ಹರಿಯಾಣದಲ್ಲಿ ಸರ್ಕಾರ ರಚಿಸುತ್ತಾ ಕಾಂಗ್ರೆಸ್‌

somashekhar
ಲೋಕಸಭಾ ಚುನಾವಣೆಯ ನಂತರ ಮಹಾಚುನಾವಣೆಯಾಗಿ ಬಿಂಬಿತವಾಗಿದ್ದ ಮಹಾರಾಷ್ಟ್ರ ಹರಿಯಾಣ ಚುನಾವಣಾ ಫಲಿತಾಂಶ ಬುಧವಾರವಷ್ಟೇ ಪ್ರಕಟವಾಗಿದೆ. ಮಹಾರಾಷ್ಟ್ರದಲ್ಲಿ ಪೂರ್ಣ ಬಹುಮತ ಪಡೆದಿರುವ ಎನ್.ಡಿ.ಎ ಸರ್ಕಾರ ರಚಿಸಲು ಮುಂದಾಗಿದೆ. ಮತ್ತೊಂದೆಡೆ ಸ್ಪಷ್ಟವಾಗಿ ಬಹುಮತ ಸಿಗದ ಹರಿಯಾಣದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತೆ ಗೊತ್ತಾ. 

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಯ ಎಣಿಕೆಯ ಅಂತಿಮ ಪ್ರವೃತ್ತಿಗಳು ಹೊರಬರುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ರಚಿಸಲು ಸಕ್ರಿಯವಾಗಿದ್ದು, ಪಕ್ಷದೊಳಗಿನ ಚಟುವಟಿಕೆ ತೀವ್ರಗೊಂಡಿದೆ. ಎಲ್ಲರು ಫುಲ್ ಆಕ್ಟಿವ್ ಆಗಿ ಸರ್ಕಾರ ರಚನೆಯ ಬಗ್ಗೆ ಯೋಚಿಸುತ್ತಿದ್ದಾರೆ.  ಸರ್ಕಾರ ರಚಿಸಲು ಕಾಂಗ್ರೆಸ್ ಪರವಾಗಿ ಜೆಜೆಪಿಯನ್ನು ಸಂಪರ್ಕಿಸಲಾಗಿದೆ. ಕಾಂಗ್ರೆಸ್ನ ಉನ್ನತ ನಾಯಕರು ಸರ್ಕಾರ ರಚಿಸುವ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.

ಇದರ ಅಡಿಯಲ್ಲಿ ಭೂಪಿಂದರ್ ಸಿಂಗ್ ಹೂಡಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ನ ಚಾಣಕ್ಯ ಅಹ್ಮದ್ ಪಟೇಲ್ ಮತ್ತು ಗುಲಾಮ್ ನಬಿ ಆಜಾದ್ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ, ಹರಿಯಾಣ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾದ ಕುಮಾರಿ ಸೆಲ್ಜಾ ಕೂಡ ಅಹ್ಮದ್ ಪಟೇಲ್ ಅವರನ್ನು ಭೇಟಿಯಾದರು. ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡ ಅವರು ಮುಂಚೂಣಿಯಲ್ಲಿದ್ದಾರೆ. 

ವಾಸ್ತವವಾಗಿ, ಮತ ಎಣಿಕೆಯ ಆರಂಭಿಕ ಪ್ರವೃತ್ತಿಗಳು ಜನ್ನಾಯಕ್ ಜನತಾ ಪಕ್ಷ (ಜೆಜೆಪಿ) ಕಿಂಗ್ ಮೇಕರ್ ಎಂದು ಸಾಬೀತು ಪಡಿಸಿವೆ. ಬಳಿಕ ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ಸಂಖ್ಯೆಗಾಗಿ ಕಾಂಗ್ರೆಸ್ ಜೆಜೆಪಿಯನ್ನು ಸಂಪರ್ಕಿಸಿತು. ಸರ್ಕಾರ ರಚಿಸಲು ಜೆಜೆಪಿ ನಾಯಕ ದುಶ್ಯಂತ್ ಚೌತಲಾ ಅವರನ್ನು ಕಾಂಗ್ರೆಸ್ ಸಂಪರ್ಕಿಸಿದೆ ಎಂದು ಮೂಲಗಳಿಂದ ವರದಿಯಾಗಿದೆ. ಇದೇ ವೇಳೆ ಆತುರದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ದುಶ್ಯಂತ್ ಚೌತಲಾ ಹೇಳಿದ್ದಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಜೆಜೆಪಿ ನಾಳೆ ಶಾಸಕರ ಸಭೆ ಕರೆದಿದೆ. ಜೆಜೆಪಿ ನಾಳೆ ಶಾಸಕರ ಸಭೆ ಕರೆದು ಶಾಸಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಯಾರೊಂದಿಗೆ ಕೈ ಜೋಡಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿ ಕೊಂಡಿದೆ. ಯಾವ ಸರ್ಕಾರ ಬರುತ್ತದೆಂಬುದು  ಕಾದು ನೋಡ ಬೇಕಾಗಿದೆ.


Find Out More:

Related Articles: