ಡಿ. ಕೆ ಶಿವಕುಮಾರ್ ಮತ್ತೇ ಜೈಲಿಗೆ.. ಯಾಕೆ ಗೊತ್ತಾ?

somashekhar
ಅಕ್ರಮ ಹಣ ಪ್ರಕರಣದಲ್ಲಿ ಬುಧವಾರವಷ್ಟೇ 48 ದಿನಗಳ ಜೈಲುವಾಸ ಅನುಭವಿಸಿ ಇದೀಗ ಬಿಡುಗಡೆಯಾಗಿರುವ ಮಾಜಿ ಸಚಿವ ಡಿ. ಕೆ ಶಿವಕುಮಾರ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಡಿ.ಕೆ. ಶಿವಕುಮಾರ್ ಇಡಿ ಬಂಧನದಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಅವರನ್ನು ಬಂಧಿಸಲು ಸಿಬಿಐ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುವ ಇದೇ ದಿನಗಳಲ್ಲಿ ಡಿಕೆಶಿ ವಿರುದ್ಧ ಸಿ.ಪಿ. ಯೋಗೇಶ್ವರ್ ರಾಶಿ ರಾಶಿ ದಾಖಲೆಗಳನ್ನು ಸಿಬಿಐ ಅಧಿಕಾರಿಗಳಿಗೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿ ಕಳೆದ ಎರಡು ತಿಂಗಳಿನಿಂದ ಇಡಿ ವಶದಲ್ಲಿದ್ದು ಬುಧವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಒಂದು ಕಾಲದ ಗೆಳೆಯ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಮತ್ತೆ ಮಗ್ಗಲ ಮುಳ್ಳಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಡಿ.ಕೆ. ಶಿವಕುಮಾರ್ ಇಡಿ ಬಂಧನದಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಅವರನ್ನು ಬಂಧಿಸಲು ಸಿಬಿಐ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುವ ಇದೇ ದಿನಗಳಲ್ಲಿ ಡಿಕೆಶಿ ವಿರುದ್ಧ ಸಿ.ಪಿ. ಯೋಗೇಶ್ವರ್ ರಾಶಿ ರಾಶಿ ದಾಖಲೆಗಳನ್ನು ಸಿಬಿಐ ಅಧಿಕಾರಿಗಳಿಗೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಬಿಜೆಪಿ ಸರ್ಕಾರದಲ್ಲಿ ಯೋಗೇಶ್ವರ್ ಅರಣ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಕನಕಪುರ ಕ್ಷೇತ್ರದಲ್ಲಿ ಡಿಕೆಶಿ ಒಡೆತನದ ಕಲ್ಲುಗಣಿಗಾರಿಕೆಗಳ ಮೇಲೆ ಸಾಕಷ್ಟು ದಾಳಿ ನಡೆಸಿದ್ದರು. ಅಲ್ಲದೆ, ಕಾನೂನು ಬಾಹೀರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಲವು ಕಲ್ಲುಗಣಿಗಾರಿಕೆಗಳನ್ನ ಸ್ಥಗಿತಗೊಳಿಸಿದ್ದರು. ಈ ಪ್ರಕರಣದ ಕುರಿತು ಎಲ್ಲಾ ದಾಖಲೆಗಳು ಯೋಗೇಶ್ವರ್ ಅವರ ಬಳಿ ಇದ್ದು, ಕೇಂದ್ರ ಬಿಜೆಪಿ ನಾಯಕರ ಮೂಲಕ ಈ ದಾಖಲೆಗಳನ್ನು ಅವರು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. 

2006ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕನಕಪುರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಅರಣ್ಯಭೂಮಿ ಒತ್ತೂವರಿಯನ್ನು ಪತ್ತೆಮಾಡಲು ಸಲುವಾಗಿ ಯು.ವಿ. ಸಿಂಗ್ ಆಯೋಗವನ್ನು ರಚಿಸಿದ್ದರು. ಆದರೆ, ಯು.ವಿ.ಸಿಂಗ್ ವರದಿಯನ್ನ ನಂತರ ಅಧಿಕಾರ ನಡೆಸಿದ ಸರ್ಕಾರಗಳು ಪರಿಗಣಿಸಿರಲಿಲ್ಲ. ಈ ಎಲ್ಲದರಿಂದ ಡಿ.ಕೆ ಶಿವಕುಮಾರ್ ಮತ್ತೇ ಜೈಲು ಪಾಲಾಗುವಂತೆ ಗೋಚರಿಸುತ್ತವೆ. ತಮ್ಮ ಡಿ.ಕೆ ಸುರೇಶ್ ರಿಗೂ ಸಂಕಷ್ಟ ಕಾಡಲಿದೆಯಂತೆ. 




Find Out More:

Related Articles: