ಬೆಂಗಳೂರು: ಬಿಜೆಪಿ ಯಿಂದ ಸ್ಪರ್ದಿಸಲಾರದೇ ಜೆಡಿಎಸ್ ನಿಂದ ಸ್ಪರ್ದಿಸಲಾಗುತ್ತದೆಯೇ? ಎಂದು ಹೆಚ್. ವಿಶ್ವನಾಥ್ ಗುಡುಗಿದ್ದಾರೆ. ಅಂತೆಯೇ ನಾನು ಸ್ಪರ್ಧೆ ಮಾಡಬೇಕೋ, ಮಗನನ್ನು ಕಣಕ್ಕಿಳಿಸಬೇಕೋ ಎಂದು ಕಾದು ನೋಡೋಣ ಎಂದಿದ್ದಾರೆ. ಬಿಜೆಪಿ ಸೇರ್ಪಡೆ ಎನ್ನುವುದು ಒಂದು ಶಾಸ್ತ್ರವಷ್ಟೇ. ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡಬೇಕು, ಇನ್ನೇನು ಜೆಡಿಎಸ್ಗೆ ಹೋಗಲಿಕ್ಕಾಗುತ್ತಾ" ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಎಚ್. ವಿಶ್ವನಾಥ್, ಸುಪ್ರೀಂಕೋರ್ಟ್ನಲ್ಲಿ ನಮ್ಮ ಪ್ರಕರಣ ಇತ್ಯರ್ಥವಾಗಲಿದೆ. ಅನರ್ಹ ಶಾಸಕರ ಪರವೇ ತೀರ್ಪು ಬರಲಿದೆ. ಹುಣಸೂರು ಕ್ಷೇತ್ರದಿಂದ ಬಿಜೆಪಿಯಿಂದ ನಾನೇ ಸ್ಪರ್ಧೆ ಮಾಡಬೇಕೆಂಬುದು ಸ್ಥಳೀಯ ಮುಖಂಡರ ಅಭಿಪ್ರಾಯ. ನನ್ನ ಸ್ಪರ್ಧೆಗೆ ಬಿಜೆಪಿಗರಲ್ಲಿ ಯಾವುದೇ ಆಕ್ಷೇಪಣೆ ಇಲ್ಲ ಎಂದು ಹೆಮ್ಮೆಯಿಂದ ತಿಳಿಸಿದರು.
ಮಾಜಿ ಸಚಿವ ಜಿ.ಟಿ ದೇವೇಗೌಡ ಮತ್ತವರ ಪುತ್ರ ಜೆಡಿಎಸ್ನಲ್ಲೇ ಇದ್ದಾರೆ." ಜೆಡಿಎಸ್ V/S ಜೆಡಿಎಸ್ ನಡುವೇ ಚುನಾವಣೆ ನಡೆದಿಲ್ಲವೇ. ಕಾಂಗ್ರೆಸ್ V/S ಕಾಂಗ್ರೆಸ್ ನಡುವೇ ಚುನಾವಣೆ ನಡೆದಿಲ್ಲವೇ. ಅಂತೆಯೇ ಈ ಬಾರಿಯ ಚುನಾವಣೆಯೂ ಬಿಜೆಪಿ V/S ಬಿಜೆಪಿ ನಡುವೇ ನಡೆಯಬಹುದು. ಕೆಲವೊಮ್ಮೆ ಹೀಗಾಗುತ್ತೇ, ಇದೊಂದು ರಾಜಕೀಯವಷ್ಟೇ" ಎಂದು ತಿಳಿಸಿದ್ದಾರೆ. ಇನ್ನು ನನ್ನ ಕ್ಷೇತ್ರದ ಕೆಲಸದ ವಿಚಾರವಾಗಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿದ್ದೆ. ಚುನಾವಣೆಗೆ ಸಂಬಂಧಿಸಿದ ಯಾವುದೋ ಆಂತಕದಿಂದ ಭೇಟಿಯಾಗಿರಲಿಲ್ಲ. ನಾವು ಸ್ಪೀಕರ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ. ಇವತ್ತು ಸಂಜೆ ಇಲ್ಲದೇ ಹೋದರೆ ನಾಳೆ ತೀರ್ಪು ಬರಲಿದೆ. ನಮ್ಮ ಪರವಾಗಿಯೇ ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ ಎಂದು ಹೇಳಿದರು.
ಸದ್ಯಕ್ಕೀಗ ನಾಲ್ಕನೇ ಉಪಚುನಾವಣೆಗೆ ಹುಣಸೂರು ಕ್ಷೇತ್ರ ಸಿದ್ಧವಾಗಿದೆ. ಮೂರು ಪಕ್ಷಗಳು ಉಪಚುನಾವಣೆ ಗೆಲ್ಲುತ್ತೇವೆ ಎಂದು ಹುಮ್ಮಸ್ಸಿನಿಂದ ಬೀಗುತ್ತಿವೆ. ಅದಕ್ಕಾಗಿ ತಂತ್ರವನ್ನೂ ಹೆಣೆಯುತ್ತಿವೆ. ಅಕ್ಟೋಬರ್ 24ರಂದು ನಡೆಯುವ ಮತ ಎಣಿಕೆಯಂದು ಹುಣಸೂರಿನ ಅಧಿಪತಿ ಯಾರೆಂಬುದು ನಿರ್ಣಯವಾಗಲಿದೆ. ನಿಜಕ್ಕೂ ವಿಶ್ವನಾಥ್ ಅಮಾಯಕರಾ, ಅವರ ಪರವಾಗಿ ಕ್ಷೇತ್ರದ ಮತದಾರರು ನಿಲ್ಲುತ್ತಾರಾ ಇಲ್ಲವಾ ಮತದಾರ ಪ್ರಭು ಕೈ ಹಿಡಿತಾರಾ ಎಂಬುದು ಕಾದು ನೋಡ ಬೇಕಾಗಿದೆ.