ದೆಹಲಿ: ಕರ್ನಾಟಕ ರಾಜ್ಯದ ಕಾಂಗ್ರೇಸ್ ಶಾಸಕ, ಕನಕಪುರ ಬಂಡೆ ಇನ್ನುಮುಂದೆ ತಿಹಾರಿ ಜೈಲಿನಲ್ಲೇ ಫಿಕ್ಸ್. ಯಾಕೆಂದರೆ ನ್ಯಾಯಾಲಯಕ್ಕೆ ರಾಶಿ ರಾಶಿ ದಾಖಲೆಗಳನ್ನು ಇ. ಡಿ ನೀಡಿದೆ. ಆದ್ದರಿಂದ ಪ್ರಕರಣದಿಂದ ಡಿ.ಕೆ.ಶಿ ಗೆ ಬೇಲ್ ಸಿಗುವುದು ಬಹಳ ಕಠಿಣವಾಗಿದೆ. ನಟರಾಜ್, ಅದೆಷ್ಟು ಸಿದ್ದತೆ ಮಾಡಿಕೊಂಡು ಬಂದಿದ್ದರು ಎಂದರೆ, ಐದು ಸೂಟ್ಕೇಸ್ ನಲ್ಲಿ ಡಿ.ಕೆ.ಶಿವಕುಮಾರ್ ಕೇಸ್ ವಿರುದ್ದದ ದಾಖಲೆಗಳನ್ನು ನ್ಯಾಯಾಯಲಕ್ಕೆ ತಂದಿದ್ದರು.
ಒಂದೊಂದು ವಾದಗಳನ್ನು ಮಂಡಿಸುವಾಗಲೂ, ಅದಕ್ಕೆ ಸಂಬಂಧಪಟ್ಟ ಹಲವು ದಾಖಲೆಗಳನ್ನು ರೋಸ್ ಅವೆನ್ಯೂ ನ್ಯಾಯಾಲಯದ ಜಡ್ಜ್ ಮುಂದಿಡುತ್ತಿದ್ದರು. ಹಾಗಾಗಿ, ಸುದೀರ್ಘವಾಗಿ ವಿಚಾರಣೆ ನಡೆಯಿತು ನ್ಯಾಯಾಲಯದಲ್ಲಿ. ಡಿ.ಕೆ.ಶಿವಕುಮಾರ್ ಅವರ ಪುತ್ರಿಯನ್ನು ನಾವು ವಿಚಾರಣೆಗೆ ಒಳಪಡಿಸಿದೆವು. ಸಾಲು ಕೊಟ್ಟವರು ಯಾರು ಎನ್ನುವ ಬಗ್ಗೆ, ಸರಿಯಾದ ಮಾಹಿತಿ ಅವರಿಗಿಲ್ಲ. ನಲವತ್ತು ಕೋಟಿ ನೀಡಲಾಗಿದೆ ಎಂದು ದಾಖಲೆ ಒದಗಿಸಲಾಗಿದೆ.
ಈ ಬಗ್ಗೆ, ಇನ್ನೂ ಕೂಲಂಕುಷ ವಿಚಾರಣೆಗೆ ನಮಗೆ ಕಾಲಾವಕಾಶ ಬೇಕಿದೆ, ಕೆಲವೊಂದು, ಹೇಳಿಕೆಗಳಿಗೂ, ದಾಖಲೆಗಳಿಗೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಈ ಕೇಸಿಗೆ ಸಂಬಂಧಿಸಿದಂತೆ, ಹಲವು ರಾಜಕೀಯ ಮುಖಂಡರು ಸೇರಿದಂತೆ, ಉದ್ಯಮಿಗಳು, ಸ್ನೇಹಿತರು, ಕುಟುಂಬಸ್ಥರನ್ನು ವಿಚಾರಣೆ ನಡೆಸಬೇಕಿದೆ ಎಂದರು.
ವಕೀಲರು ಪ್ರತಿಯೊಂದು ವಾದಕ್ಕೂ, ಪೂರಕವಾದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡುತ್ತಿದ್ದರು. ಡಿಕೆಶಿಕೇಸಿಗೆ ಸಂಬಂಧಪಟ್ಟವರನ್ನು ವಿಚಾರಣೆ ನಡೆಸಿದಾಗ, ಸಂಬಂಧಪಟ್ಟ ದಾಖಲೆಯನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ನಟರಾಜ್, ನ್ಯಾಯಾಧೀಶರಿಗೆ ಹೇಳಿದರು. ತಾಯಿ, ಸಹೋದರನ ಹೆಸರಿನಲ್ಲಿ ನೊಂದಣಿಯಾಗಿರುವ ಆಸ್ತಿಗೆ ತನ್ನ ತಾಯಿ, ಸಹೋದರನ ಹೆಸರಿನಲ್ಲಿ ನೊಂದಣಿಯಾಗಿರುವ ಆಸ್ತಿಗಳನ್ನು, ನೇರ ನಗದು ವ್ಯವಹಾರದಲ್ಲಿ ಖರೀದಿಸಲಾಗಿದೆ.
ತಮ್ಮದು, ರೈತ ಕುಟುಂಬ ಎಂದು ಹೇಳುವ ಡಿ.ಕೆ.ಶಿವಕುಮಾರ್, ಅದು ಹೇಗೆ ಕೋಟ್ಯಾಂತರ ರೂಪಾಯಿ ಲಾಭ ಮಾಡಿಕೊಳ್ಳಲು ಸಾಧ್ಯವೆಂದ ನಟರಾಜ್, ಅದಕ್ಕೂ ದಾಖಲೆಯನ್ನು ನೀಡಿದ್ದಾರೆ. ತೆರಿಗೆ ಕಟ್ಟಿದ ಮಾತ್ರಕ್ಕೆ, ಕಪ್ಪುಹಣ ಬಿಳಿಯಾಗಲು ಸಾಧ್ಯವೇ? ಎಲ್ಲಾ ವ್ಯವಹಾರಗಳಿಗೆ, ಭಾರತದ ಸಂವಿಧಾನದ ಪ್ರಕಾರ ತೆರಿಗೆ ಕಟ್ಟಲಾಗಿದೆ ಎನ್ನುವುದು ಆರೋಪಿಯ ನಿಲುವು. ತೆರಿಗೆ ಕಟ್ಟಿದ ಮಾತ್ರಕ್ಕೆ, ಎಲ್ಲಾ, ಕಪ್ಪುಹಣ ಬಿಳಿಯಾಗಲು ಸಾಧ್ಯವೇ ಎಂದು ನಟರಾಜ್ ವಾದ ಮಂಡಿಸಿದ್ದಾರೆ.