ಮೋದಿಗೆ ಪ್ರಶ್ನೆ ಮಾಡಿದ ನಟಿಯಾರು?

somashekhar
  
ನರೇಂದ್ರ ಮೋದಿ, ಪ್ರಧಾನಿ ನರೇಂದ್ರ ಅಂದ್ರೇನೆ ಒಂದು ಬ್ರಾಂಡ್ ಆಗಿದೆ ಈಗ. ರಾಷ್ಟ್ರಾದ್ಯಂತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಖ್ಯಾತಿ ಪಡೆದಿದ್ದಾರೆ. ಇತ್ತೀಚೆಗೆ ನರೇಂದ್ರ ಮೋದಿ ಬಾಲಿವುಡ್ ನಟ ನಟಿಯರ ಜೊತೆಗೆ ಕಾಣಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ದಕ್ಷಿಣ ಭಾರತದ ಈ ನಟಿ ಮೋದಿಗೆ ಪ್ರಶ್ನೆಯೊಂದು ಕೇಳಿದ್ದಾರೆ.  ಇತ್ತೀಚಿಗೆ ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ಸ್ಟಾರ್ಸ್ ಜೊತೆ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮಣಿರತ್ನಂ ಸೇರಿದಂತೆ, ಮೋದಿ ವಿರುದ್ದ ಮಾತನಾಡಿದ್ದ 49ಗಣ್ಯರ ವಿರುದ್ಧ ಬಾಲಿವುಡ್ ಚಿತ್ರರಂಗಕ್ಕೆ ಸಿಕ್ಕ ಬೆಂಬಲ ಮತ್ತು ಸಹಕಾರ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಸಿಗುತ್ತಿಲ್ಲ ಎನ್ನುವುದು ಅನೇಕರ ಬೇಸರ. ಈ ಬಗ್ಗೆ ದಕ್ಷಿಣ ಭಾರತೀಯ ಚಿತ್ರರಂಗ ಖ್ಯಾತ ನಟ ರಾಮ್ ಚರಣ್ ಪತ್ನಿ ಉಪಾಸನ ಪ್ರಧಾನಿಗೆ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಬೇಸರ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

"ಪ್ರೀತಿಯ ನರೇಂದ್ರ ಮೋದಿಜೀ. ದಕ್ಷಿಣ ಭಾರತದಲ್ಲಿ ಇರುವ ನಾವು ಕೂಡ ನಿಮ್ಮನ್ನು ಮೆಚ್ಚುತ್ತೇವೆ. ನಮ್ಮ ಪ್ರಧಾನಿಯಾಗಿರುವುದಕ್ಕೆ ಹೆಮ್ಮ ಪಡುತ್ತೇವೆ. ಪ್ರಮುಖ ವ್ಯಕ್ತಿಗಳು ಮತ್ತು ಸಾಂಸ್ಕೃತಿಕ ಪ್ರಾತಿನಿಧ್ಯ ಕೇವಲ ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದೆ. ದಕ್ಷಿಣ ಭಾರತೀಯ ಚಲನಚಿತ್ರೋದ್ಯಮವನ್ನು ನಿರ್ಲಕ್ಷಿಸಲಾಗಿದೆ. ನಾನು ನನ್ನ ಭಾವನೆಗಳನ್ನು ನೋವಿನಿಂದ ಹೇಳಿಕೊಳ್ಳುತ್ತಿದ್ದೇನೆ. ಇದನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಲಾಗಿದೆ ಎಂದು ಭಾವಿಸುತ್ತೇನೆ. ಜೈ ಹಿಂದ್."
'ಕೂಲಿ ನಂಬರ್-1' ಚಿತ್ರತಂಡವನ್ನ ಪ್ರಶಂಸಿದ ಪ್ರಧಾನಿ ಮೋದಿ ಎಂದು ದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ನಟರಾದ ಆಮೀರ್ ಖಾನ್, ಶಾರುಖ್ ಖಾನ್, ಅಲಿಯಾ ಭಟ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಪೋಟೋಸ್ ಫುಲ್ ವೈರಲ್ ಆಗಿದ್ದವು.


Find Out More:

Related Articles: