ಹಳ್ಳಿ ಹಕ್ಕಿ ವಿರುದ್ದ ಮಹೇಶ್ ಗುಡುಗು

somashekhar
ಮೈಸೂರು: ಅತೃಪ್ತರ ರಾಜೀನಾಮೆಯಿಂದ ಶುರುವಾದ ಸಾ. ರಾ ಮಹೇಶ್ ಹಾಗೂ ವಿಶ್ವನಾಥ್ ಮಾತಿನ ಚಕಮಕಿ ಇಂದಿಗೂ ನಿಲ್ಲುತ್ತಿದ್ದ. ಬುಧವಾರ ಸಾ.ರಾ.ಮಹೇಶ್ ಮತ್ತೇ ಗುಡುಗಿದ್ದಾರೆ. ಅವರ ಮೇಲಿನ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಹೆಚ್. ವಿಶ್ವನಾಥ್ ನನ್ನ ಮೇಲೆ ಮಾಡಿದ ಕೀಳು ಮಟ್ಟದ ಆರೋಪದಿಂದ ಅತೀವ ಬೇಸರವಾಗಿತ್ತು. ಹೀಗಾಗಿ, ಸ್ಪೀಕರ್ ಕಚೇರಿಗೆ ಸೆಪ್ಟೆಂಬರ್ 18ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ. ಆಗ ಸ್ಪೀಕರ್ ಹೊರ ದೇಶದಲ್ಲಿದ್ದರು.  ಸ್ಪೀಕರ್  ವಿದೇಶದಿಂದ ಬಂದ ನಂತರ ನನ್ನನ್ನು ಸ್ಪೀಕರ್ ಮನವೊಲಿಸಿ ಕಳುಹಿಸಿದ್ದರು. ಇನ್ನೂ ನನ್ನ ರಾಜೀನಾಮೆ ಪತ್ರ ಸ್ಪೀಕರ್ ಕಚೇರಿಯಲ್ಲಿಯೇ ಇದೆ ಎಂದು ಹೇಳುವ ಮೂಲಕ ಶಾಸಕ ಸಾ.ರಾ.ಮಹೇಶ್​ ಕಿಡಿಕಾರಿದ್ದಾರೆ.  

ಮುಂದುವರಿದು, "ಜಿ.ಟಿ.ದೇವೇಗೌಡರು ವಿಶ್ವನಾಥ್​ ಒಳ್ಳೆಯವರಲ್ಲ, ಅವರನ್ನು ನಂಬಬೇಡ ಅಂತ ಹೇಳಿದ್ದರು. ಆದರೂ ನಾನು ಅವರನ್ನು ಪಕ್ಷಕ್ಕೆ ಕರೆತಂದೆ. ಅದಕ್ಕೆ ಅವರು ಹೀಗೆ ಪ್ರತಿಫಲ ನೀಡಿದರು. ಹೆಚ್. ವಿಶ್ವನಾಥ್  ಸಿದ್ದರಾಮಯ್ಯ ವಿರುದ್ಧ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು.  ಎಸ್.ಎಂ.ಕೃಷ್ಣ ವಿರುದ್ಧ ಪುಸ್ತಕ ಬರೆದಿದ್ದರು. ಕೊನೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮುಂದೆ ಕೈ ಮುಗಿದು ನನ್ನನ್ನು ಒಂದು ಬಾರಿ ಶಾಸಕರಾಗಿ ಮಾಡಿಬಿಡಿ ಅಂತ ಕೇಳಿದ್ದರು," ಎಂದು ತಿಳಿಸಿದ್ದಾರೆ. 
ದೇವರಾಜ ಅರಸು ಬಗ್ಗೆ ವಿಶ್ವನಾಥ್ ಇವತ್ತು ಮಾತನಾಡುತ್ತಾರೆ. ಅವತ್ತು ಅವರ ಮೊಮ್ಮಗ ಚುನಾವಣೆಗೆ ಬಂದಾಗ ಅವರನ್ನು ಹೇಗೆ ನಡೆಸಿಕೊಂಡಿದ್ದೀರಿ ಅಂತ ಒಮ್ಮೆ ಯೋಚನೆ ಮಾಡಿ" ಎಂದು ತಿರುಗೇಟು ನೀಡಿದರು.

ಗುರುವಾರ ಬೆಳಗ್ಗೆ 9ಗಂಟೆಗೆ ನಾನು ಚಾಮುಂಡಿಬೆಟ್ಟದಲ್ಲಿ ಇರುತ್ತೇನೆ. ಅವರು ಬರಲಿ ಆಣೆ ಮಾಡಲಿ. ನನ್ನಿಂದ ಅವರ ಕುಟುಂಬಸ್ಥರು ಹಣ ಪಡೆದಿಲ್ಲ ಎನ್ನುವುದನ್ನು ಅವರು ದೇವರ ಮುಂದೆ ಹೇಳಲಿ. ನಾನು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ ಅಂತ ಪ್ರಮಾಣ ಮಾಡಲಿ. ಅಲ್ಲಿಯೇ ನಾನು ನಾಡಿನ ಜನರ ಮುಂದೆ ಬೇಷರತ್ ಕ್ಷಮೆ ಕೇಳುತ್ತೇನೆ ಎಂದು ಸಾ.ರಾ.ಮಹೇಶ್ ಸವಾಲು ಹಾಕಿದ್ದಾರೆ. ಹುಣಸೂರಿಗೆ ಹೊಸ ಡಿವೈಎಸ್​ಪಿ ಹಾಕಿಸಿ ಕೊಂಡಿದ್ದೀರಿ, ಅದಕ್ಕೆ ಎಷ್ಟು ಹಣ ತೆಗೆದು ಕೊಂಡಿದ್ದೀರಿ? ಕುಮಾರಣ್ಣನ ಮುಂದೆ ಎಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದೀರಿ? ಎಲ್ಲವನ್ನೂ ನಾನು ಅಲ್ಲಿಯೇ ಹೇಳುತ್ತೇನೆ ಎಂದಿದ್ದಾರೆ.


Find Out More:

Related Articles: