ಎಷ್ಟು ಜನರಿಗೆ ಸಿಗುತ್ತೆ ಉಪಮುಖ್ಯಮಂತ್ರಿ ಹುದ್ದೆ?

somashekhar
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಿದೆ. ಕೆಲವರಿಗೆ ಸಚಿವ ಸ್ಥಾನವನ್ನೂ ನೀಡಲಾಗಿದೆ. ಆದರೆ ಇನ್ನು ಕೆಲವರು ಅತೃಪ್ತರು ತಮ್ಮ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಸುತ್ತಿದ್ದಾರೆ. ಹೀಗಾಗಿ ಇದೀಗ ಉಪಮುಖ್ಯಮಂತತ್ರಿ ಹುದ್ದೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೇ ಇಂದು ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಉಪಮುಖ್ಯಮಂತ್ರಿ ಹುದ್ದೆ ಪಕ್ಕಾ ಎಂದು ಬಿ.ಎಸ್.ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದಾರೆ. 

ಸುಮಾರು ಮೂವರಿಗೆ ಉಪಮುಖ್ಯಮಂತ್ರಿ ಹುದ್ದೆ ದೊರೆಯಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಎಷ್ಟು ಜನರಿಗೆ ದೊರೆಯುತ್ತದೆ ಎಂದು ಅಧಿಕೃತವಾಗಿ ಏನೂ ಹೊರ ಬಿದ್ದಿಲ್ಲ. ರಾಜಕೀಯ ವಿಶ್ಲೇಷಕರ ಪ್ರಕಾರ ಸುಮಾರು 3 ಜನರನ್ನು ಉಪಮುಖ್ಯಮಂತ್ರಿ ಮಾಡಬಹುದು ಎಂದು ಅಂದಾಜಿಸಿಲಾಗಿತ್ತು. ಇಂದು ಸಚಿಬವರಿಗೆ ಖಾತೆ ಹಂಚಿಕೆ ಪೂರ್ಣವಾಗಲಿದೆ. ಹೌದು ಇಂದು ರಾಜ್ಯ ಸಚಿವ ಸಂಪುಟ ನಡೆಯುತ್ತದೆ. ಇದರಲ್ಲಿಯೇ ಎಷ್ಟು ಜನರಿಗೆ ಉಪಮುಖ್ಯಮಂತ್ರಿ ಹುದ್ದೆ ದೊರೆಯುತ್ತದೆ ಎಂದು ತಿಳಿಯುತ್ತದೆ. 

ಈ ಬಗ್ಗೆ ಹೈಕಮಾಂಡ್ ಆದೇಶ ನೀಡಿದೆ ಅವರ ಆದೇಶದಂತೆಯೇ ನಾನು ಪಾಲನೆ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಹೌದು ಯಾಕೆಂದರೆ ನಮ್ಮದು ರಾಷ್ಟ್ರೀಯ ಪಕ್ಷ ಹೀಗಾಗಿ ಹೈಕಮಾಂಡ್ ಅವರು ಹೇಳಿದ್ದೆ ನಮಗೆ ಅಂತಿಮ ಅದರಂತೆ ನಾವೆಲ್ಲ ನಡೆದುಕೊಳ್ಳುತ್ತೇವೆ ಎಂದಿದ್ದಾರೆ ಸಿಎಂ.

ಇನ್ನು ಲಕ್ಷಣ್ ಸವದಿಗೆ ಸಚಿವ ಸ್ಥಾನ ನೀಡಿರೋದಕ್ಕೆ ಕೆಲವರಿಗೆ ಬೇಸರ ವ್ಯಕ್ತವಾಗಿದೆ. ಆದರೆ ವರಿಷ್ಟರ ಆದೇಶದಂತೆಯೇ ಸವದಿಗೆ ಸಚಿವ ಸ್ಥಾನ ನೀಡಲಾಗಿದೆ. ಅದೇ ರೀತಿ ಬೆಳಗಾವಿಯ ಮತ್ತೊಬ್ಬರಿಗೆ ಅಧಿಕಾರ ನೀಡಲಾಗುವುದು. ಪ್ರಧಾನಿ  ಮೋದಿ ಮತ್ತು ಪಕ್ಷದ ವರಿಷ್ಟರು ಹೇಳಿದ್ದನ್ನು ನಾನು ಪಾಲಿಸುತ್ತೇನೆ. ಬಿಜೆಪಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಜೆಡಿಎಸ್ ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆ ಇದೆ. ಇನ್ನು ಸಚಿವ ಸ್ಥಾನ ದೊರೆಯದವರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಯಡಿಯೂರಪ್ಪ ಅವರು ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಅವರು ಹೇಳಿದ್ದರು. ಇದೇ ಕಾರಣಕಕೆ ಕರ್ನಾಟಕ ರಾಜ್ಯಕ್ಕೆ ಮೊದಲು ಅಧ್ಯಯನ ತಂಡ ಕಳುಹಿಸಲಾಗಿದೆ ಎಂದು ಬಿಎಸ್‌ವೈ ಕೇಂದ್ರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.


Find Out More:

Related Articles: