ಸೋಷಿಯಲ್ ಮೀಡಿಯಾ ಸಾಮರ್ಥ್ಯ ತಿಳಿಸಿದ ಪ್ರಧಾನಿ ನಮೋ

frame ಸೋಷಿಯಲ್ ಮೀಡಿಯಾ ಸಾಮರ್ಥ್ಯ ತಿಳಿಸಿದ ಪ್ರಧಾನಿ ನಮೋ

somashekhar
ಸಾಮಾಜಿಕ ಜಾಲತಾಣಗಳು ಎಂದರೆ ಅದ್ಯಾರಿಗೆ ಗೋತ್ತಿಲ್ಲ ಹೇಳಿ. ಪ್ರಧಾನಿಯಿಂದ ಹಿಡಿದು ಹಳ್ಳಿ ಹುಡುಗನ ವರೆಗೂ ಸೋಷಿಯಲ್ ಮೀಡಿಯಾ ದಲ್ಲಿ ಮಗ್ನರಾಗಿರುತ್ತಾರೆ. ಇದರಿಂದ ಒಳಿತೂ  ಉಂಟು ಕೆಡಕೂ  ಉಂಟು. ನಾವು ಹೇಳಿ ಬಳಸುತ್ತೇವೆಯೋ ಹಾಗೆ. ಆದರೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಷಿಯಲ್ ಮೀಡಿಯಾಗಳ ಬಗ್ಗೆ ಒಂದಿಷ್ಟು ಮಾತನಾಡಿದ್ದಾರೆ. ಅದೇನು ಗೊತ್ತಾ?

 ಸೋಷಿಯಲ್ ಮೀಡಿಯಾ ಪ್ರಜಾಪ್ರಭುತ್ವದ ಶಕ್ತಿಶಾಲಿ ಮಾಧ್ಯಮ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತಕ್ಕೆ ಪ್ರಬಲ ಅಸ್ತ್ರವಾಗಿ ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ. ನ್ಯೂಯಾರ್ಕ್‍ನಲ್ಲಿ ಬ್ಲೂಮ್ ಬರ್ಗ್ ಗ್ಲೋಬಲ್ ಬ್ಯುಸಿನೆಸ್ ವೇದಿಕೆಯಲ್ಲಿ ಮಾತನಾಡಿದ ನಂತರ ನಡೆದ ಸಂವಾದದ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಷಿಯಲ್ ಮೀಡಿಯಾ ತುಂಬಾ ಶಕ್ತಿಶಾಲಿ ಮಾಧ್ಯಮ. ಈಗಾಗಲೇ ಅಸ್ಥಿತ್ವ ಹೊಂದಿರುವ ಮಾಧ್ಯಮಗಳು ನಕಲಿ ಸುದ್ದಿಗಳನ್ನು ನಿಗ್ರಹಿಸಲು ಕ್ರಮ ಕೈಗೊಳ್ಳಲು ಸಾಮಾಜಿಕ ಮಾಧ್ಯಮಗಳು ಸಹಾಯ ಮಾಡುತ್ತವೆ ಎಂದರು. ಉತ್ತಮ ಆಡಳಿತ ನಡೆಸಲು ಸಾಮಾಜಿಕ ಮಾಧ್ಯಮಗಳನ್ನು ಪ್ರಬಲ ಅಸ್ತ್ರವಾಗಿ ಧನಾತ್ಮಕ ರೀತಿಯಲ್ಲಿ ಬಳಕೆ ಮಾಡಬಹುದು. ಸೋಷಿಯಲ್ ಮೀಡಿಯಾಗಳ ಮೂಲಕ ನನ್ನ ಕಣ್ಣಿಗೆ ಕಂಡ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದೇನೆ ಎಂದು ಗುಜರಾತ್‍ನ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡ ಜನರನ್ನು ಸೋಷಿಯಲ್ ಮೀಡಿಯಾ ಮೂಲಕ ಕಂಡು ಕಾಪಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದನ್ನು ವಿವರಿಸಿದರು.

ಒಂದು ದೇಶದ ಸರ್ಕಾರದ ಪ್ರಧಾನಿಯಾಗಿ ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಉತ್ತಮ ಆಡಳಿತಕ್ಕೆ ಉತ್ತಮ ಅಸ್ತ್ರವಾಗಿ ಸೋಷಿಯಲ್ ಮೀಡಿಯಾಗಳನ್ನು ಬಳಕೆ ಮಾಡಿಕೊಳ್ಳಲು ನಾನು ಇಚ್ಛಿಸುತ್ತೇನೆ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು. ಸೋಷಿಯಲ ಮೀಡಿಯಾದಲ್ಲಿ ಒಂದು ಸುದ್ದಿ ಬಂದಾಗ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಿ ಫಾರ್ವರ್ಡ್ ಮಾಡಬೇಕು ಎಂದು ಸಹ ಮೋದಿ ಹೇಳಿದರು. ನಕಲಿ ಸುದ್ದಿಗಳು ಹಬ್ಬಿ ಅದು ವೈರಲ್ ಆಗುವುದನ್ನು ತಂತ್ರಜ್ಞಾನ ಮೂಲಕ ಬಗೆಹರಿಸಬೇಕು ಎಂದು ತಿಳಿಸಿದ್ದಾರೆ.


Find Out More:

Related Articles:

Unable to Load More