ಹೌದು, ನಾಳೆ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ಈ ಕುರಿತು ಎರಡು ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದ ಎನ್.ಮಹೇಶ್ ಅವರು 'ನಾನು ದೊಸ್ತಿ ಸರ್ಕಾರದ ಜೊತೆ ಇದ್ದೀನಿ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ನಾನಿರುತ್ತೇನೆ' ಎಂದಿದ್ದರು. ಆದರೆ ಇದೀಗ ಅವರು ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.
ಹೌದು, ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ನಿಂದ ಆದೇಶ ಬಂದ ಹಿನ್ನೆಲೆ, ಸದನಕ್ಕೆ ನಾನು ಗೈರಾಗಲು ನಿರ್ಧಾರ ಮಾಡಿದ್ದೇನೆ. ಖಾಸಗಿ ಕೆಲಸ ಇದ್ದು, 2 ದಿನಗಳ ಕಾಲ ಸದನಕ್ಕೆ ಹೋಗಿಲ್ಲ. ನಮ್ಮ ವರಿಷ್ಟರಿಂದ ವಿಶ್ವಾಸಮತ್ಕೆ ತಟಸ್ಥವಾಗಿರುವ ಸೂಚನೆ ಬಂದಿದೆ ಹೀಗಾಗಿ ಗೈರಾಗುತ್ತೇನೆ ಎಂದು ಹೇಳಿದ್ದಾರೆ.