‘ಗೋ ಬ್ಯಾಕ್‌ ಮೋದಿ’ ಹಿಂದೆ ಪಾಪಿ ಪಾಕ್‌ ಹಸ್ತ!?

somashekhar
ನವದೆಹಲಿ: ಗೋ ಬ್ಯಾಕ್ ಮೋದಿ ಘೋಷಣೆ ಕಳೆದ ಕೆಲ ದಿನಗಳಿಂದ ನರೇಂದ್ರ ಮೋದಿಗೆ ಕೂಗಿರುವುದು  ಭಾರೀ ವಿವಾದಕ್ಕೆ ಕಾರಣವಾಗಿದೆ. ಮೋದಿ ಮತ್ತು ಜಿನ್‌ಪಿಂಗ್‌ ನಡುವೆ ಕಾಶ್ಮೀರ ವಿಚಾರದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಜಯ್ ಗೋಖಲೆ, ಕಾಶ್ಮೀರವು ನಮ್ಮ ಆಂತರಿಕ ವಿಚಾರ ಎಂಬ ನಿಲುವಿಗೆ ಬದ್ಧರಾಗಿದ್ದೇವೆ ಎಂದಿದ್ದಾರೆ. ವಾಣಿಜ್ಯ, ರಕ್ಷಣಾ ಸಹಕಾರ, ಭಯೋತ್ಪಾದನೆ ನಿರ್ಮೂಲನೆ ವಿಚಾರವಾಗಿ ಮೋದಿ- ಜಿನ್‌ಪಿಂಗ್ ಮಾತುಕತೆ ನಡೆಸಿದ್ದಾರೆ. ಹವಾಮಾನ ಬದಲಾವಣೆ ಕುರಿತೂ ಚರ್ಚೆ ಆಗಿದೆ. ಜಿನ್‌ಪಿಂಗ್ ಅವರು ಮಾತುಕತೆ ವೇಳೆ ರಕ್ಷಣಾ ಸಹಕಾರ ವಿಚಾರಕ್ಕೆ ಸಂಬಂಧಿಸಿ ಹೆಚ್ಚು ಒತ್ತು ನೀಡಿದ್ದಾರೆ ಎಂದು ಗೋಖಲೆ ತಿಳಿಸಿದ್ದಾರೆ.

ಮುಂದಿನ ಶೃಂಗಸಭೆಗೆ ಚೀನಾಕ್ಕೆ ಬರಬೇಕು ಎಂದು ಮೋದಿಗೆ ಜಿನ್‌ಪಿಂಗ್ ಆಹ್ವಾನ ನೀಡಿದ್ದು, ಮೋದಿ ಮನ್ನಿಸಿದ್ದಾರೆ. ಚೀನಾ ಅಧ್ಯಕ್ಷರ ಜತೆಗಿನ ಶೃಂಗಸಭೆ ಆಯೋಜಿಸಿದ್ದಕ್ಕಾಗಿ ತಮಿಳುನಾಡಿನ ಜನರಿಗೆ ಮತ್ತು ಸರ್ಕಾರಕ್ಕೆ ಮೋದಿ ಧನ್ಯವಾದ ಸಮರ್ಪಿಸಿದ್ದಾರೆ. ಎಂದಿನಂತೆಯೇ ಅವರ ಆತಿಥ್ಯ ಉತ್ತಮವಾಗಿತ್ತು. ರಾಜ್ಯದ ಸೃಜನಶೀಲ ಜನರ ನಡುವೆ ಇರುವುದು ಯಾವತ್ತೂ ಸಂತೋಷದ ವಿಚಾರ. ಮಹಾಬಲಿಪುರಂನಲ್ಲಿ ಶೃಂಗಸಭೆ ಆಯೋಜಿಸಿದ್ದಕ್ಕೆ ತಮಿಳುನಾಡು ಸರ್ಕಾರಕ್ಕೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಗೋ ಬ್ಯಾಕ್‌ ಮೋದಿ ಅಭಿಯಾನದ ಹಿಂದೆ ಕುತಂತ್ರಿ ಪಾಕ್ ಕೈವಾಡ ಇರೋದು ಬಹಿರಂಗವಾಗಿದೆ. ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ದ್ವಿಪಕ್ಷೀಯ ಮಾತುಕತೆಗಾಗಿ ತಮಿಳುನಾಡಿನ ಮಾಮಲ್ಲಪುರಂಗೆ ಬರುವುದಕ್ಕೂ ಮೊದಲು ನಿನ್ನೆ ಟ್ವಿಟರ್‌ನಲ್ಲಿ ‘ಗೋ ಬ್ಯಾಕ್‌ ಮೋದಿ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿತ್ತು. ಇದರ ಹಿಂದೆ ಪಾಕಿಸ್ತಾನೀಯರು ಇದ್ದುದು ಎಂಬುದು ಇದೀಗ ಬಯಲಾಗಿದೆ. ಪಾಕ್‌ನ ಅನೇಕ ಟ್ವಿಟರ್‌ ಹ್ಯಾಂಡಲ್‌ಗಳಿಂದ ‘ಗೋ ಬ್ಯಾಕ್‌ ಮೋದಿ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್‌ ಮಾಡಲಾಗಿತ್ತು. ಮುಝಮ್ಮಿಲ್ ಅಸ್ಲಾಂ ಎಂಬ ಟ್ವಿಟರ್‌ ಹ್ಯಾಂಡಲ್‌ನಿಂದ, ‘ಗೋ ಬ್ಯಾಕ್‌ ಮೋದಿ ಫೇಸ್‌ಬುಕ್‌ನಲ್ಲಿ ಟ್ರೆಂಡಿಂಗ್ ಆಗಿದೆ. ನಾವೂ ಕೈಜೋಡಿಸೋಣ ಮತ್ತು ಇಮ್ರಾನ್ ಖಾನ್ ಅವರನ್ನು ಅಭಿನಂದಿಸೋಣ ಎಂದು ಟ್ವೀಟ್ ಮಾಡಲಾಗಿತ್ತು. ಈ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಎ ಪ್ಯಾಷನೇಟ್ ಪಾಕಿಸ್ತಾನಿ ಎಂದು ಉಲ್ಲೇಖಿಸಲಾಗಿದೆ.


Find Out More:

Related Articles: