ಇಬ್ಬರ ಅನರ್ಹತೆಗೆ ಮುಂದಾದ ರಾಜ್ಯ ಸರ್ಕಾರ

frame ಇಬ್ಬರ ಅನರ್ಹತೆಗೆ ಮುಂದಾದ ರಾಜ್ಯ ಸರ್ಕಾರ

somashekhar
ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಜೆಡಿಎಸ್ ಗೆ ಇದೀಗ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಇಬ್ಬರ ಅನರ್ಹತೆಗೆ ರಾಜ್ಯ ಸರ್ಕಾರ ಮುಂದಾಗಿರುವುದು ಜೆಡಿಎಸ್ ಗೆ ಅತಿದೊಡ್ಡ ತಲೆನೋವಾಗಿದೆ. ಮನ್ಮುಲ್ ಚುನಾವಣೆಯಲ್ಲಿ 8 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್‌ಗೆ ದೊಡ್ಡ ಅಘಾತ ಎದುರಾಗಿದೆ. ಆದರೆ ಇದೀಗ ತಾಂತ್ರಿಕ ನೆಪವೊಡ್ಡಿ ಇಬ್ಬರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಸದಸ್ಯತ್ವ ಅನರ್ಹ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.  ಈ ಕುರಿತು ಮತ್ತಷ್ಟು ಮಾಹಿತಿ ಏನಿದೆ ಅನ್ನೋದನ್ನು ನಾವು ನಿಮಗೆ ಹೇಳ್ತೀವಿ ನೋಡಿ.

ಜೆಡಿಎಸ್ ಸದಸ್ಯರಾದ ನಲ್ಲಿಗೆರೆ ಬಾಲು ಮತ್ತು ಎಚ್.ಟಿ. ಮಂಜುನಾಥ್‌ಗೆ ಸಹಕಾರ ಸಂಘಗಳ ಉಪ ನಿಬಂಧಕರಿಂದ ನೋಟಿಸ್ ಬಂದಿದ್ದು,ಚುನಾವಣೆ ಷರತ್ತನ್ನು ಪಾಲಿಸಿಲ್ಲ ಎಂದು ನೋಟಿಸ್ ನೀಡಿದ್ದಾರೆ. ಷರತ್ತುಗಳು ಸಾಕಷ್ಟಿದ್ದು ಅದರಲ್ಲಿ ಕೆಲವನ್ನು ಪಾಲಿಸಿಲ್ಲ ಎಂದು ಕಾರಣ ತಿಳಿಸಿದೆ. ಈ ಮೂಲಕ ಜೆಡಿಎಸ್ ನಾಯಕರ ಅಧಿಕಾರದ ಕನಸು ಕಮರಿ ಹೋಗಿದೆ. ಏಕೆಂದರೆ ಸದಸ್ಯ ನಲ್ಲಿಗೆರೆ ಬಾಲು ಸಹೋದರ ಮನ್ ಮುಲ್ ನ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ನಿರ್ವಹಿಸುತ್ತಿದ್ದು ಇದು ಕಾನೂನು ಬಾಹಿರ ಎನ್ನಲಾಗಿದೆ.

ಸಂಘದ ಬೈಲಾ ಪ್ರಕಾರ ಸಂಬಂಧಿಕರು ಕೆಲಸ ನಿರ್ವಹಿಸುವಂತಿಲ್ಲ ಎಂಬ ಷರತ್ತು ಇದ್ದು, ಈ ಷರತ್ತು ಉಲ್ಲಂಘನೆಯ ಕಾರಣ ನೀಡಿ ಸದಸ್ಯತ್ವ ರದ್ದತಿಗೆ ನೋಟಿಸ್ ನೀಡಲಾಗಿದೆ. ಇನ್ನು  ಕೆ.ಆರ್. ಪೇಟೆಯ ಎಚ್.ಟಿ. ಮಂಜುನಾಥ್ 180 ದಿನ ಸಹಕಾರ ಸಂಘಕ್ಕೆ ಹಾಲು ಪೂರೈಕೆ ಮಾಡಿಲ್ಲ ಎಂಬ ಕಾನೂನಿನ ನಿಯಮ ಹೇಳಿ ಸದಸ್ಯತ್ವ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಈ ವಿಚಾರ ತಿಳಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಇಂದು ಸಹಕಾರ ಸಂಘದ ಕಚೇರಿಗೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಸದಸ್ಯರನ್ನು ಅನರ್ಹ ಮಾಡುವ ಮೂಲಕ ಜೆಡಿಎಸ್ ಗೆ ಅಧಿಕಾರ ತಪ್ಪಿಸಲು ಸರ್ಕಾರ ಮತ್ತು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. 


Find Out More:

Related Articles:

Unable to Load More