ದಲಿತ ಸಂಸದನನ್ನು ಒಳಗೆ ಬಿಟ್ಟುಕೊಳ್ಳದ ನಿವಾಸಿಗಳು

somashekhar
ತುಮಕೂರಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹೌದು, ದಲಿತ ಸಂಸದನನ್ನು ಗ್ರಾಮದೊಳಗೆ ಬಿಡದೇ ಗ್ರಾಮಸ್ಥರು ತಡೆ ಹಾಕಿದ ವಿಚಿತ್ರ ಘಟನೆ ಇದು. ಚಿತ್ರದುರ್ಗದ ಸಂಸದ ಆನೇಕಲ್ ನಾರಾಯಣ ಸ್ವಾಮಿಗೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿಯಲ್ಲಿ ಗೊಲ್ಲರಹಟ್ಟಿಗೆ ಬರೋಕೆ ನಿರ್ಭಂದನೆ ಹೇರಿದ ಘಟನೆ ಇದೀಗ ರಾಜ್ಯದ ತುಂಬೆಲ್ಲಾ ಚರ್ಚೆಗೆ ಗ್ರಾಸವಾಗಿದೆ. 


ಹೌದು ಖಾಸಗಿ ಕಂಪನಿಗಳ ತಂಡದೊಂದಿಗೆ ಊರಿಗೆ ಬಂದಿದ್ದ ಸಂಸದ ನಾರಾಯಣಸ್ವಾಮಿ ಅವರು ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಗೂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಎದುರಾದ ಗೊಲ್ಲರಹಟ್ಟಿಯ ನಿವಾಸಿಗಳು ಹಟ್ಟಿಯ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಸಂಸದರನ್ನು ಅಲ್ಲಿಯೇ ನಿಲ್ಲಿಸಿ, ಕುರ್ಚಿ ಹಾಕಿ ಕೂರಲು ಮನವಿ ಮಾಡಿದರು. 


ನಂತರ ಯಾವುದೇ ಕಾರಣಕ್ಕೂ ನಿಮ್ಮ ಜನಾಂಗದವರು ಈ ಹಟ್ಟಿ ಒಳಗೆ ಹೋಗಬಾರದು ಎಂದು ಪಟ್ಟು ಹಿಡಿದರು. ಆದತರೆ ಅಲ್ಲಿ ತಂಡದದಲ್ಲಿ ಇದ್ದ ಇನ್ನಿತರರನ್ನು ಹಟ್ಟಿಯ ಒಳಕ್ಕೆ ಬಿಟ್ಟುಕೊಂಡರು. ಆಸದರೆ ನಾರಾಯಣ ಸ್ವಾಮಿ ಮಾತ್ರ ಎಷ್ಟೇ ಮನವೊಲಿಸಲು ಪ್ರಯತ್ನ ಪಟ್ಟರೂ ಗೊಲ್ಲರಹಟ್ಟಿಯ ನಿವಾಸಿಗಳು ಅವರನ್ನು ಒಳಕ್ಕೆ ಬಿಟ್ಟಿಕೊಳ್ಳಲೇ ಇಲ್ಲ. 


ಹಾಗಾದರೆ ಅವರು ನೀಡಿದ ಕಾರಣ ಏನು ಗೊತ್ತಾ? "ನೀವು ಗೊಲ್ಲರಹಟ್ಟಿ ಪ್ರವೇಶ ಮಾಡಿದರೆ ಕೇವಲ ನಮಗೆ ಮಾತ್ರ ಅಲ್ಲ, ನಿಮಗೂ ಕೆಟ್ಟದಾಗುತ್ತದೆ. ಬಲವಂತಾಗಿ ನುಗ್ಗಿದ, ಸುಳ್ಳು ಹೇಳಿ ಒಳಗೆ ಬಂದಿದ್ದ ಹಲವರಿಗೆ ಅನಾಹುತ ಉಂಟಾಗಿದೆ. ಆ ಅನಾಹುತ ನಿಮಗೆ ಆಗೋದು ಬೇಡ," ಎಂದು ಹೇಳುವ ಮೂಲಕ ಅವರುದು ನಾರಾಯಣಸ್ವಾಮಿಗೆ ಸಮಾಧಾನಪಡಿಸಿದ್ದಾರೆ.


ಇಲ್ಲಿ ಇಬ್ಬರಿಗೂ ಏನಾಗಬಾರದು ಎನ್ನುವ ಕಾಳಜಿ ಒಂದು ಕಡೆ ಇದ್ದರೆ ಮತ್ತೊಂದು ಕಡೆ ಇದನ್ನು ಅಸ್ಪಶ್ಯತೆ ಎಂದು ಚರ್ಚೆ ಮಾಡಲಾಗುತ್ತಿದೆ. ಅಥವಾ ಇದನ್ನು ಮೂಢನಂಬಿಕೆಯೂ ಎನ್ನಬಹುದು. ಆದರೆ ನಾರಾಯಣ ಸ್ವಾಮಿ ಅವರು ಮನವೊಲಿಸಲು ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲೇ ಇಲ್ಲ. "ನಾನು ನಿಮ್ಮನ್ನು ಸುಧಾರಿಸಲು ಬಂದಿದ್ದೇನೆ, ನೀವು ನಿಮ್ಮ ಹಳೇಯ ಮೌಢ್ಯಕ್ಕೆ ಅಂಟಿಕೊಂಡು ಕೂತಿದ್ದರೇ ನಾನು ಅಗತ್ಯ ಕ್ರಮ ಕೈಗೊಳ್ಳುತ್ತೇನೆ,"  ಎಂದು ಎಚ್ಚರಿಕೆ ನೀಡಿದ್ದಾರೆ. 


ಆದರೆ ಕೊನೆಗೂ ಅವರೆಲ್ಲರೂ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಸಂಸದ ನಾರಾಯಣಸ್ವಾಮಿ ಸೌಜನ್ಯದಿಂಲೇ ಕಾರಿನಲ್ಲೇ ಕುಳಿತುಕೊಂಡರು. ಆದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲ್ಲ ಎಂದು ಹೇಳಿದರು. ಕಾರಣ ಏನೆಂದರೆ, "ನಾನು ಅತಿಹೆಚ್ಚು ಗೊಲ್ಲರ ಮತದಿಂದ ಗೆದ್ದು ಬಂದಿದ್ದೆನೆ. ಅವರ ಸಮುದಾಯಕ್ಕೆ ಏನಾದರೊಂದು ಒಳ್ಳೆಯದು ಮಾಡಬೇಕು ಎಂದು ಬಂದಿದ್ದೇನೆ. ಈ ಒಂದು ಕಾರಣಕ್ಕೆ ನೀವು ಅವಮಾನ ಮಾಡಿದರೂ ಸುಮ್ಮನಿದ್ದೇನೆ," ಎಂದು ಹೇಳಿ ತಮ್ಮ ಅಸಮಾಧಾನ ಹೊರ ಹಾಕಿದರು.


Find Out More:

Related Articles: