ವಿಶ್ವಾಸ ಮತ ವಿಳಂಬದ ಹೊತ್ತಲ್ಲೇ ಇದೀಗ ಸರ್ಕಾರ ಉಳಿಸಿಕೊಳ್ಳೋಕೆ ದೋಸ್ತಿ ಸರ್ಕಾರದ ನಾಯಕರು ಹಲವಾರು ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಇದೀಗ ಜೆಡಿಎಸ್ ಕಾಂಗ್ರೆಸ್ ಪಕ್ಷಕ್ಕೆ ಆಫರ್ ನೀಡಿದೆ. ಅಷ್ಟಕ್ಕೂ ಆ ಆಫರ್ ಏನು? ಇಲ್ಲಿದೆ ನೋಡಿ ಸಿಕ್ರೇಟ್!
ಸಮ್ಮಿಶ್ರ ಸರಕಾರ ಇನ್ನೇನು ಪತನ ಆಗುತ್ತಿದೆ ಅನ್ನೋದು ಎಲ್ಲರ ಅಭಿಪ್ರಾಯ. ಹೀಗಾಗಿ ಕಾಂಗ್ರೆಸ ನಾಯಕರಿಗೆ ಜೆಡಿಎಸ್ ಬಂಫರ್ ಆಫರ್ ನೀಡಿದೆ. ಅಷ್ಟಕ್ಕೂ ಆ ಆಫರ್ ಏನು ಗೊತ್ತಾ? 'ನೀವೇ ಸರ್ಕಾರ ರಚಿಸಿ, ನಾವು ಬಾಹ್ಯ ಬೆಂಬಲ ನೀಡುತ್ತೇವೆ' ಹೀಗಂತ ಕಾಂಗ್ರೆಸ್ ನಾಯಕರಿಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಸಂದೇಶ ರವಾನಿಸಿದ್ದಾರೆ.
ಮೈತ್ರಿ ಸರಕಾರವನ್ನು ಉಳಿಸಿಕೊಳ್ಳೋಕೆ ಈ ನಿರ್ದಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಹೀಗಾಗಿ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಬೆಂಗಾವಲು ಪಡೆ ವಾಹನ ಬಿಟ್ಟು ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ ಇದೀಗ ರಹಸ್ಯ ಸ್ಥಳಕ್ಕೆ ತೆರೆಳಿದ್ದಾರೆ. ರಾಜೀನಾಮೆ ನೀಡಿರುವ ಅತೃಪ್ತ ಶಾಸಕರನ್ನು ಸಂಪರ್ಕಿಸಿ ಮನ ಒಲಿಸಲಾಗುವುದ ಎಂದು ಹೇಳಲಾಗುತ್ತಿದೆ.