ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ಇದೀಗ ಸರಕಾರಿ ವೈದ್ಯರಿಗೆ ಶಾಕ್ ನೀಡಿದ್ದಾರೆ. ಹೌದು ಹಾಗಾದರೆ ಶ್ರೀರಾಮುಲು ನೀಡಿದ ಶಾಕ್ ಏನು ಗೊತ್ತಾ? ಸರಕಾರಿ ವೈದ್ಯರು ನರ್ಸಿಂಗ್ ಹೋಂ ಮತ್ತು ಕ್ಲಿನಿಕ್ ಗಳಲ್ಲಿ ಸೇವೆ ಮಾಡಿದರೆ ಅವರನ್ನು ವಜಾಗೊಳಿಸುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ. ಹೌದು ಈ ಕುರಿತು ಶ್ರೀರಾಮುಲು ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಮಾತನಾಡಿದ್ದಾರೆ.
"ನಾನು ಬಡವರಪರವಾಗಿ ಇರುವವನು. ಅದಕ್ಕೆ ಈ ನಿರ್ದಾರಕ್ಕೆ ಬಂದಿದ್ದೇನೆ. ಒಂದು ವೇಳೆ ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸಿದರೆ ಬಡವರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ತೆಗೆಯುವುದು ಮತ್ತು ನರ್ಸಿಂಗ್ ಹೋಂ ಗಳಲ್ಲಿ ಸೇವೆ ಸಲ್ಲಿಸಿದರೆ ಅವರನ್ನು ವಜಾಗೊಳಸಿವುದಾಗಿ ಎಚ್ಚರಿಸಿದ್ದಾರೆ.
ಇನ್ನು ಆರೋಗ್ಯ ಸಚಿವರು ಮತ್ತೊಮ್ಮೆ ಜನರಿಗೆ ಹತ್ತಿರ ಆಗೋಕೆ ಹೊಸ ತಂತ್ರವನ್ನು ಹೂಡಿದ್ದಾರೆ. ಹೌದು ಇದೇನಿದು ಹೊಸ ತಂತ್ರ ಅಂತೀರಾ? ಅದು ಆರೋಗ್ಯ ಕೇಂದ್ರಗಳಲ್ಲಿ ವಾಸ್ತವ್ಯ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಸೂಕ್ತ ಮೂಲ ಸೌಕರ್ಯ ಇದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು ಆರೋಗ್ಯ ಸಚಿವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಹೌದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ವಾಸ್ತವ್ಯ ಹೂಡಲು ತೀರ್ಮಾನಿಸಿದ್ದೇನೆ ಎಂದಿದ್ದಾರೆ.
ಈಗಾಗಲೇ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪಟ್ಟಿಯನ್ನು ಮಾಡಲಾಗಿದ್ದು, ಅಲ್ಲಿನ ಸ್ಥಿತಿಗತಿ ಕೆಲವು ಆಸ್ಪತ್ರೆಗಳನ್ನು ಪಟ್ಟಿ ಮಾಡಲಾಗಿದ್ದು, ಅಲ್ಲಿನ ಸ್ಥಿತಿಗತಿ, ಸಿಬ್ಬಂದಿ ಕೊರತೆ, ರೋಗಿಗಳ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಎಲ್ಲ ಶಾಸಕರೂ ಜತೆ ಸೇರುವಂತೆ ಮನವಿ ಮಾಡುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಅವರು ತಿಳಿಸಿದರು.
ಆದರೆ ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಅವರು ಪ್ರತಿಕ್ರಿಯಿಸಿದ ಅವರು, ಸರಕಾರದಲ್ಲಿ ಯಾವುದೇ ರೀತಿಯ ಹಣಕಾಸಿನ ತೊಂದರೆಯಿಲ್ಲ ಎಂದು ಹೇಳಿದರು. ನಂತರ ನೆರೆ ಸಂತ್ರಸ್ತರಿಗೆ ಸರಕಾರ ಸೂಕ್ತ ಪರಿಹಾರ ನೀಡುತ್ತಿದೆ ಎಂದು ಸಮರ್ಥನೆ ಮಾಡಿದರು.