ಪ್ರವಾಹ ಪೀಡಿತ ಜನರ ಪರಿಸ್ಥಿತಿ ಅಧ್ಯಯನಕ್ಕೆ ತೆರಳಿದ್ದ ಮುಖ್ಯಮಂತ್ರಿ ಬಿಎಸ್‌ವೈ ಅವರಿಗೆ ಗ್ರಾಮಸ್ಥರು ದಿಗ್ಭಂದನ ಹಾಕಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ. ಮುಖ್ಯಮಂತ್ರಿ ಅವರಿಗೆ ಘೇರಾವ್ ಹಾಕಿರೋ ಕಾರಣಕ್ಕೆ ಪೊಲೀಸರು ಸಂತ್ರಸ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಮೂಲಕ ನೆರೆ ಸಂತ್ರಸ್ತರ ಮೇಲೆ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ.
ಹೌದು ಶುಕ್ರವಾರದಂದು ಕೊಣ್ಣುರು ಗ್ರಾಮಕ್ಕೆ ಸಿಂ ಬಿಎಸ್ ಯಡಿಯೂರಪ್ಪ ಅವರು ಭೇಟಿ ನೀಡಿದ್ದರು.ನಂತರ ಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡಿದರು. ಆದರೆ ಅವರು ಪ್ರವಾಹ ಪೀಡಿತರ ಮನವಿಯನ್ನು ಆಲಿಸದೇ ಹಿಂದಿರುಗಲು ಮುಂದಾದಾಗ ಗ್ರಾಮಸ್ಥರು ಆಕ್ರೋಶಗೊಂಡರು. ಕೊನೆಗೆ ಸಿಎಂ ಕಾರಿಗೆ ಮುತ್ತಿಗೆ ಹಾಕಿದರು.
ಗ್ರಾಮಸ್ಥರು ಇಟ್ಟಿದ್ದ ಬೇಡಿಕೆಗಳು ಏನು ಅಂದರೆ, ಸಂತ್ರಸ್ತರಿಗೆ ಸ್ಥಳದಲ್ಲಿಯೇ ಪರಿಹಾರವನ್ನು ಘೋಷಣೆ ಮಾಡಬೇಕು. ಅಲ್ಲದೇ ಪುನರ್ವಸತಿ ಕಲ್ಪಿಸುವ ಸಂಬಂಧ ಸೂಕ್ತ ಭರವಸೆ ನೀಡಬೇಕು ಎಂದು ಗ್ರಾಮಸ್ಥರು ಒಟ್ಟು ಹಿಡಿದರು. ಇದಕ್ಕೆ ಸಿಎಂ ಯಡಿಯೂರಪ್ಪ ಅವರು ಸ್ಪಂಧಿಸದೇ ಇದ್ದಾಗ, ಅವರ ವಿರುದ್ಧ ಗ್ರಾಮಸ್ಥರು ಘೋಷಣೆ ಕೂಗಲು ಮುಂದಾದರು. ಆಗ ಕೂಡಲೇ ಮಧ್ಯ ಪ್ರವೇಶ ಮಾಡಿದ ಪೊಲೀಸರು ಗ್ರಾಮಸ್ಥರನ್ನು ಚದುರಿಸಲು ಲಘು ಲಾಠಿ ಪ್ರವಾರವನ್ನೇ ನಡಿಸಿದರು. ಈ ಮೂಲಕ ಅವರು ಅಮಾನವೀಯವಾಗಿ ವರ್ತಿಸಿದರು ಎಂದು ಸಂತ್ರಸ್ತರೊಬ್ಬರು ತಿಳಿಸಿದ್ದಾರೆ.
ಮತ್ತಷ್ಟು ಆಕ್ರೋಶಗೊಂಡ ಗ್ರಾಮಸ್ಥರು, ಸಿಎಂ ಬೆಂಗಾವಲು ವಾಹನಕ್ಕೆ ಕೈಗಳಿಂದ ಗುದ್ದಿದರು. ಅಲ್ಲದೇ "ಮುಂದೆ ಹೇಗೆ ಹೋಗ್ತಿರಿ ನಾವು ನೋಡ್ತೀವಿ' ಎಂದು ಬೆದರಿಕೆ ಹಾಕಿದರು ಎನ್ನಲಾಗಿದೆ. ಹೀಗಾಗಿ ಪೊಲೀಶರು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಬೇಕಾದ ಪರಿಸ್ಥಿತಿ ಎದುರಾಯಿತು ಎನ್ನಲಾಗುತ್ತಿದೆ.
ಇದಾದ ನಂತರ ಗ್ರಾಮಸ್ಥರು ಸಿಎಂ ಯಡಿಯೂರಪ್ಪ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ಬಂದಿದ್ದ ಸಿಎಂ ಅವರು ಸಂತ್ರಸ್ತರನ್ನು ಭೇಟಿ ಮಾಡದೇ ಹೋಗುತ್ತಿದ್ದಾರೆ. ಹೀಗಾದರೆ ಅವರು ನಮ್ಮ ಗ್ರಾಮಕ್ಕೆ ಬಂದಿದ್ದಾರೂ ಯಾಕೆ ಎಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕಿದ್ದಾರೆ.