ಕರ್ನಾಟಕ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಖ್ಯಾತಿ ಆಗಿರೋ ಡಿ.ಕೆ.ಶಿವಕುಮಾರ್ ಅವರನ್ನು ನಿನ್ನೆ ರಾತ್ರಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದರು. ಅಕ್ರಮವಾಗಿ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ನಡೆದ ಈ ಹೈಡ್ರಾಮಾ ಇಡೀ ಕಾಂಗ್ರೆಸ್ ಪಕ್ಷದವರನ್ನು ಆತಂಕಕ್ಕೆ ತಳ್ಳಿದೆ. ತಮ್ಮ ನಾಯಕನ ಬಂಧನದ ವಿರುದ್ಧ ಕಾರ್ಯಕರ್ತರು ಬೀಧಿಗಿಳಿದಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು, ಆದರೆ ಅವರಿಗೆ ಲೋ ಬಿಪಿ ಇರುವುದರಿಂದ ನನಗೆ ವಿಶ್ರಾಂತಿ ಬೇಕಿದೆ ಎಂದು ಡಿಕೆ ಶಿವಕುಮಾರ್ ಕೇಳಿದರು. ಆಗ ಅದನ್ನೇ ಪತ್ರದಲ್ಲಿ ಬರೆಸಿಕೊಂಡು ನಂತರ ಡಿಕೆಶಿವಕುಮಾರ್ ಅವರು ವಿಚಾರಣೆಗೆ ಸ್ಪಂಧನೆ ಮಾಡುತ್ತಿಲ್ಲ ಎಂದು ಬಂಧನ ಮಾಡಿದ್ದಾರೆ ಎಂದು ಅವರ ತಮ್ಮ ಡಿಕೆ ಸುರೇಶ್ ತಿಳಿಸಿದ್ದಾರೆ.
ಇಂದು ಡಿಕೆ ಶಿವಕುಮಾರ್ ಅವರನ್ನು ಕೋರ್ಟ್ ಗೆ ಹಾಜರುಪಡಿಸಿ, ಅವರನ್ನು ಕಸ್ಟಡಿಗೆ ಒಪ್ಪಿಸುವಂತೆ ಕೇಳಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿ ಕರ್ನಾಟಕ ಭವನದ ಅಧೀಕಾರಿ ಹನುಮಂತಯ್ಯ, ಡಿಕೆಶಿ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕುರಿತು ಪ್ರಕರಣವನ್ನು ಇಡಿ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದರು. ಆದರೆ ಈ ಸಮಸ್ಸ್ ರದ್ದು ಕೋರಿ ಡಿಕೆಶಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಲ್ಲಿಯೂ ಡಿಕೆಶಿಗೆ ಸೋಲಾಗಿತ್ತು.
ನಂತರ ಬೇರೆ ದಾರಿ ಕಾಣದೇ ಶಿವಕುಮಾರ್ ಅವರು ಇಡಿ ಮುಂದೆ ಕಳೆದ ಶುಕ್ರವಾರ ಹಾಜರಾಗಿದ್ದರು. ಆದರೆ ಗೌರಿ ಗಣೇಶ್ ಹಬ್ಬದ ಪ್ರಯುಕ್ತ ನಿನ್ನೆ ಅಂದರೆ ಸೋಮವಾರ ತಮಗೆ ವಿಚಾರಣೆಯಿಂದ ವಿನಾಯತಿ ನೀಡಬೇಕೆಂದು ಕೇಳಿಕೊಂಡಿದ್ದರು. ಆದರೆ ಈ ಮನವಿಯನ್ನು ಇಡಿ ಅಧಿಕಾರಿಗಳು ಒಪ್ಪಿರಲಲಿಲ್ಲ. ಹೀಗಾಗಿ ನಿನ್ನೆ ರಾತ್ರಿಯಷ್ಟೇ ಇಡಿ ಅಧಿಕಾರಿಗಳು ಡಿಕೆಶಿಯನ್ನು ಬಂಧನ ಮಾಡಿದ್ದಾರೆ.
ದೆಹಲಿಯಲ್ಲಿ ಡಿಕೆಶಿ ಬಂಧನ ಹೈಡ್ರಾಮಾ ನಡೆಯುತ್ತಿದ್ದಂತೆಯೇ ಇತ್ತ ರಾಜ್ಯದ ಕೆಲವು ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಮೋದಿ ವಿರುದ್ಧ ಹಾಗೂ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅಲ್ಲದೇ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಡಿಕೆಶಿ ಅವರನ್ನು ಬಂಧಿಸಿದೆ ಎಂದು ಕೆಪಿಸಿಸಿ ಆರೋಪ ಮಾಡಿದೆ. ಜೊತೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂದು ಬಂದ್ ನಡೆಸುವಂತೆ ಕರೆ ನೀಡಿದೆ.
ಮತ್ತೊಂದು ಕಡೆ ಡಿಕೆಶಿ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹೌದು ರಾಮನಗರ ಜಿಲ್ಲೆ ಕನಕಪುರದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೇ ಬಸ್ ಗಳಿಗೆ ಕಲ್ಲು ಹೊಡೆದು, ಟೈರ್ಗಳಿಗೆ ಬೆಂಕಿ ಹಚ್ಚಿದ್ದಾರೆ.ಇನ್ನು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತಿದ್ದಾರೆ.