ಇಂದು ಬಾಲಚಂದ್ರ ಜಾರಕಿಹೊಳಿಗೆ ಹಾಲಿನ ಅಭಿಷೇಕ

somashekhar
ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಸ್ಥಾನದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಇಂದು ಕೆಎಂಎಫ್ ಚುನಾವಣೆ ನಡೆಯಲಿದೆ. ಈ ಅಧ್ಯಕ್ಷ ಗಾದಿಯ ಮೇಲೆ ಈಗಾಗಲೇ ಹಲವರು ಕಣ್ಣಿಟ್ಟಿದ್ದು, ಕೊನೆಗೂ ಇದು ಯಾರ ಪಾಲಾಗುತ್ತದೆ ಅನ್ನೊದನ್ನು ಕಾದುನೋಡಬೇಕಿದೆ. ಆದರೆ ದೊಡ್ಡ ಪೈಪೋಟಿಯ ನಿರೀಕ್ಷೆಯಲ್ಲಿದ್ದ ಈ ಚುನಾವಣೆ ಇದೀಗ ಮತ್ತೊಂದು ಟ್ವೀಸ್ಟ್ ಸಿಕ್ಕಿದೆ. ಇದು ಏಕಪಕ್ಷೀಯ ಫಲಿತಾಂಶ ನೀಡುವ ಸೂಚನೆಯನ್ನೂ ಕೊಟ್ಟಿದೆ.


ಹೌದು ಈ ಬಾರಿಯ ಬಾಲಚಂದ್ರ ಜಾರಕಿಹೊಳಿ ಅವರಿಗೆ ಈ ಸ್ಥಾನ ಒಲಿದು ಬರಲಿದೆ ಎನ್ನಲಾಗುತ್ತಿದೆ. ರೇವಣ್ಣ ಅವರು ಈ ಹಿಂದಿನಿಂದಲೂ ಕೆಎಂಎಫ್‌ನಲ್ಲಿ ದೊಡ್ಡ ಪ್ರಾಬಲ್ಯ ಹೊಂದಿದವರು. ಅವರ ಬಲವನ್ನು ಕುಗ್ಗಿಸಲು ಹೀಗೆ ಮಾಡಲಾಗುತ್ತಿದೆ. ನಿಮಗೆ ಗೊತ್ತಿರಬಹುದು. ರೇವಣ್ಣ ಅವರು ಈ ಹಿಂದೆ ಎರಡು ಬಾರಿ ಅಧ್ಯಕ್ಷರಾಗಿದ್ದರು. ಇಷ್ಟೇ ಅಲ್ಲದೇ ಈ ಭಾರಿಯೂ ಅಧ್ಯಕ್ಚ ಸ್ಥಾನ ಅವರಿಗೆ ಕೊಡಬೇಕು ಎಂದು ಲಾಭಿ ನಡೆಸಿದ್ದರು.


ರೇವಣ್ಣ ಅವರ ಬಲವನ್ನು ಕಿಉಗ್ಗಿಸಲು ಈ ಭಾರಿ ಬಿಜೆಪಿಯು ಕೆಎಂಎಫ್‌ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ದೊಡ್ಡ ಮಟ್ಟದ ಪ್ಲಾನ್ ಹಾಕಿಕೊಂಡಿದೆ.. ಇನ್ನು ಅಷ್ಟೇ ಅಲ್ಲದೇ ಈ ಭಾರಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಈ ಸ್ಥಾನಕ್ಕೆ ಕೂರಿಸುವ ಮುನ್ಸೂಚನೆಯನ್ನೂ ನೀಡುತ್ತಿದೆ. ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಅರಭಾವಿ ಶಾಸಕ ಇದರಿಂದ ತೃಪ್ತಿಯಾಗಿ ಇರಬಹುದು ಎನ್ನುವುದು ಲೆಕ್ಕಾಚಾರವಾಗಿದೆ. ಹೀಗಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನ ಸಿಗುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.


ಇಲ್ಲಿಯವರೆಗೂ ಕೆಜಿಎಫ್ ರೇವಣ್ಣ ಅವರ ನಿಯಂತ್ರಣದಲ್ಲಿ ಇತ್ತು. ಅದರ ಆದರೆ ಇದೀಗ ರೇವಣ್ಣ ಅವರಿಗೆ ಶಾಕ್ ಎದುರಾಗೋ ಸಾಧ್ಯತೆ ಇದೆ. ಮಂಡಳದ ನಿರ್ದೇಶಕರು ಇನ್ಮೇಲೆ ಜಾರಕಿಹೊಳಿ ಅವರ ಪಾಳಯಕ್ಕೆ ಬಂದಿದ್ದಾರೆ. ಇದೇ ಕಾರಣಕ್ಕೆ ಜಾರಕಿಹೊಳಿ ಅವರೇ ಈ ಬಾರಿ ಗೆಲವು ಸಾಧಿಸಲಿದ್ದಾರೆ ಎನ್ನಲಾಗುತ್ತಿದೆ.


ಒಟಟ್ಟಾರೆಯಾಗಿ ಬಾಲಚಂದ್ರ ಜಾರಕಿಹೊಳಿ ಗೆಲುವು ಪಕ್ಕಾ. ಅಷ್ಟೇ ಅಲ್ಲ, ಇಂದು ನಡೆಯಲಿರುವ ಚುನಾವಣೆಯಲ್ಲಿ ಯಾವುದೇ ಹೊಸ ಬೆಳವಣಿಗೆ ಆಗದೇ ಇದ್ದರೆ ಬಾಲಚಂದ್ರ ಅವರೇ ಕೆಎಂಎಫ್ ಅಧ್ಯಕ್ಷ ಆಗೋದು ಗ್ಯಾರಂಟಿ.


Find Out More:

Related Articles: