ಅಪಾಯದ ಮಟ್ಟ ತಲುಪಿದ ಹೊಗೇನಕಲ್ ಜಲಪಾತ

somashekhar
ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಎಂದರೆ ಅದು ಹೊಗೇನಕಲ್ ಜಲಪಾತ ಎಂದು ಎಲ್ಲರೂ ಹೇಳುತ್ತಾರೆ. ಈ ಜಲಪಾತ ಇದೀಗ ಮೈದುಂಬಿ ಹರಿಯುತ್ತಿದೆ. ಹೌದು ಇದಕ್ಕೆ ಕಾರಣ ಏನು ಗೊತ್ತಾ? ಕಾವೇರಿ ಜಲಾನಯನ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಕಬಿನಿ ಮತ್ತು ಕೆಆರ್‌ಎಸ್‌ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದೇ ಕಾರಣಕ್ಕೆ ಹೊಗೇನಕಲ್ ಜಲಪಾತ ತುಂಬಿ ಹರಿಯುತ್ತಿದೆ. 

ಇಲ್ಲಿ ದೊಡ್ಡ ಮಟ್ಟದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಒಳಹರಿವು ಹೆಚ್ಚಾಗಿ ಇದೀಗ ಅಪಾಯದ ಮಟ್ಟವನ್ನು ತಲುಪಿದೆ. ಮಲೆ ಮಹದೇಶ್ವರ ಬೆಟ್ಟದ ಹತ್ತಿರ ಇರುವ ಪೊಲೀಸ್‌ ಸಿಬ್ಬಂಧಿ ಅವರು ಜಲಪಾತದ ಹತ್ತಿರ ಯಾರೂ ಹೋಗದಂತೆ ಕಣ್ಗಾವಲು ಇಟ್ಟಿದ್ದಾರೆ. ಅಲ್ಲದೇ ಅಲ್ಲಿ ಬಂದವರಿಗೆ ಜಲಪಾತದ ಕಡೆಗೆ ಹೋಗದಂತೆ ಮನವಿ ಮಾಡಿ ವಾಪಾಸ್ ಕಳುಹಿಸುತ್ತಿದ್ದಾರೆ. 

ಅಷ್ಟೇ ಅಲ್ಲದೇ ಇದರ ಪಕ್ಕದಲ್ಲೇ ಮೀನು ಹಿಡಿಯುವ ಬೆಸ್ತರು ಇದ್ದು, ಅವರಿಗೂ ಕುಡ ಮೀನು ಹಿಡಿಯಲು ಹೋಗದಂತೆ ಸುಚನೆ ನೀಡಲಾಗಿದೆ. ಯಾಕೆಂದರೆ ಜಲಪಾತ ದೊಡ್ಡ ಮಟ್ಟದಲ್ಲಿ ಹರಿಯುತ್ತಿದೆ. ಅಲ್ಲದೇ ಅಪಾಯದ ಮಟ್ಟವನ್ನು ತಲುಪಿರುವ ಕಾರಣದಿಂದ ಈ ರೀತಿ ಸೂಚನೆ ನೀಡಲಾಗಿದೆ.

ಕಾವೇರಿ ಒಳ ಹರಿವು ಅಷ್ಟೇ ಅಲ್ಲದೇ ಹೊರಹರಿವು ಸಹ ದೊಡ್ಡ ಮಟ್ಟದಲ್ಲಿ ಹೆವಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತ ನೋಡಲು ಹೋಗುವ ಪ್ರವಾಸಿಗರನ್ನು ಸದ್ಯಕ್ಕೆ ನಿಮ್ಮ ಪ್ರಯಾಣವನ್ನು ಮುಂದಕ್ಕೆ ಹಾಕುವುದ ಒಳಿತು ಎನ್ನಲಾಗುತ್ತಿದೆ. ಕಬಿನಿ ಜಲಾಶಯದ ಹೊರ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 

ಈ ಜಲಾಶಯದ ಸುತ್ತಲೂ ಕೆಲವು ಗ್ರಾಮಗಳಿವೆ. ಅವುಗಳು ಜಮ್ಮಕುಟ್ಟಿ, ಆಲಂ ಬಾಂಡಿ ಮಾರಿಕೋಟೈ, ಗೋಪಿನಾಥಂ, ಆತೂರು ಇನ್ನು ಹಲವು ಗ್ರಾಮಗಳಿಗೆ ನದಿ ದಡಕ್ಕೆ ಅಲ್ಲಿನ ನಾಗರಿಕರು ತೆರಳದಂತೆ ಪೊಲೀಶರು ಸೂಚನೆ ನೀಡಿದ್ದಾರೆ. ಅಲ್ಲದೇ ಈಗಾಗಲೇ 50ಕ್ಕೂ ಹೆಚ್ಚು ನುರಿತ ಈಜುಗಾರರ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.ಯಾವುದೇ ಅವಘಡಗಳಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.



Find Out More:

Related Articles: