ಡಿಕೆಶಿಗೆ ಜಾಮೀನು ಸಿಗದಂತೆ ಮಾಡಿದವರು ಯಾರು?

somashekhar
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ಐಟಿ ಅಧಿಕಾರಿಗಳು  ದಾಳಿ ನಡೆಸಿದ್ದು ನಿಮಗೆಲ್ಲ ಗೊತ್ತೇ ಇದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಜಾರಿ ನಿರ್ದೇಶನಾಲಯ ಅಂದರೆ ಇಡಿ ಸಂಸ್ಥೆ ಸೆ.3ರಂದು ಡಿಕೆ ಶಿವಕುಮಾರ್ ಅವರನ್ನು ಬಂಧಿಸಿತ್ತು. ಡಿಕೆಶಿ ಬಂಧನವಾಗುತ್ತಿದ್ದಂತೆಯೇ ಅವರ ಅಭಿಮಾನಗಳ ಆಕ್ರಂಧನ ಮುಗಿಲು ಮುಟ್ಟಿತ್ತು. ಕನಕಪುರ ಮತ್ತು ರಾಮನಗರ ಜಿಲ್ಲೆಯಲ್ಲಿ ಶೋಕ ಮನೆ ಮಾಡಿತ್ತು.


ನಂತರ ಅವರು ಜಾಮೀನಿಗೆ ಅರ್ಜಿ ಹಾಕಿದ್ದರು. ವಿಧಿ ಆಟ ನೋಡಿ. ಡಿ.ಕೆ.ಶಿವಕುಮಾರ್ ಅವರಿಗೆ ಕೊನೆಗೆ ಜಾಮೀನು ಅರ್ಜಿಯೂ ಸಿಗದೆ, ಅವರು ಬಂಧನಕ್ಕೊಳಗಾಗುವಂತೆ ಆಯಿತು. ಆದರೆ ಡಿಕೆಶಿ ಅವರಿಗೆ ಜಾಮೀನು ಸಿಗದಂತೆ ಮಾಡಿದ್ದು ಯಾರು ಗೊತ್ತಾ? ಅವರೇ ಕರ್ನಾಟಕದ ಪುತ್ತೂರಿನ ವಕೀಲರಾದ ಕೆ.ಎಂ. ನಟರಾಜ್.


ಹೌದು, ಜಾರಿ ನಿರ್ದೇಶನಾಲಯ ಹಾಗೂ ಸಿ.ಬಿ.ಐ ಪ್ರಕರಣಗಳಿಗೆ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿದ್ದಾರೆ ಕೆ.ಎಂ.ನಟರಾಜ್. ಇವರು ಡಿಕೆಶಿ ವಿರುದ್ಧ ಸಮರ್ಥವಾಗಿ ವಾದ ಮಂಡಿಸಿದ ಫಲವಾಗಿ ಇವರ ವಿರುದ್ಧ ವಾದ ಮಂಡಿಸಿದ ಕಾಂಗ್ರೆಸ್ ನಾಯಕ ಹಾಗೂ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಿಫಲ ಆಗಿದ್ದರು. 


ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಶಿವಕುಮಾರ್ ಅವರನ್ನು ಸೆ.13 ರವರೆಗೆ ಜಾರಿ ನಿರ್ದದೇಶನಾಲಯ ಅವರ ವಶಕ್ಕೆ ನ್ಯಾಯಾಲಯ ನೀಡಿದೆ. ಇದು ಡಿಕೆಶಿಗೆ ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ. ಇನ್ನೂ ಡಿಕೆಶಿ ಅಭಿಮಾನಿಗಳಂತೂ ರಾಜ್ಯದ ಅನೇಕ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿ, ಸರಕಾರಿ ಬಸ್‌ಗಳಿಗೆ ಕಲ್ಲು ಹೊಡೆದು ಪ್ರತಿಭಟನೆ ಮಾಡಿದ್ರು. ಮೋದಿ ಮತ್ತು ಅಮಿತ್ ಶಾ ವಿರುದ್ಧ ಕಿಡಿ ಕಾರಿದ್ದರು.


ಅದು ೨೦೧೭ ರ ಸಮಯ. ಆಗ ಡಿ.ಕೆ.ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿತ್ತು. ಆಗ ಅಧಿಕಾರಿಗಳಿಗೆ 8.59 ಕೋಟಿ ನಗದು ಹಣ ದೊರಕಿತ್ತು. ಇದು ಹವಾಲಾ ಹಣ ಎನ್ನಲಾಗಿತ್ತು. ಹೀಗೆ ಅಕ್ರಮವಾಗಿ ಹೊಂದಿದ್ದ ಈ ಹಣದ ಪ್ರಕರಣವೇ ಡಿಕೆಶಿ ಅವರಿಗೆ ಇವತ್ತಿಗೂ ಮುಳ್ಳಾಗಿಯೇ ಕಾಡುತ್ತಿರೋದು. ಇದೇ ಅವರ ಬಂಧನಕ್ಕೂ ಕಾರಣವಾಗಿದೆ.


Find Out More:

Related Articles: