ಇದೀಗ ವಾಹನ ಚಾಲಕರು ಎಚ್ಚರದಿಂದ ಇರಬೇಕಾದ ಪರಿಸ್ಥಿತಿ ಬಂದಿದೆ. ನಿಯಮ ಉಲ್ಲಂಘನೆ ಮಾಡಿದರೆ, ದೊಡ್ಡ ಮಟ್ಟದ ದಂಢ ತೆರಬೇಕಾದ ಹೊರ ತಿದ್ದುಪಡಿ ಇದೀಗ ದೇಶದಾದ್ಯಂತ ಸೆಪ್ಟೆಂಬರ್ 1ರಿಂದ ಜಾರಿಯಾಗಿದೆ. ಹೀಗಾಗಿ ಎಲ್ಲ ಪ್ರಮುಖ ನಗರಗಳಲ್ಲಿಯೂ ಇದೀಗ ಟ್ರಾಫಿಕ್ ಪೊಲೀಸರು ಅಲರ್ಟ್ ಆಗಿದ್ದಾರೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಹದ್ದಿನ ಕಣ್ಣಿಟ್ಟು ಚೆಕ್ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿನ್ನಯಷ್ಟೇ ಇಲ್ಲೊಂದು ಪ್ರಮುಖ ಘಟನೆ ನಡೆದಿದೆ.
ಹೌದು, ಸೂಕ್ತವಾದಂತಹ ದಾಖಲೆ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಮಾಡಿರೋದಕ್ಕೆ ದೆಹಲಿ ವ್ಯಕ್ತಿಯೊಬ್ಬರಿಗೆ 23 ಸಾವಿರ ದಂಡವನ್ನು ಪೊಲೀಸರು ವಿಧಿಸಿದ್ದಾರೆ. ಹೌದು ಇಲ್ಲೊಂದು ವಿಶೇಷ ಏನಪ್ಪ ಅಂದರೆ, ಅವರ ಸ್ಕೂಟಿಯೇ ಅಷ್ಟೊಂದು ಬೆಲೆ ಬಾಳುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ವಾಹನ ಸವಾರನಿಗೆ ದೊಡ್ಡ ಶಾಕ್ ಎದುರಗಾಗಿದೆ. ಹಾಗಾದರೆ ಪೊಲೀಸರು 23 ಸಾವಿರ ದಂಡ ವಿಧಿಸಿದ್ದೇಕೆ ಅನ್ನೋದು ಇಲ್ಲಿದೆ ನೋಡಿ.
ದಿನೇಶ್ ಮದನ್ ಎನ್ನುವ ವ್ಯಕ್ತಿ ಹೆಲ್ಮೆಟ್ ಇಲ್ಲದೆಯೇ ವಾಹನ ಚಲಾಯಿಸಿದ್ದ ಹಾಗೂ ಚಾಲನಾ ಪರವಾನಗಿಯೂ ಇರಲಿಲ್, ಇಷ್ಟೇ ಆಗಿದ್ದರೆ ದಂಢ ಕಡಿಮೆ ಇರುತ್ತಿತ್ತೇನೋ? ಆದರೆ, ಆ ವಾಹನಕ್ಕೆ ವಿಮೆ, ನೋಂದಣಿ ಪ್ರಮಾಣ ಪತ್ರ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರವೂ ಇರಲಿಲ್ಲ. ಹೌದು ಈ ಎಲ್ಲ ನಿಯಮ ಉಲ್ಲಂಘನೆ ಮಾಡಿದ್ದರಿಂದ ದಿನೇಶ್ ಮದನ್ ಎನ್ನುವವರಿಗೆ ಗುರುಗ್ರಾಮ ಪೊಲೀಸರು ಭಾರಿ ಮೊತ್ತದ ದಂಡ ವಿಧಿಸಿದ್ದಾರೆ.
ಚಾಲನಾ ಪರವಾನಗಿ ಇಲ್ಲದೇ ವಾಹನ ಓಡಿಸಿದರೆ 5 ಸಾವಿರ ದಂಢ, ವಾಹನ ನೊಂದಣಿ ಪ್ರಮಾಣಪತ್ರ ಇಲ್ಲದೆ ವಾಹನ ಚಲಾಯಿಸಿದರೆ 5 ಸಾವಿರ ದಂಢ, ಇನ್ನು ಇದರ ಜೊತೆಗೆ ಥರ್ಡ್ ಪಾರ್ಟಿ ವಿಮೆ ಇಲ್ಲದಿರುವ ಕಾರಣಕ್ಕೆ ₹ 2 ಸಾವಿರ ದಂಢ, ಅಷ್ಟೇ ಅಲ್ಲದೇ ವಾಯು ಮಾಲಿನ್ಯ ತಪಾಸಣಾ ಪ್ರಮಾಣ ಪತ್ರ ಇಲ್ಲದೇ ಇರೋದಕ್ಕೆ ₹10 ಸಾವಿರ ದಂಢ, ಇದೆಲ್ಲದರ ಜೊತೆಗೆ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸದ ಕಾರಣಕ್ಕೆ ₹1 ಸಾವಿರ ದಂಡ ಹೀಗೆ ಪೊಲೀಸರು ಒಟಟ್ಟಾರೆಯಾಗಿ 23 ಸಾವಿರ ದಂಢವನ್ನು ವಿಧಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿದ ಮದನ್, "ನನಗೆ ವಿಧಿಸಿದ ದಂಡ ಅಪಾರ. ಕೇವಲ ಹತ್ತು ನಿಮಿಷದಲ್ಲಿ ನನಗೆ ದಾಖಲೆಗಳನ್ನು ಹಾಜರುಪಡಿಸುವಂತೆ ಹೇಳಿದರು. ಅದು ಅಸಾಧ್ಯವಾಗಿತ್ತು. ದಾಖಲೆಗಳು ಮನೆಯಲ್ಲಿದ್ದವು. ಇನ್ನು ನನಗೆ ವಿಧಿಸಿದ ದಂಢ ನನ್ನ ಸ್ಕೂಟಿ ಮೌಕ್ಯಕ್ಕಿಂತ ಹೆಚ್ಚು, ಅದರ ಅರ್ದದಷ್ಟಕ್ಕೂ ನನ್ನ ಸ್ಕೂಟಿ ಬೆಲೆ ಬಾಳುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.