ಕನಕಪುರ ಬಂಡೆಯಿಂದ ಸ್ವ ಕ್ಷೇತ್ರದ ದೇಗುಲ ದರ್ಶನ

frame ಕನಕಪುರ ಬಂಡೆಯಿಂದ ಸ್ವ ಕ್ಷೇತ್ರದ ದೇಗುಲ ದರ್ಶನ

somashekhar
ರಾಮನಗರ: ಜಾಮೀನಿನ ಆಧಾರದ ಮೇಲೆ 48ದಿನಗಳ ಜೈಲುವಾಸ ಕ್ಕೆ ಟಾಟಾ ಮಾಡಿ ಸ್ವ ಕ್ಷೇತ್ರಕ್ಕೆ ಬಂದಿಳಿದ ಮಾಜಿ ಸಚಿವ ಡಿ. ಕೆ ಶಿವಕುಮಾರ್ ಅವರಿಗೆ ಸ್ವಕ್ಷೇತ್ರದ ಜನರಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಹಾರ ಹಾಕಿ, ಶಿಳ್ಳೆ ಹೊಡೆದು ಸ್ವೀಟ್ ಹಂಚಿದ ಅಭಿಮಾನಿಗಳು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.  ಸಾವಿರಾರು ಸಂಖ್ಯೆಯಲ್ಲಿ ಡಿಕೆಶಿ ಬೆಂಬಲಿಗರು ಹೂವಿನ ಸುರಿಮಳೆಯನ್ನೆ ಗೈದರು. ಕನಕಪುರದ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿ ತಮ್ಮ ಹುಟ್ಟೂರಾದ ದೊಡ್ಡಾಲಳ್ಳಿ ಗ್ರಾಮಕ್ಕೆ ಕುಟುಂಬ ಸಮೇತರಾಗಿ ತೆರಳಿ ತಂದೆ ಸಮಾಧಿಗೆ ಎಡೆ ಇಟ್ಟರು.

ಅದಕ್ಕೂ ಮೊದಲಿಗೆ ಹಾರೋಹಳ್ಳಿಯಲ್ಲಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅಭಿಮಾನಿಗಳು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಡಿಕೆಶಿಯನ್ನು ಮೆರವಣಿಗೆ ನಡೆಸಿದರು. ಡ್ಯಾನ್ಸ್ ಮಾಡಿದರು.  ಡಿಕೆಶಿ ಮನೆ ದೇವರಾದ ಕೆಂಕೇರಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಕೆ ಹರಿಕೆ ತೀರಿಸಿದರು. ಈ ವೇಳೆ ತಮ್ಮ ಇಬ್ಬರು ಮಕ್ಕಳು ಹಾಗು ಸಹೋದರ ಜತೆಗಿದ್ದರು. ನಂತರ ಕನಕಪುರದಲ್ಲಿನ ಮರಳೇಗವಿ ಮಠಕ್ಕೆ ತೆರಳಿದ ಅವರು ಮುಮ್ಮಡಿ ಶ್ರೀಗಳ ಆರ್ಶೀವಾದ ಪಡೆದರು.

ಬಳಿಕ ಹುಟ್ಟೂರು ದೊಡ್ಡ ಆಲಹಳ್ಳಿ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ತದನಂತರ ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ, ಹೂವಿನ ಮಳೆ ಸುರಿಮಳೆಯನ್ನೆ ಗೈದು ಪೂರ್ಣ ಕುಂಭ ಸ್ವಾಗತ ನೀಡಲಾಯಿತು.
ನಂತರ ತಮ್ಮ ತಂದೆ ಕೆಂಪೇಗೌಡರ ಸಮಾಧಿಗೆ ಕುಟುಂಬ ಸಮೇತರಾಗಿ ತೆರಳಿದ ಡಿಕೆಶಿ ಕುಟುಂಬ ಎಡೆ ಇಟ್ಟರು. ಈ ವೇಳೆ ಮಾತನಾಡಿದ ಅವರು, ಕ್ಷೇತ್ರದ ಜನತೆ ತೋರಿಸಿದ ಪ್ರೀತಿಗೆ ನಾನು ನಮ್ಮ ಎಲ್ಲ ಮುಖಂಡರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಹಿರಿಯರ ಪೂಜೆ ಸಲ್ಲಿಸಲು ಅವಕಾಶ ಸಿಕ್ಕಿರಲಿಲ್ಲ. ಅಲ್ಲಿ ನಾನು, ಕುಟುಂಬದವರು ಪೂಜೆ ಜತೆ ಹೋಗಿ ಪೂಜೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ದೊಡ್ಡಾಲಳ್ಳಿ ಗ್ರಾಮದಿಂದ ನೇರವಾಗಿ ಕಬ್ಬಾಳಮ್ಮ  ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದರು. ನಂತರ ದೇಗುಲ ಮಠಕ್ಕೆ ತೆರಳಿದ ಡಿಕೆಶಿ ಅಲ್ಲಿ ಶ್ರೀಗಳನ್ನು ಭೇಟಿಯಾಗಿ ಆರ್ಶೀವಾದ ಪಡೆದರು.


Find Out More:

Related Articles:

Unable to Load More